ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟ ವಿಸ್ತರಣೆ: ಇಲ್ಲಿದೆ ಸಚಿವರುಗಳ ವಿದ್ಯಾರ್ಹತೆ ವಿವರ

|
Google Oneindia Kannada News

ನವದೆಹಲಿ, ಜು.08: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಕೊನೆಯಾಗಿದೆ. 43 ಮಂದಿ ನೂತನ ಸಚಿವರು ಸಂಪುಟ ಸೇರಿದ್ದಾರೆ.

ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಕರ್ನಾಟಕದ ನಾಲ್ಕು ಮಂದಿ ಕೇಂದ್ರ ಸಂಪುಟ ಸೇರಿದ್ದಾರೆ.

 ಕೇಂದ್ರ ಸಂಪುಟ ವಿಸ್ತರಣೆ: ದಾಖಲೆಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ, 11 ಮಹಿಳೆಯರು, ಮೋದಿ ಸರ್ಕಾರಕ್ಕೆ ಯುವಕರ ಶಕ್ತಿ ಕೇಂದ್ರ ಸಂಪುಟ ವಿಸ್ತರಣೆ: ದಾಖಲೆಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ, 11 ಮಹಿಳೆಯರು, ಮೋದಿ ಸರ್ಕಾರಕ್ಕೆ ಯುವಕರ ಶಕ್ತಿ

ಎನ್‌ಡಿಎ 2.0 ಸರ್ಕಾರದಲ್ಲಿ ಮಹಿಳೆಯರಿಗೆ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸ್ಥಾನಮಾನ ನೀಡಲಾಗಿರುವುದು ಮಾತ್ರವಲ್ಲದೇ ಈ ಬಾರಿಯ ಸಂಪುಟದಲ್ಲಿ ಇರುವ ಹೆಚ್ಚಿನ ಸಚಿವರ ವಿದ್ಯಾರ್ಹತೆ ಉತ್ತಮವಾಗಿದೆ ಎಂದು ವರದಿಯಾಗಿದೆ.

Modi Cabinet Expansion: Ministers of Union Cabinet score high on education

ಮೋದಿಯ ಹೊಸ ತಂಡದಲ್ಲಿ ಶೈಕ್ಷಣಿಕ ಅರ್ಹತೆಗೆ ಹೆಚ್ಚು ಒತ್ತು ನೀಡಲಾಗಿದೆ. ಕೇಂದ್ರ ಸಚಿವ ಸಂಪುಟವು ಏಳು ಮಂದಿ ಪಿಎಚ್‌ಡಿ ಮಾಡಿದವರಾಗಿದ್ದು,


ಮೂರು ಮಂದಿ ಎಂಬಿಎ ಮಾಡಿದ್ದಾರೆ. ಹದಿಮೂರು ಸಚಿವರುಗಳು ವಕೀಲರಾಗಿದ್ದು, ಆರು ಮಂದಿ ವೈದ್ಯರಾಗಿದ್ದಾರೆ. ಐವರು ಎಂಜಿನಿಯರ್‌ಗಳು, ಏಳು ಮಂದಿ ಪೌರಕಾರ್ಮಿಕರು ಇದ್ದಾರೆ. ಇನ್ನು 68 ಮಂತ್ರಿಗಳು ಪದವಿ ಪಡೆದಿದ್ದಾರೆ. ಈ ಬಾರಿ ಹೆಚ್ಚುವ ಯುವಕರಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ ಮಹಿಳೆಯರಿಗೂ ಆದ್ಯತೆ ನೀಡಲಾಗಿದೆ.

ಸಚಿವರುಗಳು ಶಿಕ್ಷಣಾರ್ಹತೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌: ಸ್ನಾತಕೋತ್ತರ ಪದವೀಧರ

ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ: ಬಿಎಸ್‌ಸಿ ಪದವಿ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌: ಎಂಬಿಎ, ಎಂ ಟೆಕ್‌, ಮಾಜಿ ಐಎಎಸ್‌ ಅಧಿಕಾರಿ

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ: ಎಂಬಿಎ, ಬಿಎ

ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ: ಎಂಎ

ಹರ್ದೀಪ್ ಸಿಂಗ್ ಪುರಿ (ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ): ಎಂಎ, ಬಿಎ

ಪಿಯೂಷ್ ಗೊಯೆಲ್ (ಜವಳಿ ವಾಣಿಜ್ಯ ವ್ಯವಹಾರ): ಎಎಲ್‌ಬಿ, ಬಿಕಾಂ

ಪ್ರಧಾನಿ ನರೇಂದ್ರ ಮೋದಿ: ಎಂಎ, ಬಿಎ

ರಾಜನಾಥ್ ಸಿಂಗ್ (ರಕ್ಷಣಾ ಖಾತೆ): ಎಂಎಸ್‌ಸಿ

ನಿತಿನ್ ಗಡ್ಕರಿ (ರಸ್ತೆ ಸಾರಿಗೆ ಹಾಗೂ ಹೆದ್ದಾರಿ): ಎಎಲ್‌ಬಿ, ಎಮ್‌ಕಾಂ

ನಿರ್ಮಲಾ ಸೀತಾರಾಮನ್ (ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರ): ಎಮ್‌ಫಿಲ್‌, ಎಂಎ, ಬಿಎ

ನರೇಂದ್ರ ಸಿಂಗ್ ತೋಮರ್ (ಕೃಷಿ ಹಾಗೂ ರೈತ ಕಲ್ಯಾಣ): ಪದವಿ

ಡಾ. ಸುಬ್ರಮಣ್ಯಂ ಜೈಶಂಕರ್ (ವಿದೇಶಾಂಗ ವ್ಯವಹಾರ): ಪಿಎಚ್‌ಡಿ, ಎಂಫಿಲ್‌, ಎಂಎ

ಅರ್ಜುನ್ ಮುಂಡಾ (ಬುಡಕಟ್ಟು ವ್ಯವಹಾರ): ಡಿಪ್ಲೋಮಾ

ಸ್ಮೃತಿ ಜುಬಿನ್ ಇರಾನಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ): ಬಿ.ಕಾಂ (ಅಪೂರ್ಣ)

ಪ್ರಹ್ಲಾದ್ ಜೋಶಿ (ಸಂಸದೀಯ ವ್ಯವಹಾರ, ಕಲ್ಲಿದ್ದಲ್ಲು ಹಾಗೂ ಗಣಿಗಾರಿಕೆ): ಪದವಿ

ನಾರಾಯಣ್ ರಾಣೆ (ಮೈಕ್ರೋ, ಸಣ್ಣ ಹಾಗೂ ಮಧ್ಯಮ ಉದ್ದಿಮೆ): ಎಸ್‌ಎಸ್‌ಎಲ್‌ಸಿ

ಸರ್ಬಾನಂದ್ ಸೊನೊವಾಲ್ (ಬಂದರು, ಶಿಪ್ಪಿಂಗ್, ಜಲಯಾನ, ಆಯುಷ್): ಎಲ್‌ಎಲ್‌ಬಿ, ಬಿಸಿಜೆ, ಬಿಎ

ಮುಖ್ತಾರ್ ಅಬ್ಬಾಸ್ ನಖ್ವಿ (ಅಲ್ಪಸಂಖ್ಯಾತ ವ್ಯವಹಾರ): ಸಾಮೂಹಿಕ ಸಂವಹನ

ವೀರೇಂದ್ರ ಕುಮಾರ್ (ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ): ಡಾಕ್ಟರೇಟ್‌

ಗಿರಿರಾಜ್ ಸಿಂಗ್ (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್): ಪದವಿ

ರಾಮಚಂದ್ರ ಪ್ರಸಾದ್ ಸಿಂಗ್ (ಉಕ್ಕು): ಎಂಎ, ಬಿಎ

ಪಶು ಪತಿ ಕುಮಾರ್ ಪರಸ್ (ಆಹಾರ ಸಂಸ್ಕರಣ ಉದ್ದಿಮೆ): ಪದವಿ

ಗಜೇಂದ್ರ ಸಿಂಗ್ ಶೇಖಾವತ್ (ಜಲಶಕ್ತಿ): ಎಮ್‌ಫಿಲ್‌, ಎಂಎ

ಕಿರಣ್ ರಿಜಿಜು (ಕಾನೂನು ಮತ್ತು ನ್ಯಾಯ): ಪದವಿ

ರಾಜ್ ಕುಮಾರ್ ಸಿಂಗ್ (ಇಂಧನ ಹಾಗೂ ಹೊಸ ಪುನರ್ಬಳಕೆ ಶಕ್ತಿ): ಎಲ್‌ಎಲ್‌ಬಿ, ಬಿಎ

ಭೂಪೇಂದ್ರ ಬಘೇಲ್ (ಪರಿಸರ, ಅರಣ್ಯ, ತಾಪಮಾನ ಬದಲಾವಣೆ, ಕಾರ್ಮಿಕ ಖಾತೆ): ಸ್ನಾತಕೋತ್ತರ ಪದವಿ

ಡಾ ಮಹೇಂದ್ರ ನಾಥ್ ಪಾಂಡೆ (ಕೈಗಾರಿಕೆ): ಪಿಎಚ್‌ಡಿ, ಎಂಎ

ಪರುಷೋತ್ತಮ ರುಪಾಲ (ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ): ಬಿಎಸ್‌ಸಿ, ಬಿಎಡ್‌

ಜಿ ಕಿಶನ್ ರೆಡ್ಡಿ (ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ): ಡಿಪ್ಲೋಮಾ

ಅನುರಾಗ್ ಸಿಂಗ್ ಠಾಕೂರ್ (ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಯುವಜನ ಮತ್ತು ಕ್ರೀಡೆ): ಬಿಎ

ರಾವ್ ಇಂದ್ರಜಿತ್ ಸಿಂಗ್ (ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ, ರಾಜ್ಯ ಸಚಿವರು, ಸ್ವತಂತ್ರ ಖಾತೆ): ಕಾನೂನು ಪದವಿ

ಡಾ ಜಿತೇಂದ್ರ ಸಿಂಗ್ (ವಿಜ್ಞಾನ ಮತ್ತು ತಂತ್ರಜ್ಞಾನ, ರಾಜ್ಯ ಸಚಿವರು, ಸ್ವತಂತ್ರ ಖಾತೆ): ಎಂಬಿಬಿಎಸ್‌, ಎಂಡಿ

ಶ್ರೀಪಾದ ನಾಯ್ಕ್ (ಬಂದರು ರಾಜ್ಯ ಸಚಿವರು): ಬಿಎ

ಫಗನ್ ಸಿಂಗ್ ಕುಲಾಸ್ತೆ (ಉಕ್ಕು, ಗ್ರಾಮೀಣಾಭಿವೃದ್ಧಿ): ಎಂಎ, ಬಿಎಡ್‌, ಎಲ್‌ಎಲ್‌ಬಿ

ಶೋಭಾ ಕರಂದ್ಲಾಜೆ (ಕೃಷಿ ಮತ್ತು ರೈತ ಕಲ್ಯಾಣ): ಎಂಎ, ಎಂಎಸ್‌ಡಬ್ಲ್ಯೂ

ಪ್ರಹ್ಲಾದ್ ಸಿಂಗ್ ಪಟೇಲ್ (ಜಲಶಕ್ತಿ, ಆಹಾರ ಸಂಸ್ಕರಣ ಉದ್ದಿಮೆ): ಪದವಿ

ಅಶ್ವಿನಿ ಕುಮಾರ್ ಚೌಬೆ (ಗ್ರಾಹಕ ವ್ಯವಹಾರ): ಪದವಿ

ಅರ್ಜುನ್ ರಾಮ್ ಮೇಘ್ವಾಲ್ (ಸಂಸದೀಯ ವ್ಯವಹಾರ, ಸಂಸ್ಕೃತಿ): ಎಂಎ, ಎಲ್‌ಎಲ್‌ಬಿ, ಎಂಬಿಎ, ಮಾಜಿ ಐಎಎಸ್‌ ಅಧಿಕಾರಿ

ಜನರಲ್ (ನಿವೃತ್ತಿ) ವಿ.ಕೆ ಸಿಂಗ್ (ರಸ್ತೆ ಸಾರಿಗೆ, ಹೆದ್ದಾರಿ, ನಾಗರಿಕ ವಿಮಾನಯಾನ): ಎನ್‌ಡಿಎ, ಐಎಂಎ, ರೇಂಜರ್‌ ಸ್ಕೂಲ್‌, ಡಿಎಸ್‌ಎಸ್‌ಸಿ, ಯುಎಸ್‌ಎಡಬ್ಲ್ಯೂಸಿ

ಸಾಧ್ವಿ ನಿರಂಜನ್ ಜ್ಯೋತಿ (ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ, ಗ್ರಾಮೀಣಾಭಿವೃದ್ಧಿ): 12 ನೇ ತರಗತಿ

ಎ ನಾರಾಯಣಸ್ವಾಮಿ (ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ): ಪದವಿ

ಭಗವಂತ ಖೂಬಾ (ಪುನರ್ಬಳಕೆ ಇಂಧನ, ರಸಗೊಬ್ಬರ, ರಾಸಾಯನಿಕ ಖಾತೆ): ಇಂಜಿನಿಯರಿಂಗ್‌

ಭಾರತಿ ಪ್ರವೀಣ್ ಪವಾರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ): ಎಂಬಿಬಿಎಸ್‌

ಮೀನಾಕ್ಷಿ ಲೇಖಿ (ವಿದೇಶಾಂಗ ವ್ಯವಹಾರ, ಸಂಸ್ಕೃತಿ): ಬಿಎಸ್‌ಸಿ, ಎಲ್‌ಎಲ್‌ಬಿ

ಭಾನುಪ್ರತಾಪ್ ಸಿಂಗ್ ವರ್ಮ (ಮೈಕ್ರೋ ಸಣ್ಣ ಹಾಗೂ ಮಧ್ಯಮ ಉದ್ದಿಮೆ): ಎಂಎ, ಎಲ್‌ಎಲ್‌ಬಿ

ಅನ್ನಪೂರ್ಣ ದೇವಿ (ಶಿಕ್ಷಣ ರಾಜ್ಯ ಸಚಿವರು): ಸ್ನಾತಕೋತ್ತರ ಪದವಿ

(ಒನ್‌ಇಂಡಿಯಾ ಸುದ್ದಿ)

English summary
Modi Cabinet Expansion: Here is the Education background of Union Cabinet new ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X