ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಲಿಟರಿ ಸಮವಸ್ತ್ರ ತೊಟ್ಟು ಸೈನಿಕರ ಜತೆ ದೀಪಾವಳಿ ಆಚರಿಸಿದ ಮೋದಿ

By Sachhidananda Acharya
|
Google Oneindia Kannada News

Recommended Video

ಮಿಲಿಟರಿ ಸಮವಸ್ತ್ರ ತೊಟ್ಟು ಸೈನಿಕರ ಜತೆ ದೀಪಾವಳಿ ಆಚರಿಸಿದ ಮೋದಿ | Oneindia Kannada

ಜಮ್ಮು ಮತ್ತು ಕಾಶ್ಮೀರ, ಅಕ್ಟೋಬರ್ 19: ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜತೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಗೂರೆಜ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಯೋಧರ ಜತೆ ಪ್ರಧಾನಿಗಳು ದೀಪಾವಳಿ ಆಚರಿಸಿದರು.

ಸೈನಿಕರು ಜತೆ ಸುಮಾರು ಎರಡು ಗಂಟೆಗಳ ದೀರ್ಘ ಅವಧಿಯನ್ನು ಕಳೆದ ಪ್ರಧಾನಿ ಮೋದಿ ಸೈನಿಕರಿಗೆ ಸಿಹಿ ಹಂಚಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.

Modi celebrates Diwali with jawans

ನಂತರ ಸೈನಿಕರನ್ನುದ್ದೇಶಿ ಮಾತನಾಡಿದ ಪ್ರಧಾನಿ, "ನಾನು ನನ್ನ ಕುಟುಂಬದ ಜತೆ ದೀಪಾವಳಿ ಆಚರಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಅದಕ್ಕಾಗಿಯೇ ಯೋಧರ ಜತೆ ದೀಪಾವಳಿ ಆಚರಿಸಿಕೊಳ್ಳಲು ಬಂದಿದ್ದೇನೆ. ನನಗೆ ಯೋಧರೆಂದರೆ ಕುಟುಂಬದವರಿದ್ದ ಹಾಗೆ," ಎಂದು ಹೇಳಿದರು.

"ನಾನು ಪ್ರತಿ ಬಾರಿ ಸೈನಿಕರನ್ನು ಭೇಟಿಯಾದಾಗಲೂ ಹೊಸ ಶಕ್ತಿ ಪಡೆಯುತ್ತೇನೆ" ಎಂದ ಪ್ರಧಾನಿ, ಕ್ಲಿಷ್ಟ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುವ ಸೈನಿಕರ ಧೈರ್ಯ ಮತ್ತು ತ್ಯಾಗ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಿದರು.

Modi celebrates Diwali with jawans

ಏಕ ಶ್ರೇಣಿ ಏಕ ಪಿಂಚಣಿ ಸೇರಿದಂತೆ ಸೇನೆಯ ಕಲ್ಯಾಣಕ್ಕೆ ಸಾಧ್ಯವಿರುವ ಎಲ್ಲಾ ಕೆಲಸಗಳನ್ನು ಮಾಡಲು ನಮ್ಮ ಸರಕಾರ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು

English summary
Prime Minister Narendra Modi on Thursday celebrated Diwali with the troops of 15 Corps in Gurez Sector along Line of Control (LoC) in North Kashmir's Bandipora district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X