ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮುಂಚೂಣಿ ಕಾರ್ಯಕರ್ತರ ತರಬೇತಿಗೆ ಮೋದಿ ಚಾಲನೆ

|
Google Oneindia Kannada News

ನವದೆಹಲಿ, ಜೂನ್ 18: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿರುವ ಮುಂಚೂಣಿ ಕಾರ್ಯಕರ್ತರಿಗೆ ಆರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ (crash course programme) ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು.

ವರ್ಚಯಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದವು. ರೂಪಾಂತರಗಳು ಇನ್ನಷ್ಟು ಸವಾಲುಗಳನ್ನು ಒಡ್ಡಬಹುದು. ಹೀಗಾಗಿ ನಾವು ಎಚ್ಚರದಿಂದಿರಬೇಕು," ಎಂದು ಹೇಳಿದರು.

ಕೊರೊನಾ ಪಿಡುಗಿನ ಮಧ್ಯ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೇಗೆ?: ಮೋದಿಕೊರೊನಾ ಪಿಡುಗಿನ ಮಧ್ಯ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೇಗೆ?: ಮೋದಿ

"ಕೊರೊನಾ ಅಲೆಗಳ ನಿರ್ವಹಣೆಗೆ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ತರಬೇತಿ ನೀಡುವುದು ಅವಶ್ಯಕವಾಗಿದೆ. ಹೀಗಾಗಿ ಸುಮಾರು ಒಂದು ಲಕ್ಷ ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ" ಎಂದು ತಿಳಿಸಿದರು.

Modi Launches Crash Course To Train Covid Frontline Workers

ಮುಂಚೂಣಿ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ ಪ್ರಧಾನಿ, ದೇಶದಲ್ಲಿ ಒಂದು ಲಕ್ಷ ಮುಂಚೂಣಿ ಹೋರಾಟಗಾರರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. 26 ರಾಜ್ಯಗಳಲ್ಲಿನ 111 ತರಬೇತಿ ಕೇಂದ್ರಗಳಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಸುಮಾರು ಒಂದು ಲಕ್ಷ ಕೊರೊನಾ ವಾರಿಯರ್‌ಗಳಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ. ನರ್ಸಿಂಗ್, ಮನೆಯಲ್ಲಿಯೇ ಆರೈಕೆ, ಅತ್ಯಾಧುನಿಕ ಆರೈಕೆ, ತುರ್ತು ರಕ್ಷಣೆ, ಪರೀಕ್ಷಾ ಮಾದರಿ ಸಂಗ್ರಹ, ವೈದ್ಯಕೀಯ ತಾಂತ್ರಿಕ ನೆರವು ಹೀಗೆ ಹಲವು ಕೌಶಲ ತರಬೇತಿ ನೀಡುವ ಯೋಜನೆಯಿದೆ ಎಂದು ವಿವರಿಸಿದರು.

ಮೂರು ತಿಂಗಳ ಅವಧಿಯಲ್ಲಿ ತರಬೇತಿ ಪೂರ್ಣಗೊಳ್ಳಲಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 3.0 ಅಡಿಯಲ್ಲಿ ಸುಮಾರು 276 ಕೋಟಿ ರೂ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.

ಈ ಕಾರ್ಯಕ್ರಮದಡಿ ಭವಿಷ್ಯದ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯೇತರ ಆರೋಗ್ಯ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

English summary
Prime Minister Narendra Modi on Friday launched six customized crash course programme under Skill India to train over 1 lakh Covid frontline workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X