ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಕೋವಿಶೀಲ್ಡ್‌, ಕೋವ್ಯಾಕ್ಸಿನ್ ಲಸಿಕೆಯನ್ನು ಯಾವ ಬೆಲೆಗೆ ಖರೀದಿಸಲಿದೆ?

|
Google Oneindia Kannada News

ನವದೆಹಲಿ, ಜುಲೈ 17: ಸರ್ಕಾರವು ಕೋವಿಶೀಲ್ಡ್ ಲಸಿಕೆಯನ್ನು 215 ರೂ. ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು 225 ರೂ.ಗೆ ಖರೀದಿ ಮಾಡಲಿದೆ.

ಜುಲೈ 31ರೊಳಗಾಗಿ 50 ಕೋಟಿ ಪ್ರಮಾಣಗಳ ಗರಿಯನ್ನು ಸಾಧಿಸುವ ಹಾದಿಯಲ್ಲಿದ್ದೇವೆ, ಶುಕ್ರವಾರ ಬೆಳಗ್ಗೆ 10 ಗಂಟೆಗೆ 40 ಕೋಟಿ ಹತ್ತಿರ ತಲುಪಿದ್ದೇವೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 18 ವರ್ಷದೊಳಗಿನವರಿಗೆ ಕೊರೊನಾವೈರಸ್ ಲಸಿಕೆ ಸಿಗುವುದು ಯಾವಾಗ? ಭಾರತದಲ್ಲಿ 18 ವರ್ಷದೊಳಗಿನವರಿಗೆ ಕೊರೊನಾವೈರಸ್ ಲಸಿಕೆ ಸಿಗುವುದು ಯಾವಾಗ?

ಆಗಸ್ಟ್ ಹಾಗೂ ಡಿಸೆಂಬರ್ ನಡುವೆ 66 ಕೋಟಿ ಹೆಚ್ಚಿನ ಪ್ರಮಾಣದಲ್ಲಿ 15,500 ಕೋಟಿ ರೂ,ಗಳಿಗೆ ಸರಬರಾಜು ಮಾಡಲು ಆದೇಶಿಸಿದೆ.

Modi Govt Finally Raises Vaccine Prices, Will Pay Rs 215 For Covishield, Rs 225 For Covaxin

ಮುಂದಿನ ಐದು ತಿಂಗಳಲ್ಲಿ 66 ಕೋಟಿ ಡೋಸ್‌ಗಳಿಗೆ ತಿಂಗಳಿಗೆ 12 ಕೋಟಿ ಡೋಸ್‌ಗಳಿಗಿಂತ ಸ್ವಲ್ಪ ಹೆಚ್ಚು ಎಂದರ್ಥ, ಸ್ಪುಟ್ನಿಕ್ ಲಸಿಕೆ ಅಥವಾ ಇತರೆ ಲಸಿಕೆಗಳು ಶೀಘ್ರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗದಿದ್ದರೆ ದಿನಕ್ಕೆ ಒಂದು ಕೋಟಿ ಲಸಿಕೆ ಗುರಿ ತಲುಪುವುದು ಕಷ್ಟವಾಗಬಹುದು.

ಬದಲಾದ ಖರೀದಿ ಯೋಜನೆ ಜೂನ್ 21ರಿಂದ ಜಾರಿಗೆ ಬಂದ ನಂತರ ಲಸಿಕೆ ದರವನ್ನು ಪರಿಷ್ಕರಿಸುವುದಾಗಿ ಸರ್ಕಾರ ಈ ಹಿಂದೆ ತಿಳಿಸಿತ್ತು. ತಯಾರಕರು ಪ್ರತಿ ಡೋಸ್‌ಗೆ 150 ರೂ. ಬೆಲೆಯಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಪ್ರಸ್ತುತ, ಲಸಿಕೆ ತಯಾರಕರು ತಮ್ಮ ಉತ್ಪನ್ನಗಳ ಶೇ.25ರಷ್ಟನ್ನು ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಮಾರಾಟ ಮಾಡಬಹುದು ಎಂದು ಹೇಳಲಾಗಿದೆ.

ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾವೈರಸ್ ಲಸಿಕೆ ನೀಡುವುದರ ಕುರಿತು ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ದೆಹಲಿ ಉಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ.

"ವೈದ್ಯಕೀಯ ಪ್ರಯೋಗಗಳು ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿವೆ. ಸಾಂಕ್ರಾಮಿಕ ರೋಗಶಾಸ್ತ್ರರ ಶಿಫಾರಸ್ಸಿನ ಮೇಲೆ ಮಕ್ಕಳಿಗೆ ಕೊವಿಡ್-19 ಲಸಿಕೆ ವಿತರಿಸುವ ನೀತಿಯನ್ನು ರೂಪಿಸಲಾಗುವುದು,ಎಂದು ಕೇಂದ್ರ ಸರ್ಕಾರ ಹೇಳಿದೆ.

English summary
Having procured Covid-19 vaccines for several months at Rs 150 per dose, the Modi government has decided to finally revise the prices. Under the fresh procurement plan, the government will pay Rs 215 for Covishield and Rs 225 for a single dose of Covaxin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X