ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸ್ಡ್ ಕಾಲ್ ನೀಡಿ, ಮೋದಿ ಮೆಸೇಜ್ ಪಡೆಯಿರಿ

|
Google Oneindia Kannada News

ನವದೆಹಲಿ, ಮಾ. 25: ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಸರ್ಕಾರದ ಯೋಜನೆಗಳ, ಘಟನಾವಳಿಗಳ, ರಾಜಕೀಯ ನಾಯಕರ, ಸಚಿವರ ಮತ್ತು ವಿವಿಧ ಇಲಾಖೆಗಳ ನಡವಳಿಕೆಗಳನ್ನು ಪಡೆದುಕೊಳ್ಳಬಹುದು.

ಹೌದು... ಡಿಜಿಟಲ್ ಇಂಡಿಯಾ ಕಲ್ಪನೆಗೆ ಮತ್ತೊಂದು ರೂಪ ನೀಡಲಾಗಿದ್ದು ಟ್ವಿಟ್ಟರ್ ಸಂವಾದ ಎಂಬ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಏಳು ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಟ್ವೀಟ್‌ಗಳನ್ನು ಮೊಬೈಲ್‌ ಮೂಲಕ ಜನತೆಗೆ ನೇರವಾಗಿ ತಲುಪಿಸುವ ತಲುಪಿಸುವ ವ್ಯವಸ್ಥೆಯೇ ಟ್ವಿಟರ್‌ ಸಂವಾದ.[ರೈಲ್ವೆ ಮಾಹಿತಿ ಅಂಗೈನಲ್ಲಿ ಲಭ್ಯ]

narendra modi

ಕರ್ನಾಟಕ, ಗುಜರಾತ್‌, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮುಖ್ಯಮಂತ್ರಿಗಳು ಈ ಸೇವೆಯ ವ್ಯಾಪ್ತಿಗೆ ಸೇರಿಕೊಂಡಿದ್ದಾರೆ. ಅಲ್ಲದೇ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬೆಂಗಳೂರು ನಗರ ಪೊಲೀಸ್‌ ಸಹ ಈ ಟ್ವಿಟರ್‌ ಸೇವಾ ಜಾಲಕ್ಕೆ ಸೇರಿಕೊಂಡಿರುವ ಪ್ರಮುಖ ಇಲಾಖೆಗಳ ಪಟ್ಟಿಯಲ್ಲಿವೆ. [ರೈತರ ಮನೆ ಬಾಗಿಲಿಗೆ ಸೇವೆ ನೀಡುವ ವೆಬ್ ಸೈಟ್]

ಮಿಸ್ಡ್‌ ಕಾಲ್‌ ನೀಡಿ, ಮಾಹಿತಿ ಪಡೆಯಿರಿ
011 3006 3006 ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡಿ, ನನ್ನ ಟ್ವೀಟ್ಸ್‌ಗಳನ್ನು ಎಸ್‌ಎಂಎಸ್‌ ಮೂಲಕ ಪಡೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಈ ವ್ಯವಸ್ಥೆ ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿಗೆ ಪೂರಕವಾಗಲಿದೆ. ಜನರನ್ನು ಚಿಂತನೆಗೆ ದೂಡುವುದರಿಂದ ಅಭಿಪ್ರಾಯಗಳ ಆಧಾರದಲ್ಲಿ ಹೊಸ ಯೋಜನೆಗಳನ್ನು ರೂಪಿಸಬಹುದು. ರಾಜಕೀಯ ನಾಯಕರು ಮತ್ತು ಸರ್ಕಾರಿ ಸಂಸ್ಥೆಗಳು ಸುಲಭವಾಗಿ ಸಾರ್ವಜನಿಕರ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ ಎಂದು ಭಾರತ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆ ನಿರ್ದೇಶಕ ರಿಶಿ ಜೇಟ್ಲಿ ಮಾಹಿತಿ ನೀಡಿದ್ದಾರೆ.

ನೀವು ಮೊಬೈಲ್‌ ಹೊಂದಿದ್ದರೆ ಸಾಕು. ಇಂಟರ್ ನೆಟ್ ಅಥವಾ ಡೇಟಾ ಪ್ಲಾನ್‌ ಇಲ್ಲದಿದ್ದವರೂ ನಿರ್ದಿಷ್ಟ ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡಿ ಟ್ವಿಟರ್‌ ಜಾಲಕ್ಕೆ ನೋಂದಣಿ ಮಾಡಿಕೊಂಡು ಈ ಸೇವೆ ಪಡೆದುಕೊಳ್ಳಬಹುದು. ತುರ್ತು ಸಂದರ್ಭದಲ್ಲಿಯೂ ಜನತೆಗೆ ಮುನ್ನೆಚ್ಚರಿಕೆ ನೀಡಲು ಈ ಸೇವೆಯನ್ನು ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ.

ಮಾಹಿತಿ ಪಡೆಯುವ ವಿಧಾನ ಹೇಗೆ?
ಪ್ರಧಾನಮಂತ್ರಿ ವೈಯಕ್ತಿಕ ಖಾತೆ-@NarendraModi, ದೂ.ಸಂ-011 3006 3006
ಪ್ರಧಾನಮಂತ್ರಿ ಕಚೇರಿ ಖಾತೆ-@PMOIndia , ದೂ.ಸಂ-011 3006 3007
ರಕ್ಷಣಾ ಸಚಿವಾಲಯ-@adgpi, ದೂ.ಸಂ. 011 3049 6116
ರೈಲ್ವೇ ಸಚಿವಾಲಯದ-@RailMinIndia, ದೂ.ಸಂ.011 3049 6222
ಕರ್ನಾಟಕ ಮುಖ್ಯಮಂತ್ರಿ ಕಚೇರಿ ಖಾತೆ-@CMofKarnataka, ದೂ.ಸಂ-011 3049 4737
ಬೆಂಗಳೂರು ನಗರ ಪೋಲೀಸ್ ಆಯುಕ್ತ-@CPBLR, ದೂ.ಸಂ-011 3049 5141
ಬೆಂಗಳೂರು ನಗರ ಪೋಲೀಸರ ಕಚೇರಿ ಖಾತೆ -@BlrCityPolice , ದೂ.ಸಂ-011 3049 5242
ಬೆಂಗಳೂರು ನಗರ ಸಂಚಾರಿ ಪೋಲೀಸರ ಕಚೇರಿ ಖಾತೆ- @blrcitytraffic, ದೂ.ಸಂ- 011 3049 5464

English summary
Twitter has launched Twitter Samvad in collaboration with the Indian government so as to allow people to receive tweets from government offices, including the Prime Minister's Office. As part of the Prime Minister's Digital India initiative, this tweet-powered service enables citizens to be the first to know about the government's actions by receiving political content in real-time on their mobile devices anywhere in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X