ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಜೀ ಆಶೀರ್ವಾದ ಪಡೆದು ನೀರವ್ ಮೋದಿ ಪರಾರಿ : ಖರ್ಗೆ

|
Google Oneindia Kannada News

Recommended Video

ಮೋದಿಜೀ ಆಶೀರ್ವಾದ ಪಡೆದು ನೀರವ್ ಮೋದಿ ಪರಾರಿ | Oneindia Kannada

ನವದೆಹಲಿ, ಡಿಸೆಂಬರ್ 03 : 'ಕೇಂದ್ರ ಸರ್ಕಾರ ಮತ್ತು ಮೋದಿಜೀ ಅವರ ಆಶೀರ್ವಾದದಿಂದ ನೀರವ್ ಮೋದಿ ಬ್ಯಾಂಕ್‌ನಿಂದ ಹಣ ಪಡೆದು ಪರಾರಿಯಾಗಿದ್ದಾರೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಕೇಂದ್ರ ಸರ್ಕಾರ ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಮಾರ್ಗ ಹುಡುಕಿದೆ' ಎಂದು ದೂರಿದರು.

ದೇಶಕ್ಕೆ ಬಂದು ಶರಣಾಗು ಅಂದರೆ, ನೀರವ್ ಮೋದಿ ಮಾಡಿದ್ದು ಇನ್ನೊಂದುದೇಶಕ್ಕೆ ಬಂದು ಶರಣಾಗು ಅಂದರೆ, ನೀರವ್ ಮೋದಿ ಮಾಡಿದ್ದು ಇನ್ನೊಂದು

'ನೀರವ್ ಮೋದಿ, ಚೋಕ್ಸಿಯಂತಹ ವ್ಯಕ್ತಿಗಳು ವಿದೇಶಕ್ಕೆ ಪರಾರಿಯಾಗುವ ಬಗ್ಗೆ ಕೇಂದ್ರ ಸರ್ಕಾರಕ್ಕೆ 1 ವರ್ಷದ ಹಿಂದೆಯೇ ಮಾಹಿತಿ ಇತ್ತು. ಆದರೆ, ಸರ್ಕಾರ ಯಾವುದೇ ತನಿಖಾ ಸಂಸ್ಥೆಗಳನ್ನು ಕಳಿಸಿಲ್ಲ, ಅವರು ಪರಾರಿಯಾಗದಂತೆ ತಡೆದಿಲ್ಲ' ಎಂದು ಟೀಕಿಸಿದರು.

ನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿನೀರವ್ ಮೋದಿಯ 56 ಕೋಟಿ ಮೌಲ್ಯದ 11 ಆಸ್ತಿ ವಶಕ್ಕೆ ಪಡೆದ ಇಡಿ

Modi ji blessings Nirav Modi took money from banks and ran away says Kharge

'ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಪಡೆದು ನೀರವ್ ಮೋದಿಯಂತಹ ವ್ಯಕ್ತಿಗಳು ದೇಶದ ಬ್ಯಾಂಕ್‌ಗಳಿಂದ ಹಣ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ' ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿ ನೀರವ್ ಮೋದಿ ಪರಾರಿಯಾಗಿದ್ದಾರೆ. 'ಭಾರತಕ್ಕೆ ಬಂದರೆ ನನ್ನ ಮೇಲೆ ದಾಳಿ ನಡೆಯಬಹುದು. ಅಭದ್ರತೆ ಭೀತಿ ನನ್ನನ್ನು ಕಾಡುತ್ತಿದೆ. ಹೀಗಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ' ಎಂದು ಅವರು ವಕೀಲರ ಮೂಲಕ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.

English summary
Lok Sabha Congress leader Mallikarjun Kharge alleged that, With govt and Modi ji’s blessings Nirav Modi took money from banks and ran away. Govt had already found a way to save people like Nirav Modi&Mehul Choksi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X