ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಮೀಸಲಾತಿ ರದ್ದು

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಮೀಸಲಾಗಿದ್ದ ಕೋಟಾ ರದ್ದು ಮಾಡುವ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿ ಸರ್ವಾನುಮತದಿಂದ ಅಂಗೀಕಾರವಾಗಿದೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಮಂಡನೆ ಮಾಡಿದ ಮಸೂದೆಗೆ ತೃಣಮೂಲ ಕಾಂಗ್ರೆಸ್ಸಿನ ಸಂಸದ ಸೌಗತಾ ರಾಯ್ ಅವರು ವಿರೋಧ ವ್ಯಕ್ತಪಡಿಸಿದರು. ಆದರೆ ಧ್ವನಿಮತದ ಮೂಲಕ ಮಸೂದೆ ಬಹುಮತ ಪಡೆದು ಅಂಗೀಕಾರವಾಯಿತು.

370ನೇ ವಿಧಿ ರದ್ದು ನಂತರ ಮೋದಿಯಿಂದ ಮಹತ್ವದ ನಿರ್ಧಾರ 370ನೇ ವಿಧಿ ರದ್ದು ನಂತರ ಮೋದಿಯಿಂದ ಮಹತ್ವದ ನಿರ್ಧಾರ

ಲೋಕಸಭೆಯಲ್ಲಿ 545 ಸ್ಥಾನಗಳಿದ್ದು, ಈ ಪೈಕಿ 84 ಪರಿಶಿಷ್ಟ ಜಾತಿ, 47 ಪರಿಶಿಷ್ಟ ಪಂಗಡ ಹಾಗೂ ಆಂಗ್ಲೋ ಇಂಡಿಯನ್ ಕೋಟಾಕ್ಕೆ 2 ಸ್ಥಾನಗಳು ಮೀಸಲಾಗಿವೆ. ಈ ಸಮುದಾಯಕ್ಕೆ ಯಾವುದೇ ಅದರದೇ ಆದ ಸ್ವಂತ ರಾಜ್ಯದ ನೆಲೆವಾಸದ ಆಧಾರವಿಲ್ಲ. ಇನ್ನುಳಿದಂತೆ ಆಂಧ್ರ ಪ್ರದೇಶ, ತಮಿಳು ನಾಡು, ಬಿಹಾರ,ಪಶ್ಚಿಮ ಬಂಗಾಲ,ಕರ್ನಾಟಕ ಮತ್ತು ಕೇರಳ ಇತ್ಯಾದಿ ರಾಜ್ಯಗಳ ವಿಧಾನಸಭೆಗಳಲ್ಲಿ ಆಯಾ ಸಮುದಾಯದಿಂದ ಪ್ರಾತಿನಿಧ್ಯ ಪಡೆದಿದ್ದಾರೆ. ಇದೇ ರೀತಿ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಒಂದು ಸ್ಥಾನ ಮೀಸಲಾಗಿರುತ್ತದೆ.

ಎಸ್ ಸಿ, ಎಸ್ಟಿ ಮೀಸಲಾತಿ ವಿಸ್ತರಣೆ

ಎಸ್ ಸಿ, ಎಸ್ಟಿ ಮೀಸಲಾತಿ ವಿಸ್ತರಣೆ

ಸಂವಿಧಾನದ 334ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿರುವ ಮೀಸಲಾತಿ ಅವಧಿಯನ್ನು ಇನ್ನು 10 ವರ್ಷಕ್ಕೆ ವಿಸ್ತರಿಸಲಾಗಿದೆ. ಲೋಕಸಭೆ, ವಿಧಾನಸಭೆಗಳಲ್ಲಿನ ಮೀಸಲಾತಿ ಅವಧಿಯು ಜನವರಿ 25, 2020ರಂದು ಮುಗಿಯಲಿದೆ. ಹೀಗಾಗಿ, ಅವಧಿಯನ್ನು ವಿಸ್ತರಣೆ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದು, ಲೋಕಸಭೆಯಲ್ಲೂ ಈ ನಿರ್ಧಾರವನ್ನು ತಿಳಿಸಲಾಯಿತು. ಈ ಸಮುದಾಯಗಳು ಕಳೆದ 70 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ ಸಂವಿಧಾನದ ಮೂಲ ಆಶಯಕ್ಕೆ ಬದ್ಧವಾಗಿ ಮುಂದಿನ 10 ವರ್ಷಗಳ ಅವಧಿಗೆ ಮೀಸಲಾತಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.

ಈ ಬಾರಿ ನಾಮನಿರ್ದೇಶನ ಮಾಡಿಲ್ಲ

ಈ ಬಾರಿ ನಾಮನಿರ್ದೇಶನ ಮಾಡಿಲ್ಲ

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಈ ಬಾರಿ ಮೋದಿ ಸರ್ಕಾರ್ 2.0ದಲ್ಲಿ ಲೋಕಸಭೆಗೆ ಆಂಗ್ಲೋ ಇಂಡಿಯನ್ ನಾಮನಿರ್ದೇಶನವಾಗಿಲ್ಲ. ಆಂಗ್ಲೋ ಇಂಡಿಯನ್ ಮೀಸಲಾತಿ ಕೋಟಾ ರದ್ದು ಮಾಡುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸಮಾಜ ಕಲ್ಯಾಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನೊಳಗೊಂಡ ನಿಯೋಗದ ಶಿಫಾರಸ್ಸನ್ನು ಅಂಗೀಕರಿಸಲಾಗಿತ್ತು. ಆಂಗ್ಲೋ ಇಂಡಿಯನ್ ಸಮುದಾಯ ಕೂಡಾ ಮೀಸಲಾತಿ ಬೇಡ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಒಂದು ವೇಳೆ ಅಗತ್ಯ ಬಿದ್ದರೆ ಮೀಸಲಾತಿಯನ್ನು ಪುನಃ ಕಲ್ಪಿಸಲಾಗುವುದು ಎಂದು ಕಾನೂನು ಸಚಿವರು ತಿಳಿಸಿದರು. ರಾಜ್ಯಗಳ ವಿಧಾನಸಭೆಯಲ್ಲಿನ ಆಂಗ್ಲೋ ಇಂಡಿಯನ್ ಮೀಸಲಾತಿ (1 ಸ್ಥಾನ)ಯನ್ನು ರದ್ದುಗೊಳಿಸುವ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಲೋಕಸಭೆಯಂತೆ ವಿಧಾನಸಭೆಗಳಲ್ಲೂ ಮೀಸಲಾತಿ ರದ್ದುಪಡಿಸುವ ಸಾಧ್ಯತೆ ಹೆಚ್ಚಿದೆ.

ಆಂಗ್ಲೋ ಇಂಡಿಯನ್ಸ್ ಅಂದರೆ ಯಾರು?

ಆಂಗ್ಲೋ ಇಂಡಿಯನ್ಸ್ ಅಂದರೆ ಯಾರು?

ಭಾರತ ಸಂವಿಧಾನದ ಕಲಮ್ 366(2) ರ ನಿಯಮದ ಪ್ರಕಾರ "ಓರ್ವ ಆಂಗ್ಲೊ ಇಂಡಿಯನ್ ನ ವಂಶಸ್ಥರು ಅಥವಾ ಅವನ ವಂಶಾವಳಿಯ ಪುರುಷರು ಯುರೊಪಿಯನ್ ಮೂಲಕ್ಕೆ ಸೇರಿದವರಾಗಿರುತ್ತಾರೆ.ಆತ ನೆಲೆಸಿರುವ ಭಾರತದ ಪ್ರಾದೇಶಿಕ ಗಡಿಯೊಳಗೆ ಅವರು ವಾಸಿಸಿರುತ್ತಾರೆ ಅಥವಾ ಇದೇ ಪ್ರದೇಶದಲ್ಲಿ ಜನಸಿದವರಾಗಿದ್ದರೆ ಅಥವಾ ಅವರ ತಂದೆ, ತಾಯಿ ಪೋಷಕರು ಇಲ್ಲಿಗೆ ಸೇರಿದವರಾಗಿರಬೇಕು.ಆದರೆ ಅವರು ತಾತ್ಕಾಲಿಕವಾಗಿ ಇಲ್ಲಿ ನೆಲೆವಾಸಿಗಳಾಗಿರಬಾರದು

ಭಾರತದಿಂದ ವಲಸೆ ಹೋಗಿದ್ದಾರೆ

ಭಾರತದಿಂದ ವಲಸೆ ಹೋಗಿದ್ದಾರೆ

ಈ ಆಂಗ್ಲೊ-ಇಂಡಿಯನ್ಸ್, ಮೆಸ್ಟಿಕೊಸ್ (ಮಿಶ್ರಿತ ಪೊರ್ಚ್ ಗೀಸ್ ಮತ್ತು ಭಾರತೀಯ), ಇಂಡೋ-ಡಚ್, ಇಂಡೋ-ಫ್ರೆಂಚ್ ಸಮುದಾಯವು ಭಾರತದ ಸ್ವಾತಂತ್ರ್ಯಕ್ಕಿಂತ ಮೊದಲು ಸಣ್ಣ ಒಂದು ಅಲ್ಪಸಂಖ್ಯಾತ ಸಮೂಹವಾಗಿ ಭಾರತದಲ್ಲಿತ್ತು. ಆದರೆ ಅವರಿಂದು ಭಾರತದಲ್ಲಿಗಿಂತ ಹೆಚ್ಚು ಹೊರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಭಾರತದಲ್ಲಿನ ಅವರ ಸಂಖ್ಯೆಯು ಕಡಿಮೆಯಾಗುತ್ತ ನಡೆದಿದ್ದು, ಬಹಳಷ್ಟು ಜನರು ಯುನೈಟೈಡ್ ಕಿಂಗ್ಡಮ್ ,ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್ ಮತ್ತು ಕೆನಡಾ ಅಲ್ಲದೇ ಕಡಿಮೆ ಪ್ರಮಾಣದಲ್ಲಿ ಯುನೈಟೆಡ್ ಸ್ಟೇಟ್ಸ್ ಗೆ ವಲಸೆ ಹೋಗಿದ್ದಾರೆ.

English summary
PM Narendra Modi led BJP government on Monday introduced a bill to amend the Constitution scrapping Anglo Indian Lok Sabha Quota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X