ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಂಪುಟ ವಿಸ್ತರಣೆ: ದಕ್ಷಿಣದ ಪ್ರಾದೇಶಿಕ ಪಕ್ಷ ಸೆಳೆಯುವ ಅಮಿತ್ ಶಾ ಪ್ರಯತ್ನ ವಿಫಲ

|
Google Oneindia Kannada News

ನವದೆಹಲಿ, ಜುಲೈ 7: ಬಹು ನಿರೀಕ್ಷಿತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾರೆಲ್ಲಾ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ, ಯಾರಿಗೆ ಕೊಕ್ ಸಿಗಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸಂಸದರು ಕ್ಯಾಬಿನೆಟ್ ನಲ್ಲಿ ಸೇರಲಿದ್ದಾರೆ. ನಾಲ್ಕು ಸಚಿವ ಸ್ಥಾನವನ್ನು ನಿತೀಶ್ ಕುಮಾರ್ ಡಿಮ್ಯಾಂಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!

ಇನ್ನು, ಕರ್ನಾಟಕದಿಂದ ಇಬ್ಬರು ಅಥವಾ ಮೂವರು ಸಚಿವರಾಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ನಾಲ್ಕು ಸಂಸದರ ಹೆಸರು ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ. ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಈಗಾಗಲೇ ಕುಟುಂಬ ಸಮೇತ ದೆಹಲಿಯಲ್ಲಿದ್ದಾರೆ.

ಈ ನಡುವೆ, ಸಂಪುಟ ವಿಸ್ತರಣೆಯ ಮೂಲಕ, ದಕ್ಷಿಣ ಭಾರತದ ಮತ್ತೊಂದು ಆಡಳಿತಾರೂಢ ಪಕ್ಷವನ್ನು ತಮ್ಮ ಜೊತೆ ಕರೆದುಕೊಂಡು ಹೋಗಬೇಕು ಎನ್ನುವ ಬಿಜೆಪಿಯ ಪ್ಲ್ಯಾನ್ ತಲೆಕೆಳಗಾಗಿದೆ.

ಮೋದಿ ಕ್ಯಾಬಿನೆಟ್​​ನಲ್ಲಿ ಚಿತ್ರದುರ್ಗ ಸಂಸದನಿಗೆ ಸ್ಥಾನ?ಮೋದಿ ಕ್ಯಾಬಿನೆಟ್​​ನಲ್ಲಿ ಚಿತ್ರದುರ್ಗ ಸಂಸದನಿಗೆ ಸ್ಥಾನ?

 ಮೋದಿ, ಅಮಿತ್ ಶಾ ಜೊತೆ ಉತ್ತಮ ಬಾಂಧವ್ಯವನ್ನುಜಗನ್ಮೋಹನ್ ರೆಡ್ಡಿ

ಮೋದಿ, ಅಮಿತ್ ಶಾ ಜೊತೆ ಉತ್ತಮ ಬಾಂಧವ್ಯವನ್ನುಜಗನ್ಮೋಹನ್ ರೆಡ್ಡಿ

ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರನ್ನು ಸೆಳೆಯುವ ಪ್ರಯತ್ನ ಫಲ ಕೊಡಲಿಲ್ಲ. ವೈಎಸ್ಆರ್ ಪಕ್ಷ ನೇರವಾಗಿ ಎನ್ಡಿಎ ಮೈತ್ರಿಕೂಟದ ಭಾಗವಾಗದಿದ್ದರೂ, ಮೋದಿ ಸರಕಾರಕ್ಕೆ ಬೆಂಬಲವನ್ನು ನೀಡಿತ್ತು. (ಚಿತ್ರ:ಪಿಟಿಐ)

 ಖುದ್ದು, ಅಮಿತ್ ಶಾ ಅವರೇ ಜಗನ್ ಬಳಿ ಮಾತುಕತೆ ನಡೆಸಿದ್ದರು

ಖುದ್ದು, ಅಮಿತ್ ಶಾ ಅವರೇ ಜಗನ್ ಬಳಿ ಮಾತುಕತೆ ನಡೆಸಿದ್ದರು

ಕೇಂದ್ರ ಸಂಪುಟಕ್ಕೆ ಸೇರುವಂತೆ ಜಗನ್ಮೋಹನ್ ರೆಡ್ಡಿಗೆ ಆಫರ್ ಹೋಗಿತ್ತು. ವೈಎಸ್ಆರ್ ಪಕ್ಷದ ಸಂಸದರು ಸಂಪುಟದ ಭಾಗವಾಗಬೇಕೆಂದು ಪ್ರಧಾನಿ ಮೋದಿ ಬಯಸಿದ್ದರು. ಖುದ್ದು, ಅಮಿತ್ ಶಾ ಅವರೇ ಜಗನ್ ಬಳಿ ಮಾತುಕತೆ ನಡೆಸಿದ್ದರು. ಆದರೆ, ಜಗನ್ ತಮ್ಮ ನಿಲುವನ್ನು ಬದಲಿಸಲಿಲ್ಲ ಎಂದು ಹೇಳಲಾಗುತ್ತಿದೆ. (ಚಿತ್ರ:ಪಿಟಿಐ)

 ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಎರಡು ಸ್ವತಂತ್ರ ಖಾತೆ

ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಎರಡು ಸ್ವತಂತ್ರ ಖಾತೆ

ಒಂದು ಕ್ಯಾಬಿನೆಟ್ ಸ್ಥಾನ ಮತ್ತು ಎರಡು ಸ್ವತಂತ್ರ ಖಾತೆಯನ್ನು ಜಗನ್ ಪಾರ್ಟಿಗೆ ನೀಡಲು ಮೋದಿ ಮತ್ತು ಶಾ ಸಿದ್ದರಿದ್ದರು. ಕಳೆದ ಬಾರಿ ಮೋದಿಯನ್ನು ಭೇಟಿಯಾಗಲು ಜಗನ್ ದೆಹಲಿಗೆ ಹೋಗಿದ್ದಾಗ, ಈ ವಿಚಾರಕ್ಕಾಗಿಯೇ ಜಗನ್ ದೆಹಲಿಗೆ ಹೋಗುತ್ತಿದ್ದಾರೆಂದು ಸುದ್ದಿಯಾಗಿತ್ತು. (ಚಿತ್ರ:ಪಿಟಿಐ)

 ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆನ್ನುವ ತಮ್ಮ ನಿಲುವು

ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆನ್ನುವ ತಮ್ಮ ನಿಲುವು

ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆನ್ನುವ ತಮ್ಮ ನಿಲುವಿನಿಂದ ವೈ.ಎಸ್.ಜಗನ್ ಹಿಂದಕ್ಕೆ ಸರಿಯದೇ, ಸಚಿವ ಸ್ಥಾನ ಬೇಡವೆನ್ನುವ ನಿಲುವಿಗೆ ಅಂಟಿಕೊಂಡಿದ್ದಾರೆ. ಆ ಮೂಲಕ, ಕರ್ನಾಟಕದ ಜೊತೆಗೆ ದಕ್ಷಿಣದ ಇನ್ನೊಂದು ರಾಜ್ಯಗಳಲ್ಲಿ ಹಿಡಿತ ಸಾಧಿಸಬಹುದು ಎನ್ನುವ ಬಿಜೆಪಿ ವರಿಷ್ಠರ ಲೆಕ್ಕಾಚಾರ ಸದ್ಯ ವರ್ಕೌಟ್ ಆಗಿಲ್ಲ. (ಚಿತ್ರ:ಪಿಟಿಐ)

English summary
Modi Cabinet Expansion: Amit Shah couldn't able to get support of YSR Congress Party in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X