ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡು ರಾಜಕೀಯ ವಿರೋಧಿಯನ್ನು ಮೋದಿ ಆಹ್ವಾನಿಸಿದ್ದು ಹೀಗೆ

|
Google Oneindia Kannada News

ಅಹಮದಾಬಾದ್, ಅ 24: ಸೂಕ್ತ ಸಮಯದಲ್ಲಿ ಬುದ್ದಿವಂತಿಕೆಯಿಂದ ಹೆಜ್ಜೆ ಇಟ್ಟು ರಾಜಕಾರಣ ಮಾಡುವುದೂ ಒಂದು ಕಲೆ. ತನ್ನ ರಾಜಕೀಯ ಜೀವನದ ಪ್ರತಿ ನಡೆಯನ್ನು ಟೀಕಿಸುತ್ತಿದ್ದ ಕಟ್ಟಾ ರಾಜಕೀಯ ವಿರೋಧಿಯನ್ನು ಮೋದಿ ಆಹ್ವಾನಿಸಿದರ ಹಿಂದಿನ ಮರ್ಮ ಬಹುಷಃ ಮೋದಿ ಮಾತ್ರ ಬಲ್ಲರು.

ಕಾಂಗ್ರೆಸ್ ಪಕ್ಷದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬಹುವಾಗಿ ಟೀಕಿಸುವವರನ್ನು ಪಟ್ಟಿ ಮಾಡಿದರೆ ಮೊದಲಿಗೆ ನಿಲ್ಲುವವರು ದಿಗ್ವಿಜಯ್ ಸಿಂಗ್ ನಂತರದ ಸ್ಥಾನ ಜೈರಾಮ್ ರಮೇಶ್ .

ಇದೇ ಅಕ್ಟೋಬರ್ 31ರಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಬೃಹತ್ ಪುಥ್ಥಳಿ ಸ್ಥಾಪನೆಯ ಭೂಮಿಪೂಜೆ ಕಾರ್ಯಕ್ರಮವನ್ನು ಗುಜರಾತ್ ಸರಕಾರ ಹಮ್ಮಿ ಕೊಂಡಿದೆ.

ಅಹಮದಾಬಾದ್ ನಗರಕ್ಕೆ ಸಮೀಪದಲ್ಲಿರುವ ನರ್ಮಾದಾ ಜಿಲ್ಲೆಯ ಕೇವಡಿಯಾದಲ್ಲಿ ಈ ಪುಥ್ಥಳಿಯ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ.

ಕಡು ರಾಜಕೀಯ ವಿರೋಧಿಯನ್ನು ಮೋದಿ ಆಹ್ವಾನಿಸಿದ್ದು ಹೀಗೆ..

ಜೈರಾಮ್ ರಮೇಶ್

ಜೈರಾಮ್ ರಮೇಶ್

ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವ ಜೈರಾಮ್ ರಮೇಶ್, ನರೇಂದ್ರ ಮೋದಿಯನ್ನು 'ಭಸ್ಮಾಸುರ' ಎಂದೇ ಟೀಕಿಸುತ್ತಿದ್ದವರು. ವಲ್ಲಭಭಾಯ್ ಪಟೇಲ್ ಪುಥ್ಥಳಿ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪತ್ರದಲ್ಲಿ ಜೈರಾಮ್ ರಮೇಶ್ ಅವರ ಹೆಸರನ್ನು cut and sweet ಆಗಿ 'Dear Jairam Jii' ಎಂದು ಸಂಭೋದಿಸಿ ಪತ್ರವನ್ನು ಮೋದಿ ಆರಂಭಿಸಿದ್ದಾರೆ.

ಪತ್ರದಲ್ಲಿ ಏನಿದೆ

ಪತ್ರದಲ್ಲಿ ಏನಿದೆ

ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟೀಯ ಏಕತಾ ಟ್ರಸ್ಟ್ ಹೆಸರಿನಲ್ಲಿ ಈ ಪುಥ್ಥಳಿ ನಿರ್ಮಾಣವಾಗಲಿದೆ. ಈ ಪುಥ್ಥಳಿ 'statue of unity' ಆಗಲಿದೆ ಎಂದು ಮೋದಿ ಜೈರಾಮ್ ರಮೇಶ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ನರೇಂದ್ರ ಮೋದಿ

ನರೇಂದ್ರ ಮೋದಿ

ಇಂಗ್ಲಿಷ್ ನಲ್ಲಿ ಬರೆದ ಪತ್ರದಲ್ಲಿ ಮೋದಿ "It is our belief that the monument will become an important cornerstone in the cultural and social life of our great nation, and hence we have kept this entity at an arms' length from government to enable co-option of eminent persons from all walks of life" ಎಂದು ಬರೆದಿದ್ದಾರೆ.

ಪತ್ರದ ಕೊನೆಯಲ್ಲಿ

ಪತ್ರದ ಕೊನೆಯಲ್ಲಿ

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಪತ್ರದ ಕೊನೆಯ ಒಕ್ಕಣೆಯನ್ನು "with warm personal regard" ಎಂದು ಬರೆದು ಮುಗಿಸಿದ್ದಾರೆ. ಜೈರಾಮ್ ರಮೇಶ್ ಹಿಂದೊಮ್ಮೆ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಒಂದಲ್ಲಾ ಒಂದು ದಿನ ಆಡಳಿತಾತ್ಮಕವಾಗಿ ಸವಾಲಾಗುತ್ತಾರೆ ಎಂದಿದ್ದರು. ಮೋದಿ ಅವರ ಈ ಆಹ್ವಾನಕ್ಕೆ ಜೈರಾಮ್ ರಮೇಶ್ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿಲ್ಲ.

ಪಟೇಲ್ ಪುಥ್ಥಳಿ

ಪಟೇಲ್ ಪುಥ್ಥಳಿ

ನರ್ಮಾದ ನದಿಯ ಮಧ್ಯ ಭಾಗದಲ್ಲಿ ಮತ್ತು ಸರ್ದಾರ್ ಸರೋವರಿಗೆ ದಕ್ಷಿಣಕ್ಕೆ ಮೂರುವರೆ ಕಿಲೋಮೀಟರ್ ದೂರದಲ್ಲಿ, 182 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಈ ಪುಥ್ಥಳಿ ಅಮೆರಿಕಾದ ಲಿಬರ್ಟಿ ಪುಥ್ಥಳಿಗಿಂತ ಎತ್ತರದ್ದು.

English summary
Gujarat Chief Minister Narendra Modi invites Union Rural Development Minister Jairam Ramesh to Sardar Vallabhabhai Patel statue's ground breaking ceremony which will be held near Ahmedabad on October 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X