ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ವಿದ್ಯುತ್ ಸಂಪರ್ಕದಲ್ಲಿ ಮೋದಿ ಸರಕಾರದ ತ್ರಿವಿಕ್ರಮ ಹೆಜ್ಜೆ

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ್ ಜ್ಯೋತಿ ಯೋಜನೆ ಅಡಿ ಮಾಡಿದ ಕೆಲಸಗಳ ಬಗೆಗಿನ ವರದಿ ಇದು

By ವಿಕಾಸ್
|
Google Oneindia Kannada News

ನವದೆಹಲಿ, ಮೇ 20: ಗ್ರಾಮೀಣ ವಿದ್ಯುದೀಕರಣಕ್ಕೆ ನರೇಂದ್ರ ಮೋದಿ ನೇತೃತ್ವದ ಸರಕಾರ ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ವಾಜಪೇಯಿ ಅವರು ಕಂಡ ಕನಸುಗಳನ್ನು ಸಾಕಾರ ಮಾಡುವ ದಿಸೆಯಲ್ಲಿ ಸಾಗಿದೆ. ಗ್ರಾಮೀಣ ಭಾಗದಲ್ಲಿ ಬೆಳಕು ಮೂಡಿಸುವ ಸಲುವಾಗಿ ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ್ ಜ್ಯೋತಿ ಯೋಜನೆ ಮೂಲಕ ಅದ್ಭುತವಾದ ಕೆಲಸ ಮಾಡುತ್ತಿದೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ವಿದ್ಯುತ್ ಸಂಪರ್ಕವೇ ಇಲ್ಲದ 18452 ಹಳ್ಳಿಗಳಿದ್ದವು ಮೇ 18,2017ಕ್ಕೆ ಆ ಪೈಕಿ 13469 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಪೈಕಿ ಯೋಜನೆಯ ಅತಿ ಹೆಚ್ಚು ಲಾಭ ಪಡೆದಿರುವುದು ಒಡಿಶಾ. ಅಲ್ಲಿ 2425 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ಆ ನಂತರ ಸ್ಥಾನಗಳಲ್ಲಿ ಅಸ್ಸಾಂ (2240 ಹಳ್ಳಿಗಳು) ಹಾಗೂ ಬಿಹಾರ (2351 ಹಳ್ಳಿಗಳು) ಇವೆ.[ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62]

ಈವರೆಗೆ ಸರಕಾರ ಶೇ ಎಪ್ಪತ್ತೈದರಷ್ಟು ಗುರಿ ತಲುಪಿದೆ. ಈ ಯೋಜನೆಯ ಅತಿ ಹೆಚ್ಚು ಪ್ರಯೋಜನವಾಗಿರುವುದು ಒಡಿಶಾದಲ್ಲಿ. ಅದಕ್ಕೂ ಮುನ್ನ ಅಲ್ಲಿ 3474 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ.

Electric

ಗ್ರಾಮೀಣ ವಿದ್ಯುದ್ದೀಕರಣದಲ್ಲಿ ಸಾಧಿಸಿದ ಮಹತ್ತರಗಳು ಇಂತಿವೆ...
* ಕೃಷಿ ಹಾಗೂ ಕೃಷಿಯೇತರ ಎಂದು ಪ್ರತ್ಯೇಕ ಫೀಡರ್ ಗಳನ್ನು ಮಾಡಲಾಗಿದೆ
* ಮೈಕ್ರೋಗ್ರಿಡ್ ಹಾಗೂ ಆಫ್ ಗ್ರಿಡ್ ವಿತರಣಾ ಜಾಲ
* ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಸಮಗ್ರವಾಗಿ ಗ್ರಾಮಗಳನ್ನು ಕೇಂದ್ರೀಕರಿಸಲಾಗಿದೆ
* ಗ್ರಾಮೀಣ ಭಾಗದ ವಿದ್ಯುತ್ ವಿತರಣೆ ಹಾಗೂ ಮೂಲ ಸೌಕರ್ಯ ಒದಗಿಸುವಲ್ಲಿ ಈ ಹೊಸ ಯೋಜನೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ
* ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳ ಮನೆಗೆ ಉಚಿತ ವಿದ್ಯುತ್ ಸಂಪರ್ಕ[ವಿದ್ಯುತ್ ದರ ಇಳಿಕೆಗೆ ಮೋದಿ ಮಾಸ್ಟರ್ ಪ್ಲಾನ್]

Electric

"ಭಾರತವು ನಿರೀಕ್ಷೆಗೂ ಮೀರಿ ಬೆಳಗುತ್ತಿದೆ. ಇದು ಅಚ್ಚರಿ ವಿಷಯವೇನಲ್ಲ್. ದೇಶದ ಬಹುತೇಕ ಮಂದಿ ವಿದ್ಯುತ್ ಸಂಪರ್ಕ ಇಲ್ಲದೆ ವಾಸಿಸುತ್ತಿದ್ದಾರೆ. ಅಲ್ಲಿನ ಸರಕಾರ ಗ್ರಾಮೀಣ ವಿದ್ಯುದ್ದೀಕರಣಕ್ಕಾಗಿ ಶ್ರಮಿಸುತ್ತಿದೆ. ಮತ್ತು ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದೆ" ಎಂಬ ಮಾತನ್ನು ಸ್ವತಃ ನ್ಯಾಷನಲ್ ಜಿಯಾಗ್ರಫಿಕ್ ಹೇಳಿದೆ.

Electric

ಗರ್ವ್ (GARV) ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೋರೇಷನ್ (ಆರ್ ಇಸಿ) ಅಭಿವೃದ್ಧಿಪಡಿಸಿದೆ. ದೇಶದ ನಾನಾ ಹಳ್ಳಿಗಳಲ್ಲಿ ನಡೆಯುತ್ತಿರುವ ವಿದ್ಯುದ್ದೀಕರಣದ ಕೆಲಸದ ವಿವರಗಳನ್ನು ಆಗಿಂದಾಗ್ಗೆ ಇದರಲ್ಲಿ ಕೊಡಲಾಗುತ್ತಿದೆ.[ಕೇಂದ್ರದಿಂದ 'ಕೆಪಿಸಿಎಲ್'ಗೆ ಹರಿದು ಬರಲಿದೆ 39,000 ಕೋಟಿ]

Mobile App

ಈ ರೀತಿ ಮಾಡುವ ಮೂಲಕ ಪಾರದರ್ಶಕತೆ ತರುವುದು ಹಾಗೂ ಸದ್ಯಕ್ಕೆ ನಡೆಯುತ್ತಿರುವ ಕೆಲಸದ ಮಾಹಿತಿ ಇಡೀ ದೇಶಕ್ಕೆ ಗೊತ್ತಾಗಬೇಕು ಎಂಬುದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಯ ಹಿಂದಿರುವ ಉದ್ದೇಶ.

English summary
Prime Minister Narendra Modi-led government has taken significant strides towards rural electrification, which was conceptualised 13-years-ago former PM Atal Bihari Vajpayee. The government's ambitious Deen Dayal Upadhyay Gram Jyoti Yojna has taken several steps to bring rural India out of darkness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X