ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸ್ತೆ ಸುರಕ್ಷತೆ ಜತೆ ಪ್ರಧಾನಿ ಮೋದಿ ಸರ್ಕಾರ ಆಟ: ಕಾಂಗ್ರೆಸ್ ಟೀಕೆ

|
Google Oneindia Kannada News

ನವದೆಹಲಿ, ಮೇ 27: ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯ ಮೊದಲ ಹಂತವನ್ನು ಉದ್ಘಾಟನೆಯನ್ನು ಬಿಜೆಪಿ ಸಂಭ್ರಮಿಸುತ್ತಿದೆ. ಆದರೆ, ಇದು ಅಪಾಯಕ್ಕೆ ಎಡೆಮಾಡಿಕೊಡುವ ನಿರ್ಧಾರವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು 2006ರಲ್ಲಿಯೇ ಆರಂಭಿಸುವಂತೆ ಕೋರ್ಟ್ ಯುಪಿಎ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಅತಿ ವೇಗದ ಚಾಲನೆಯ ಕಾರಣ ಇಲ್ಲಿ ರಸ್ತೆ ಅಪಘಾತಗಳು ಮತ್ತು ಸಾವುಗಳು ಹೆಚ್ಚುವ ಅಪಾಯವಿದೆ ಎಂಬ ಮುಂಜಾಗ್ರತೆಯಿಂದ ನಾವು ರಸ್ತೆ ನಿರ್ಮಾಣಕ್ಕೆ ಮುಂದಾಗುವ ಈ ತೊಂದರೆಯನ್ನು ಎದುರಿಸಲು ಸಿದ್ಧರಿರಲಿಲ್ಲ.

ದೇಶದ ಪ್ರಥಮ 14 ಪಥಗಳ ಹೆದ್ದಾರಿ ಮೊದಲ ಹಂತ ಲೋಕಾರ್ಪಣೆದೇಶದ ಪ್ರಥಮ 14 ಪಥಗಳ ಹೆದ್ದಾರಿ ಮೊದಲ ಹಂತ ಲೋಕಾರ್ಪಣೆ

ಮೋದಿ ಸರ್ಕಾರವು ರಸ್ತೆ ಸುರಕ್ಷತೆ ವಿಚಾರದಲ್ಲಿ ಆಟವಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್‌ ಸುರ್ಜೇವಾಲ ಟೀಕಿಸಿದ್ದಾರೆ.

modi government is playing with road safety surjewala

ಈ ಎಕ್ಸ್‌ಪ್ರೆಸ್ ಹೆದ್ದಾರಿಯು ನಮ್ಮ ಸಾಧನೆ. ಇದು ಪ್ರಚಾರದ ಸ್ಟಂಟ್ ಅಲ್ಲ. ಇದು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅದು ನಿರುಪಯುಕ್ತವಾಗಿತ್ತು ಎಂಬುದನ್ನು ತೋರಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ದೆಹಲಿ ಮತ್ತು ಮೀರತ್‌ ನಡುವೆ 82 ಕಿ.ಮೀ. ಉದ್ದದ ಹೆದ್ದಾರಿ ಯೋಜನೆ ಇದಾಗಿದೆ. 27.74 ಕಿ.ಮೀ. ಉದ್ದದ 14 ಪಥಗಳ ಹೆದ್ದಾರಿಯಾಗಿದ್ದು, ಉಳಿದ ಹೆದ್ದಾರಿ 6 ಲೈನ್‌ಗಳನ್ನು ಒಳಗೊಂಡಿದೆ. ಒಟ್ಟು 4,975.17 ಕೋಟಿ ರೂಪಾಯಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೆದ್ದಾರಿ ಸಿದ್ಧವಾಗುತ್ತಿದೆ.

ಈ ಹೆದ್ದಾರಿಯಲ್ಲಿ 11 ಫ್ಲೈಓವರ್‌ಗಳು, 5 ದೊಡ್ಡ ಸೇತುವೆಗಳು, 24 ಸಣ್ಣ ಸೇತುವೆಗಳು, 3 ರೈಲ್ವೆ ಸೇತುವೆಗಳು ಮತ್ತು ಹಲವು ಅಂಡರ್‌ಪಾಸ್‌ಗಳು ಇವೆ.

English summary
Congress spokesperson Randeep Surjewala said that the Modi government is playing with road safety by constructing delhi-meerat expressway. Congress could not take risk of constructing it as it would have increased the risk of road accidents and deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X