ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟ ವಿಸ್ತರಣೆ: 11 ಸಚಿವರುಗಳ ರಾಜೀನಾಮೆಗೆ ಕಾರಣವಾದ ಒಂದು ಫೋನ್‌ ಕರೆ

|
Google Oneindia Kannada News

ನವದೆಹಲಿ, ಜು.08: ಕೇಂದ್ರ ನಾಲ್ವರು ಹಿರಿಯ ಸಚಿವರಾದ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಹರ್ಷವರ್ಧನ್‌, ರಮೇಶ್ ಪೋಖ್ರಿಯಲ್ ಬುಧವಾರ ಸಂಜೆ ನಡೆದ ಸಂಪುಟ ಪುನರ್‌ ರಚನೆಗೂ ಮುನ್ನ ರಾಜೀನಾಮೆ ನೀಡಿದ 11 ಸಚಿವರಲ್ಲಿ ಒಳಗೊಂಡಿದ್ದಾರೆ. ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಇದು ಕೇವಲ ಒಂದು ಫೋನ್ ಕರೆಯಿಂದ ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಈ ಅವಧಿಯಲ್ಲಿ ತಮ್ಮ ಮೊದಲ ಮೊದಲ ಸಂಪುಟ ಪುನರ್‌ ರಚನೆ ಮಾಡಲು ಸಿದ್ದತೆ ನಡೆಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ 11 ಫೋನ್ ಕರೆಗಳನ್ನು ಮಾಡಿದ್ದು, ಆ ಬಳಿಕ 11 ಸಚಿವರುಗಳು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಮೋದಿ ಸಂಪುಟ ವಿಸ್ತರಣೆ: ಇಲ್ಲಿದೆ ಸಚಿವರುಗಳ ವಿದ್ಯಾರ್ಹತೆ ವಿವರಮೋದಿ ಸಂಪುಟ ವಿಸ್ತರಣೆ: ಇಲ್ಲಿದೆ ಸಚಿವರುಗಳ ವಿದ್ಯಾರ್ಹತೆ ವಿವರ

ಪ್ರಕಟಣೆಯ ಸಮಯ ಹತ್ತಿರವಾಗುತ್ತಿದ್ದಂತೆ, ನಡ್ಡಾ 11 ಕೇಂದ್ರ ಮಂತ್ರಿಗಳಿಗೆ ಡಯಲ್ ಮಾಡಿ ತಮ್ಮ ರಾಜೀನಾಮೆ ಸಲ್ಲಿಕೆ ಮಾಡುವಂತೆ ಹೇಳಿದ್ದಾರೆ ಎಂದು ಮೂಲಗಳು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿವೆ.
ಬಳಿಕ ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಹರ್ಷವರ್ಧನ್‌, ರಮೇಶ್ ಪೋಖ್ರಿಯಲ್ 'ನಿಶಾಂಕ್', ಡಿ.ವಿ.ಸದಾನಂದ ಗೌಡ, ಸಂತೋಷ್ ಗಂಗ್ವಾರ್, ಸಂಜಯ್ ಧೋತ್ರೆ, ದೇಬಾಶ್ರೀ ಚೌಧುರಿ, ರಥನ್‌ ಲಾಲ್‌ ಕಟಾರಿ ರಾಜೀನಾಮೆಯನ್ನು ನೀಡಿದ್ದು ಅದನ್ನು ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಸ್ವೀಕರಿಸಿದ್ದಾರೆ.

Modi Cabinet Expansion: A Phone Call That Led to 11 Resignations

ಪಿಎಂ ಮೋದಿಯವರ ಹೊಸ ಸಂಪುಟದಲ್ಲಿ ಹೊಸ ಮುಖಗಳ ಸಂಖ್ಯೆ ಅಧಿಕವಾಗುತ್ತಲಿದೆ. ಹಾಗೆಯೇ ಯುವಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್‌ರನ್ನು ಮಂಗಳವಾರ ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡಿದ ನಂತರ ರಾಜೀನಾಮೆ ನೀಡಿದ್ದರು.

ಮೋದಿ ಸಂಪುಟ ವಿಸ್ತರಣೆಗೂ ಮುನ್ನ ರಾಜೀನಾಮೆ ಕೊಟ್ಟ ಸಚಿವರಿವರುಮೋದಿ ಸಂಪುಟ ವಿಸ್ತರಣೆಗೂ ಮುನ್ನ ರಾಜೀನಾಮೆ ಕೊಟ್ಟ ಸಚಿವರಿವರು

ಒಟ್ಟಾರೆಯಾಗಿ, ಆರು ಕ್ಯಾಬಿನೆಟ್ ಮಂತ್ರಿಗಳು, ಒಬ್ಬ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ಐವರು ರಾಜ್ಯ ಸಚಿವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ, ಅವರಲ್ಲಿ ಕೆಲವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಯೋಗ್ರಫಿಯನ್ನು ಬದಲಾಯಿಸಿಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Modi Cabinet Expansion: A Phone Call That Led to 11 Resignations. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X