ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಬತ್ತಿದ ಸರಸ್ವತಿ ನದಿ ಉಕ್ಕುವಂತೆ ಮಾಡುವಾಸೆ

By Mahesh
|
Google Oneindia Kannada News

ನವದೆಹಲಿ, ಆ.13: ಪವಿತ್ರ ಗಂಗಾನದಿಯ ಶುದ್ಧೀಕರಣಕ್ಕೆ ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂಗಳ ಪವಿತ್ರ ನದಿ ಎಂದೇ ನಂಬಲಾಗಿರುವ ಸರಸ್ವತಿ ನದಿಯ ಮೂಲ ಸ್ಥಳವನ್ನು ಶೋಧಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಅಲಹಾಬಾದ್‌ನ ಕೋಟೆಯೊಳಗಿರುವ ಬಾವಿಯೊಂದರಲ್ಲಿ ಬರುತ್ತಿರುವ ನೀರನ್ನು ಪರೀಕ್ಷೆ ಮಾಡಲು ಮುಂದಾಗಬೇಕೆಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸೂಚಿಸಿದ್ದಾರೆ.

ಸುಮಾರು 5,000 ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕಲು ಹೊರಟಿರುವ ಕೇಂದ್ರ ಸರ್ಕಾರ ಬತ್ತಿರುವ ಸರಸ್ವತಿ ನದಿಯನ್ನು ಮತ್ತೊಮ್ಮೆ ಉಕ್ಕಿ ಹರಿಯುವಂತೆ ಮಾಡಲು ಪಣ ತೊಟ್ಟಿದೆ. ಪುರಾಣ ಮತ್ತು ಇತಿಹಾಸಗಳಲ್ಲಿ ಗಂಗಾ ನದಿಗಿರುವ ಪ್ರಾಮುಖ್ಯತೆಯಷ್ಟೇ ಸರಸ್ವತಿ ನದಿಗಿದೆ. ಆದರೆ, ಅನೇಕರು ಸರಸ್ವತಿ ನದಿಯ ಮೂಲದ ಬಗ್ಗೆ ನಡೆಸಿದ ಶೋಧನೆಗಳು ಮಾತ್ರ ಫಲ ಕೊಟ್ಟಿರಲಿಲ್ಲ.

ಗಂಗಾ ನದಿಯ ಮೂಲ ಉಗಮ ಹಿಮಾಲಯ ಪರ್ವತ ಎಂಬ ಪ್ರತೀತಿ ಇದೆ. ಸರಸ್ವತಿಯ ಮೂಲ ಯಾವುದೆಂಬುದು ಈವರೆಗೂ ತಿಳಿದಿರಲಿಲ್ಲ. ಋಗ್ವೇದದ ಕಾಲದಿಂದಲೂ ಸರಸ್ವತಿ ನದಿ ಭಾರತದ ಶ್ರೇಷ್ಠ ನದಿಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.ಪಠ್ಯ ಪುಸ್ತಕಗಳಲ್ಲೂ ಸರಸ್ವತಿ ನದಿಯ ಉಲ್ಲೇಖವಿದೆಯಾದರೂ ಮೂಲ ಉಗಮ ಯಾವುದು ಎಂಬುದು ಪತ್ತೆಯಾಗಿಲ್ಲ.

NDA government aims to get legendary Saraswati river flowing again

ಭಾರತದಲ್ಲಿ ಗಂಗಾ-ಯಮುನಾ ನದಿಗಳು ಅಲಹಾಬಾದ್‌ನ ಪ್ರಯಾಗದಲ್ಲಿ ಸಂಗಮವಾಗುತ್ತವೆ. ಅದರಂತೆ ರಾಜಸ್ಥಾನದಲ್ಲಿ ಸರಸ್ವತಿ ನದಿ ಉಗಮವಾಗಿ ಇಂಡಸ್, ಸತ್ಲೇಜ್, ಚಿನಾಬ್, ಜೇಲಮ್ ನದಿಗಳ ಮೂಲಕ ಪಂಜಾಬ್, ಹರ್ಯಾಣ, ರಾಜಸ್ಥಾನ, ಗುಜರಾತ್ ಮೂಲಕ ಕಛ್ ಬಳಿ ಇರುವ ಅರೇಬಿಯನ್ ಸಮುದ್ರ ಸೇರಲಾಗುತ್ತದೆ ಎಂದು ನಂಬಲಾಗಿದೆ. ಇದೀಗ ಕೇಂದ್ರ ಸರ್ಕಾರ ಸರಸ್ವತಿ ನದಿಯ ಮೂಲ ಉಗಮಕ್ಕೆ ಮುಂದಾಗಿದೆ.

ಇದಕ್ಕಾಗಿ ಪ್ರಾಚ್ಯ ವಸ್ತು ಇಲಾಖೆ ಮತ್ತು ಹಿರಿಯ ವಿಜ್ಞಾನಿಗಳ ತಂಡವೊಂದನ್ನು ರಚಿಸಲು ಮುಂದಾಗಿದೆ. ಶೀಘ್ರದಲ್ಲೇ ಈ ತಂಡ ಪತ್ತೆ ಕಾರ್ಯ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ. 1819ರಲ್ಲಿ ಸರಸ್ವತಿ ನದಿ ಮೂಲ ಪತ್ತೆಯಾಗಿತ್ತು. ಕಛ್ ಬಳಿ ಅಂದು ಸಂಭವಿಸಿದ ಭೀಕರ ಭೂಕಂಪನಕ್ಕೆ ನದಿಯ ಮೂಲವೇ ನಾಪತ್ತೆಯಾಗಿತ್ತು.

1870 ರಿಂದ 1886, ಹಾಗೂ 1947ರ ವರೆಗೂ ವಿವಿಧ ಹಂತಗಳ ಸಂಶೋಧನೆ ನಡೆದರೂ ನದಿಯ ಮೂಲ ಉಗಮ ಮಾತ್ರ ಪತ್ತೆಯಾಗಲಿಲ್ಲ. 1972ರಲ್ಲಿ ಉಪಗ್ರಹದ ಮೂಲಕ ರಾಜಸ್ಥಾನದಲ್ಲಿ ಇದರ ಮೂಲ ಇದೆಯೆಂದು ಊಹಾಪೋಹಗಳು ಎದ್ದಿದ್ದವು. 1980ರಲ್ಲಿ ಪುನಃ ಉಪಗ್ರಹದ ಮೂಲಕ ಸರಸ್ವತಿನದಿ ಹರಿಯುತ್ತಿರುವ ಛಾಯಾಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. 1998ರಲ್ಲಿ ರಾಜಸ್ಥಾನ ಸರ್ಕಾರ ಅಲಹಾಬಾದ್‌ನಲ್ಲಿರುವ ಸಂಸ್ಥೆ ಮೂಲಕ ಸಂಶೋಧನೆ ನಡೆಸಿತು.

2001ರಲ್ಲಿ ಗುಜರಾತ್‌ನ ಕುಚ್ ಬಳಿ ಸಂಭವಿಸಿದ ಭೂಕಂಪದ ವೇಳೆ ಪರಿಹಾರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಸರಸ್ವತಿ ನದಿ ಹರಿಯುತ್ತಿರುವುದು ಪತ್ತೆಯಾಗಿದೆ ಎಂದು ನಂಬಲಾಗಿತ್ತು.

English summary
The Narendra Modi led NDA government wants to trace back one of ancient India’s well-known rivers, the Saraswati -- and even revive it -- nearly 5,000 years after it went extinct. A more realistic challenge, experts say, is to save existing rivers from dying a slow death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X