ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನತೆಯನ್ನು ವಂಚಿಸಿದ ಮೋದಿಗೆ ಶಿಕ್ಷೆಯಾಗಬೇಕು: ರಾಮ್

By Mahesh
|
Google Oneindia Kannada News

ಪಾಟ್ನಾ, ಅ.05: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜನತೆಯನ್ನು ವಂಚಿಸಿದ್ದಾರೆ, ಅವರಿಗೆ ಶಿಕ್ಷೆಯಾಗಬೇಕು ಎಂದು ಹಿರಿಯ ನ್ಯಾಯವಾದಿ, ವಾಜಪೇಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ರಾಮ್ ಜೇಠ್ಮಲಾನಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಆತ ಸೋಲು ಅನುಭವಿಸಬೇಕು, ಸರಿಯಾದ ಶಿಕ್ಷೆಯಾಗಬೇಕು. ನಾನು ಯಾರ ಪರವಾಗಿಯಾದರೂ ಮತ ಹಾಕುವುದಿದ್ದರೆ, ಜೆಡಿಯು ನಾಯಕ ನಿತೀಶ್ ಕುಮಾರ್ ಸರಕಾರದ ಪರವಾಗಿ ಮತ ಹಾಕುತ್ತೇನೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾಜಿ ರಾಜ್ಯಸಭಾ ಸದಸ್ಯ ಜೇಠ್ಮಲಾನಿ ಹೇಳಿದರು.[ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ]

Modi 'cheated' people, must be 'punished': Jethmalani

ಒಂದು ಕಾಲದಲ್ಲಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯನ್ನು ಬಲವಾಗಿ ಬೆಂಬಲಿಸಿದ್ದ ಉಚ್ಚಾಟಿತ ಬಿಜೆಪಿ ಸಂಸದ, ಜಾಗೃತದಳದ ಮುಖ್ಯ ಕಮಿಶನರ್ ಆಗಿ ಸಿಬಿಡಿಟಿಯ ಮಾಜಿ ಅಧ್ಯಕ್ಷ ಕೆ.ವಿ. ಚೌಧರಿಯನ್ನು ಸರಕಾರ ನೇಮಿಸಿದ್ದನ್ನು ಜೇಠ್ಮಲಾನಿ ಬಲವಾಗಿ ವಿರೋಧಿಸಿದ್ದರು. [ದೇಶದಲ್ಲಿ 1 ಲಕ್ಷ ಕೋಟಿ ಕಪ್ಪು ಹಣ ಪತ್ತೆ]

ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗಾಗಿ ಕಾನೂನು ಹೋರಾಟ ನಡೆಸಿದ ರಾಮ್ ಜೇಠ್ಮಲಾನಿ ಅವರು ಮೋದಿ ಬಗ್ಗೆ ಮಾತನಾಡುತ್ತಾ, ಆತನನ್ನು ಭಾರತದ ಸಂಕಷ್ಟ ನಿವಾರಣೆಗೆ ದೇವರು ಕಳಿಸಿದ ಪ್ರತಿನಿಧಿ ಎಂದು ಕೊಂಡು ನಾನು ಮೋಸ ಹೋದೆ ಎಂದಿದ್ದಾರೆ.

ಕಪ್ಪು ಹಣ ಹಾಗೂ ವಿದೇಶಿ ತೆರಿಗೆ ಅವ್ಯವಹಾರ ಹತ್ತಿಕ್ಕುವಲ್ಲಿ ಯುಪಿಎ ಹಾಗೂ ಎನ್ ಡಿಎ ಸರ್ಕಾರಗಳೆರಡು ವಿಫಲವಾಗಿವೆ. ಇದಕ್ಕೆ ಪಿ ಚಿದಂಬರಂ ಹಾಗೂ ಅರುಣ್ ಜೇಟ್ಲಿ ಇಬ್ಬರು ಹೊಣೆಗಾರರು, ಕಾಳಧನ ಹೊಂದಿರುವ ಖಾತೆದಾರರ ಹೆಸರು ಬಹಿರಂಗ ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು. (ಪಿಟಿಐ)

English summary
In a severe attack on Prime Minister Narendra Modi, Ram Jethmalani, former Law Minister in the Vajpayee government accused him of "cheating" the people for which he should be "punished". "Modi has cheated the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X