ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಣ್ಣದ ಹಬ್ಬ ಹೋಳಿ ಹಬ್ಬಕ್ಕೆ ಶುಭ ಹಾರೈಸಿದ ಮೋದಿ, ಕೋವಿಂದ್

|
Google Oneindia Kannada News

Recommended Video

ಹೋಳ ಹಬ್ಬದ ಶುಭ ಹಾರೈಸಿದ ಮೋದಿ, ಕೋವಿಂದ್ | Oneindia Kannada

ನವದೆಹಲಿ, ಮಾರ್ಚ್ 02: ದೇಶದಾದ್ಯಂತ ಹೋಳಿ ಹಬ್ಬದ ಸಡಗರ ತುಂಬಿ ತುಳಿಕಾಡುತ್ತಿದೆ. ಎಲ್ಲೆಡೆಯೂ ಸಂಭ್ರಮದ ಓಕುಳಿ ಹರಿಯುತ್ತಿದೆ. ಹೋಳಿ ಸಂಭ್ರಮದಲ್ಲಿ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.

ಹೋಳಿ ಎಂಬ ರಂಗಿನ ಹಬ್ಬದ ರಂಗು ರಂಗಾದ ಚಿತ್ರಗಳು... ಹೋಳಿ ಎಂಬ ರಂಗಿನ ಹಬ್ಬದ ರಂಗು ರಂಗಾದ ಚಿತ್ರಗಳು...

'ಎಲ್ಲ ದೇಶ ಬಂಧುಗಳಿಗೂ ಹೋಳಿ ಹಬ್ಬದ ಶುಭಾಶಯಗಳು' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರು ಒಂದೇ ವಾಕ್ಯದಲ್ಲಿ ಶುಭಾಶಯ ಹೇಳಿ ಮುಗಿಸಿದ್ದರೆ, ರಾಷ್ಟ್ರಪತಿ ಕೋವಿಂದ್ ಮತ್ತಷ್ಟು ಆತ್ಮೀಯವಾಗಿ ಶುಭ ಕೋರಿದ್ದಾರೆ.

ಹೋಳಿ ಹಬ್ಬಕ್ಕೆ ಎಲ್ಲಾ ನಾಗರಿಕರಿಗೂ ಹಾರ್ದಿಕ ಶುಭ ಹಾರೈಕೆಗಳು. ಬಣ್ಣಗಳ ಹಬ್ಬ ಹೋಳಿ ಸಮಾಜದಲ್ಲಿ ಸಾಮರಸ್ಯ ಸೃಷ್ಟಿಸಲಿ. ಈ ಹಬ್ಬ ಎಲ್ಲೆಲ್ಲೂ ಶಾಂತಿ, ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ ಕೋವಿಂದ್.

ದೇಶದೆಲ್ಲೆಡೆ ಇಂದು ಕಾಮನ ಹಬ್ಬ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಪಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಣೆಗೊಳ್ಳುವ ಈ ಹಬ್ಬವನ್ನು ಈ ವರ್ಷ, ಕೆಲವೆಡೆ ಮಾರ್ಚ್ 1 ರಂದೂ ಆಚರಿಸಲಾಗಿದೆ.

ಒಲವಿನ ಬಣ್ಣ ಬಳಿಯಲು ಮತ್ತೆ ಬಂತು ಹೋಳಿ!ಒಲವಿನ ಬಣ್ಣ ಬಳಿಯಲು ಮತ್ತೆ ಬಂತು ಹೋಳಿ!

English summary
Prime minsiter Narendra Modi and president of India, Ram nath Kovind wished for auspicious holi festival on their twitter accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X