• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಭಾಷಣ ಸುಳ್ಳುಗಳ ಕಂತೆ: ಟ್ವಿಟ್ಟರ್‌ನಲ್ಲಿ ಸತ್ಯದರ್ಶನ

By Manjunatha
|
   ಸಂಸತ್ತಿನಲ್ಲಿ ನರೇಂದ್ರ ಮೋದಿ ಭಾಷಣದ ಬಗ್ಗೆ ಟ್ವಿಟ್ಟರ್ ನಲ್ಲಿ ಲೇವಡಿ | Oneindia Kannada

   ನವದೆಹಲಿ, ಜುಲೈ 21: ನಿನ್ನೆ ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಅಂತಿಮದಲ್ಲಿ ನರೇಂದ್ರ ಮೋದಿ ಬರೋಬ್ಬರಿ 2 ಗಂಟೆಗೂ ಹೆಚ್ಚು ಕಾಲ ಮಾತನಾಡಿ. ವಿಶ್ವಾಸ ಮತ ಗೆದ್ದು ಬೀಗಿದ್ದಾರೆ.

   ಸತತ 2 ಗಂಟೆಗೂ ಹೆಚ್ಚು ಕಾಲ ಮಾತನಾಡಿದ ಮೋದಿ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಸಂಸತ್‌ನ ಮುಂದಿರಿಸಿದರು. ಆದರೆ ಅದರಲ್ಲಿ ಸುಳ್ಳೆಷ್ಟು, ಸತ್ಯವೆಷ್ಟು ಎಂಬ ಚರ್ಚೆ ಟ್ವಿಟ್ಟರ್‌ನಲ್ಲಿ ಬಿರುಸಿನಿಂದ ನಡೆಯುತ್ತಿದೆ.

   '#modiliesinparliament' ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದ್ದು ಲಕ್ಷಾಂತರ ಜನ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸಹ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಮೋದಿ ಭಾಷಣದಲ್ಲಿದ್ದ ಹುಳುಕುಗಳನ್ನು ಎತ್ತಿ ತೋರುತ್ತಿದೆ.

   ಕನ್ನಡ ದಿನಪತ್ರಿಕೆಗಳು ಕಂಡಂತೆ ಅಪ್ಪುಗೆ, ಕಣ್ಮಿಟುಕು ಮತ್ತು ಅವಿಶ್ವಾಸ!

   ಮೋದಿ ಅವರು ನಿನ್ನೆ ತಮ್ಮ ಸುಧೀರ್ಘ ಭಾಷಣದಲ್ಲಿ ಹಲವು ಅಂಕಿ-ಅಂಶಗಳನ್ನು ನೀಡಿದರು. ಅದರಲ್ಲಿ ಎಷ್ಟು ಸರಿ ಎಷ್ಟು ತಪ್ಪು ಎಂಬ ಮೌಲ್ಯಮಾಪನ ಟ್ವೀಟ್‌ಗಳು ಇಲ್ಲಿವೆ.

   ಸರ್ಜಿಕಲ್ ಸ್ಟ್ರೈಟ್ ಬಗ್ಗೆ ರಾಹುಲ್ ಮಾತನಾಡಲಿಲ್ಲ

   ಮೋದಿ ತಮ್ಮ ಭಾಷಣದಲ್ಲಿ 'ನೀವು ಸರ್ಜಿಕಲ್ ಸ್ಟ್ರೈಕ್ ಅನ್ನು ಜುಮ್ಲಾ ಸ್ಟ್ರೈಕ್' ಎಂದು ಹೇಗೆ ಕರೆಯುತ್ತೀರಿ ಎಂದು ಭಾವನಾತ್ಮಕವಾಗಿ ಪ್ರಶ್ನಿಸಿದರು ಆದರೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಸರ್ಜಿಕಲ್ ಸ್ಟ್ರೈಕ್‌ ನ ಪ್ರಸ್ತಾಪವನ್ನೇ ಮಾಡಿರಲಿಲ್ಲ.

   ಸಂಸತ್‌ನಲ್ಲಿ ಮೋದಿ ಭಾಷಣ : 7 ಪ್ರಮುಖ ಹೇಳಿಕೆಗಳು

   ಪಾಸ್ ಪೋರ್ಟ್ ಬಗ್ಗೆ ಸುಳ್ಳು

   ಮೋದಿ ಅವರು ಭಾಷಣದಲ್ಲಿ ಭಾರತದ ಪಾಸ್‌ಪೋರ್ಟ್ 2014ರಿಂದ ಶಕ್ತಿಯುತವಾಗಿದೆ ಎಂದು ಹೇಳಿದ್ದರು. ಆದರೆ ಟ್ವಿಟ್ಟಿಗರು ಇದನ್ನು ವಿರೋಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪಾಸ್‌ಪೋರ್ಟ್‌ಗೆ 46 ಅಂಕಗಳಿದೆ ಈ ಮುಂಚೆ 2014ರಲ್ಲಿ 52 ಇತ್ತು ಎಂದಿದೆ. ಕಾಂಗ್ರೆಸ್ ಮಾತ್ರವಲ್ಲದೆ ಹಲವು ಮಂದಿ ಇದನ್ನು ಟೀಕಿಸಿದ್ದಾರೆ.

   ಸೈನಿಕರಿಗೆ ಸುಳ್ಳು ಹೇಳಿದ ಮೋದಿ

   ಸೈನಿಕರಿಗೆ ನೀಡಬೇಕೆಂಬ ಆಗ್ರಹವಿದ್ದ 'ಒನ್ rank ಒನ್ ಪೆನ್ಶನ್' (OROP) ಬಗ್ಗೆ ಸಹ ಮೋದಿ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ ಅಲ್ಲದೆ ಅದಕ್ಕೆ ಸಂಬಂಧಿಸಿದ ಮಾಹಿತಿ ಪೂರ್ಣ ಲೇಖನವನ್ನು ತನ್ನ ಟ್ವೀಟ್‌ನೊಂದಿಗೆ ಲಗತ್ತಿಸಿದೆ.

   ಮಣ್ಣು ಕಾರ್ಡ್‌ ಬಗ್ಗೆ ಮೋದಿ ಸುಳ್ಳು

   ಮಣ್ಣು ಪರೀಕ್ಷೆ ಕಾರ್ಡ್‌ ಬಗ್ಗೆ ಮೋದಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಸೇರಿ ಹಲವು ಟ್ವಿಟ್ಟಿಗರು ಆರೋಪಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆಯೇ ರೈತರಿಗೆ ಮಣ್ಣು ಪರೀಕ್ಷೆ ಕಾರ್ಡ್ ವಿತರಿಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೆ ಬೇವು ಮಿಶ್ರಿತ ಯೂರಿಯಾ ಸಹ ಎನ್‌ಡಿಎ ಮಾಡಿದ್ದಲ್ಲ, ಯುಪಿಎ ಮಾಡಿದ್ದು ಎಂದು ಅವರು ಹೇಳಿದ್ದಾರೆ.

   ಮುದ್ರಾ ಯೋಜನೆಗೆ ಶಕ್ತಿಯ ಕೊರತೆ

   ಮುದ್ರಾ ಯೋಜನೆಯ ಬಗ್ಗೆ ಮೋದಿ ಅವರು ಸದಾ ಎದೆತಟ್ಟಿಕೊಳ್ಳುತ್ತಾರೆ ಆದರೆ ಮುದ್ರಾ ಯೋಜನೆಯ ಸರಾಸರಿ ಸಾಲ ಕೇವಲ 50,000 ಅಷ್ಟೆ ಅದರಿಂದ ಹೊಸ ಉದ್ಯಮ ಸ್ಥಾಪಿಸುವುದು ಕಷ್ಟಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ.

   ಕುಸಿತ ಕಂಡಿರುವ ಭಾರತದ ಪಾಸ್‌ಪೋರ್ಟ್‌

   ಮೋದಿ ಅವರು ಭಾರತದ ಪಾಸ್‌ಪೋರ್ಟ್‌ ಬಗ್ಗೆ ಸುಳ್ಳು ಹೇಳಿದ್ದಾರೆ ಪಾಸ್‌ಪೋರ್ಟ್‌ ranking 74ನೇ ಸ್ಥಾನದಿಂದ 81ನೇ ಸ್ಥಾನಕ್ಕೆ ಕುಸಿದಿದೆ ಎಂದು ಶಮಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ.

   ಮೋದಿ ಸುಳ್ಳಿನ ಪಟ್ಟಿ

   ನಿನ್ನೆ ಸಂಸತ್‌ನಲ್ಲಿ ಮೋದಿ ಮಾಡಿದ ಭಾಷಣದಲ್ಲಿ ಹೇಳಿದ ಸುಳ್ಳುಗಳ ಸಣ್ಣ ಪಟ್ಟಿಯಲ್ಲಿ ವಿನಯ್ ಎಂಬುವರು ಕೊಟ್ಟಿದ್ದಾರೆ. 125 ಕೋಟಿ ಜನ ನಮ್ಮನ್ನು ಆರಿಸಿ ಕಳುಹಿಸಿದ್ದಾರೆ ಎಂದು ಮೋದಿ ಹೇಳಿದರು. ಆದರೆ ಅದು ದೇಶದ ಜನಸಂಖ್ಯೆ ಮತದಾರರ ಸಂಖ್ಯೆ ಅಲ್ಲ. ಪಾಸ್‌ಪೋರ್ಟ್‌ ಶಕ್ತಿ ಪಡೆದುಕೊಂಡಿದೆ ಎಂದರು ಆದರೆ ಅದು ಸುಳ್ಳು ಮೋದಿ ನಂತರ ಅದಿನ್ನೂ ದುರ್ಬಲವಾಗಿದೆ. 20 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ ಎಂದು ಹೇಳಿದರು. ಅದೂ ಸಹ ಸುಳ್ಳು ಅದಕ್ಕೆ ಆಧಾರವೇ ಇಲ್ಲ. ಉದ್ಯೋಗ ಸೃಷ್ಠಿ ಮಾಡಿದ್ದೇವೆ ಎಂದರು ಆದರೆ ಸಮೀಕ್ಷೆ ಪ್ರಕಾರ ದೇಶದಲ್ಲಿ ಗಂಟೆಗೆ 400 ಉದ್ಯೋಗ ಮಾತ್ರ ಸೃಷ್ಠಿಯಾಗುತ್ತಿದೆ. ಚೀನಾದಲ್ಲಿ ಗಂಟೆಗೆ 50000 ಉದ್ಯೋಗ ಸೃಷ್ಠಿಯಾಗುತ್ತದೆ. ಮೋದಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದರು, ರಫೇಲ್ ಹಗರಣದ ಕತ್ತಿ ಅವರ ಮೇಲಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Narendra Modi did historical 2 hour speech in parliament yesterday. now social media people picking up the lies which Modi told in speech yesterday. #modiliesinparliament hashtag is trending in twitter.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more