• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

370ನೇ ವಿಧಿ ರದ್ದು ನಂತರ ಮೋದಿಯಿಂದ ಮಹತ್ವದ ನಿರ್ಧಾರ

|

ನವದೆಹಲಿ, ಡಿಸೆಂಬರ್ 05: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನ 370ನೇ ವಿಧಿಯನ್ನು ರದ್ದು ಮಾಡಿದ ಮೋದಿ ನೇತೃತ್ವದ ಸರ್ಕಾರ ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಮೀಸಲಾಗಿದ್ದ ಕೋಟಾ ರದ್ದು ಮಾಡುತ್ತಿದೆ.

ಲೋಕಸಭೆಯಲ್ಲಿ 545 ಸ್ಥಾನಗಳಿದ್ದು, ಈ ಪೈಕಿ 84 ಪರಿಶಿಷ್ಟ ಜಾತಿ, 47 ಪರಿಶಿಷ್ಟ ಪಂಗಡ ಹಾಗೂ ಆಂಗ್ಲೋ ಇಂಡಿಯನ್ ಕೋಟಾಕ್ಕೆ 2 ಸ್ಥಾನಗಳು ಮೀಸಲಾಗಿವೆ. ಈ ಸಮುದಾಯಕ್ಕೆ ಯಾವುದೇ ಅದರದೇ ಆದ ಸ್ವಂತ ರಾಜ್ಯದ ನೆಲೆವಾಸದ ಆಧಾರವಿಲ್ಲ. ಇನ್ನುಳಿದಂತೆ ಆಂಧ್ರ ಪ್ರದೇಶ, ತಮಿಳು ನಾಡು, ಬಿಹಾರ,ಪಶ್ಚಿಮ ಬಂಗಾಲ,ಕರ್ನಾಟಕ ಮತ್ತು ಕೇರಳ ಇತ್ಯಾದಿ ರಾಜ್ಯಗಳ ವಿಧಾನಸಭೆಗಳಲ್ಲಿ ಆಯಾ ಸಮುದಾಯದಿಂದ ಪ್ರಾತಿನಿಧ್ಯ ಪಡೆದಿದ್ದಾರೆ. ಇದೇ ರೀತಿ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಒಂದು ಸ್ಥಾನ ಮೀಸಲಾಗಿರುತ್ತದೆ.

2020ರ ಜೂನ್ ತಿಂಗಳಲ್ಲಿ ''ಒಂದು ದೇಶ, ಒಂದು ಪಡಿತರ ಚೀಟಿ'' ಜಾರಿಗೆ

ಸಂವಿಧಾನದ ಪ್ರಕಾರ ಆಂಗ್ಲೋ ಇಂಡಿಯನ್ ಬ್ರಿಟಿಶ್ ಮತ್ತು ಇಂಡಿಯನ್ ಪೀಳಿಗೆಯ ಮಿಶ್ರಿತ ಪೂರ್ವಜರನ್ನು ಹೊಂದಿದ್ದರೂ ಅವರ ಸ್ಥಳೀಯ ಭಾಷೆಯು ಇಂಗ್ಲೀಷ್ ಆಗಿದೆ.

ಪ್ರಮುಖ 6 ಮಸೂದೆಗಳಿಗೆ ಒಪ್ಪಿಗೆ ನೀಡಿದ ಮೋದಿ ನೇತೃತ್ವದ ಸರ್ಕಾರ

ಈ ಆಂಗ್ಲೊ-ಇಂಡಿಯನ್ ರ ಬ್ರಿಟಿಶ್ ಪೂರ್ವಜರನ್ನು ಪಿತೃತ್ವದ ಆಧಾರದ ಮೇಲೆ ವಂಶಾವಳಿಯ ಮುಂಪೀಳಿಗೆಯನ್ನು ನಿರ್ಧರಿಸಲಾಗುತ್ತದೆ.

(ಮಾಹಿತಿ ಕೃಪೆ: ವಿಕಿಪೀಡಿಯಾ)

ಆಂಗ್ಲೊ ಇಂಡಿಯನ್ ಗಳೆಂದರೆ ಯಾರು?

ಆಂಗ್ಲೊ ಇಂಡಿಯನ್ ಗಳೆಂದರೆ ಯಾರು?

ಭಾರತ ಸಂವಿಧಾನದ ಕಲಮ್ 366(2) ರ ನಿಯಮದ ಪ್ರಕಾರ "ಓರ್ವ ಆಂಗ್ಲೊ ಇಂಡಿಯನ್ ನ ವಂಶಸ್ಥರು ಅಥವಾ ಅವನ ವಂಶಾವಳಿಯ ಪುರುಷರು ಯುರೊಪಿಯನ್ ಮೂಲಕ್ಕೆ ಸೇರಿದವರಾಗಿರುತ್ತಾರೆ.ಆತ ನೆಲೆಸಿರುವ ಭಾರತದ ಪ್ರಾದೇಶಿಕ ಗಡಿಯೊಳಗೆ ಅವರು ವಾಸಿಸಿರುತ್ತಾರೆ ಅಥವಾ ಇದೇ ಪ್ರದೇಶದಲ್ಲಿ ಜನಸಿದವರಾಗಿದ್ದರೆ ಅಥವಾ ಅವರ ತಂದೆ, ತಾಯಿ ಪೋಷಕರು ಇಲ್ಲಿಗೆ ಸೇರಿದವರಾಗಿರಬೇಕು.ಆದರೆ ಅವರು ತಾತ್ಕಾಲಿಕವಾಗಿ ಇಲ್ಲಿ ನೆಲೆವಾಸಿಗಳಾಗಿರಬಾರದು

ಹಲವಾರು ಮಂದಿ ವಲಸೆ ಹೋಗಿದ್ದಾರೆ

ಹಲವಾರು ಮಂದಿ ವಲಸೆ ಹೋಗಿದ್ದಾರೆ

"ಆಂಗ್ಲೊ-ಇಂಡಿಯನ್"ರನ್ನು ಸಂಪೂರ್ಣವಾಗಿ ಯುರೊಪಿಯನ್ (ಪುರುಷ)ಪೂರ್ವಜರಿಗೆ ಸೇರಿದವರಾಗಿರುತ್ತಾರೆ ಎಂದು ವಿವರಿಸುತ್ತದೆ ಈ ವ್ಯಾಖ್ಯಾನದಲ್ಲಿ ಹಳೆಯ ಪೊರ್ಚ್ ಗೀಸ್ ಕಾಲೊನಿಗಳಿಗೆ ಬಂದ ಭಾರತೀಯರನ್ನೂ ಸೇರಿಸಲಾಗಿದೆ.ಎರಡು ಪಂಗಡಗಳಾಗಿರುವ ಕೋರಮಂಡಲ್ ಮತ್ತು ಮಲಬಾರ್, ಕರಾವಳಿಯ ಇವರು ಈಸ್ಟ್ ಇಂಡಿಯಾ ಕಂಪನಿ ಬೆಂಬಲಿಗರಾಗಿ ಸೇರಿದಾಗ ತಮ್ಮ ಕುಟುಂಬಗಳನ್ನು ತಮ್ಮೊಂದಿಗೆ ಕೊಂಡೊಯ್ದರು.

ಹೊರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ

ಹೊರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ

ಅದೇ ರೀತಿಯಾಗಿ ಈ ವ್ಯಾಖ್ಯಾನವು ಮೆಸ್ಟಿಕೊಸ್ (ಮಿಶ್ರಿತ ಪೊರ್ಚ್ ಗೀಸ್ ಮತ್ತು ಭಾರತೀಯ) ಅಂದರೆ ಗೋವಾ ದ ಇಂಡಿಯನ್ಸ,ಅದಲ್ಲದೇ ಇಂಡೊ-ಫ್ರೆಂಚ್, ಮತ್ತು ಇಂಡೊ-ಡಚ್ ವಂಶಾವಳಿಯ ಪೂರ್ವಿಕ ಜನರನ್ನೂ ಒಳಗೊಂಡಿದೆ. ಈ ಆಂಗ್ಲೊ-ಇಂಡಿಯನ್ಸ್ ಭಾರತದ ಸ್ವಾತಂತ್ರ್ಯಕ್ಕಿಂತ ಮೊದಲು ಸಣ್ಣ ಒಂದು ಅಲ್ಪಸಂಖ್ಯಾತ ಸಮೂಹವಾಗಿ ಭಾರತದಲ್ಲಿತ್ತು. ಆದರೆ ಅವರಿಂದು ಭಾರತದಲ್ಲಿಗಿಂತ ಹೆಚ್ಚು ಹೊರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಭಾರತದಲ್ಲಿನ ಅವರ ಸಂಖ್ಯೆಯು ಕಡಿಮೆಯಾಗುತ್ತ ನಡೆದಿದ್ದು, ಬಹಳಷ್ಟು ಜನರು ಯುನೈಟೈಡ್ ಕಿಂಗ್ಡಮ್ ,ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್ ಮತ್ತು ಕೆನಡಾ ಅಲ್ಲದೇ ಕಡಿಮೆ ಪ್ರಮಾಣದಲ್ಲಿ ಯುನೈಟೆಡ್ ಸ್ಟೇಟ್ಸ ಗೆ ವಲಸೆ ಹೋಗಿದ್ದಾರೆ.

ಸಂವಿಧಾನದ 334ನೇ ವಿಧಿ ಅನ್ವಯ ಮೀಸಲಾತಿ

ಸಂವಿಧಾನದ 334ನೇ ವಿಧಿ ಅನ್ವಯ ಮೀಸಲಾತಿ

ಸಂವಿಧಾನದ 334ನೇ ವಿಧಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿರುವ ಮೀಸಲಾತಿ ಅವಧಿಯನ್ನು ಇನ್ನು 10 ವರ್ಷಕ್ಕೆ ವಿಸ್ತರಿಸಲಾಗಿದೆ. ಲೋಕಸಭೆ, ವಿಧಾನಸಭೆಗಳಲ್ಲಿನ ಮೀಸಲಾತಿ ಅವಧಿಯು ಜನವರಿ 25, 2020ರಂದು ಮುಗಿಯಲಿದೆ. ಹೀಗಾಗಿ, ಅವಧಿಯನ್ನು ವಿಸ್ತರಣೆ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

ಈ ಬಾರಿ ನಾಮ ನಿರ್ದೇಶನ ಮಾಡಿಲ್ಲ

ಈ ಬಾರಿ ನಾಮ ನಿರ್ದೇಶನ ಮಾಡಿಲ್ಲ

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ ಈ ಬಾರಿ ಮೋದಿ ಸರ್ಕಾರ್ 2.0ದಲ್ಲಿ ಲೋಕಸಭೆಗೆ ಆಂಗ್ಲೋ ಇಂಡಿಯನ್ ನಾಮನಿರ್ದೇಶನವಾಗಿಲ್ಲ. ಆಂಗ್ಲೋ ಇಂಡಿಯನ್ ಮೀಸಲಾತಿ ಕೋಟಾ ರದ್ದು ಮಾಡುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸಮಾಜ ಕಲ್ಯಾಣ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನೊಳಗೊಂಡ ನಿಯೋಗದ ಶಿಫಾರಸ್ಸನ್ನು ಅಂಗೀಕರಿಸಲಾಗಿದೆ.

ಆದರೆ ಇದು ತಾತ್ಕಾಲಿಕ ಕ್ರಮ ಎಂದು ತಿಳಿದು ಬಂದಿದ್ದು, ಆಂಗ್ಲೋ ಇಂಡಿಯನ್ ಸಮುದಾಯ ಕೂಡಾ ಮೀಸಲಾತಿ ಬೇಡ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಒಂದು ವೇಳೆ ಅಗತ್ಯ ಬಿದ್ದರೆ ಮೀಸಲಾತಿಯನ್ನು ಪುನಃ ಕಲ್ಪಿಸಲಾಗುವುದು ಎಂದು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ರಾಜ್ಯಗಳ ವಿಧಾನಸಭೆಯಲ್ಲಿನ ಆಂಗ್ಲೋ ಇಂಡಿಯನ್ ಮೀಸಲಾತಿ (1 ಸ್ಥಾನ)ಯನ್ನು ರದ್ದುಗೊಳಿಸುವ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಲೋಕಸಭೆಯಂತೆ ವಿಧಾನಸಭೆಗಳಲ್ಲೂ ಮೀಸಲಾತಿ ರದ್ದುಪಡಿಸುವ ಸಾಧ್ಯತೆ ಹೆಚ್ಚಿದೆ.

English summary
According to the law, 84 of the 543 seats in the Lok Sabha are reserved for Scheduled Castes and 47 for Scheduled Tribes. In addition, the government nominates two members from the Anglo-Indian community, making it a house of 545 members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X