ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4,077 ಕೋಟಿ ರೂ ವೆಚ್ಚದ ಆಳ ಸಮುದ್ರ ಅಭಿಯಾನಕ್ಕೆ ಸಂಪುಟ ಅಸ್ತು

|
Google Oneindia Kannada News

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ, ಭೂ ವಿಜ್ಞಾನ ಸಚಿವಾಲಯ (ಎಂ.ಓ.ಇ.ಎಸ್.) ಸಲ್ಲಿಸಿದ್ದ ಆಳವಾದ ಸಾಗರದಲ್ಲಿ ಸಂಪನ್ಮೂಲಗಳನ್ನು ಅನ್ವೇಷಿಸುವ ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಗಾಗಿ ಆಳ ಸಮುದ್ರದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯ "ಆಳ ಸಮುದ್ರ ಅಭಿಯಾನ "ಕ್ಕೆ ತನ್ನ ಅನುಮೋದನೆ ನೀಡಿದೆ.

ಮುಂದಿನ ಐದು ವರ್ಷಗಳಿಗೆ ಈ ಅಭಿಯಾನದ ಅಂದಾಜು ವೆಚ್ಚ 4,077 ಕೋಟಿ ರೂ.ಗಳಾಗಿದ್ದು, ಹಂತ ಹಂತವಾಗಿ ಅನುಷ್ಠಾನ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 3 ವರ್ಷಗಳಿಗೆ (2021-2024) ಇದರ ಅಂದಾಜು ವೆಚ್ಚ 2,823.4 ಕೋಟಿ ರೂ.ಗಳಾಗಿದೆ. ಆಳ ಸಮುದ್ರ ಅಭಿಯಾನವು ಅಭಿಯಾನದೋಪಾದಿಯ ಯೋಜನೆಯಾಗಿದ್ದು, ಇದು ಭಾರತ ಸರ್ಕಾರದ ನೀಲಿ ಆರ್ಥಿಕತೆಯ ಉಪಕ್ರಮಕ್ಕೆ ಬೆಂಬಲ ನೀಡಲಿದೆ. ಭೂ ವಿಜ್ಞಾನಗಳ ಸಚಿವಾಲಯ (ಎಂ.ಓ.ಇ.ಎಸ್.) ಈ ಬಹು ಸಾಂಸ್ಥಿಕ ಮಹತ್ವಾಕಾಂಕ್ಷೆಯ ಅಭಿಯಾನದ ಅನುಷ್ಠಾನಕ್ಕೆ ನೋಡಲ್ ಸಚಿವಾಲಯವಾಗಿದೆ.

ಆಳ ಸಮುದ್ರ ಅಭಿಯಾನ ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ:

* ಆಳ ಸಮುದ್ರ ಗಣಿಗಾರಿಕೆ ಮತ್ತು ಸಾಗರದಾಳಕ್ಕೆ ಇಳಿಯುವ ತಂತ್ರಜ್ಞಾನಗಳ ಅಭಿವೃದ್ಧಿ: ವೈಜ್ಞಾನಿಕ ಸಂವೇದಕಗಳು ಮತ್ತು ಸಾಧನಗಳ ಸೂಟ್‌ ನೊಂದಿಗೆ ಮೂರು ಜನರನ್ನು 6000 ಮೀಟರ್ ಸಾಗರದಾಳಕ್ಕೆ ಕಳುಹಿಸಲು ಮಾನವ ಸಹಿತ ಸಾಗರದಾಳಕ್ಕೆ ಇಳಿಯುವ
ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುವುದು. ಕೆಲವೇ ಕೆಲವು ದೇಶಗಳು ಮಾತ್ರ ಈ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಮಧ್ಯ ಹಿಂದೂ ಮಹಾಸಾಗರದ 6000 ಮೀಟರ್ ಆಳದಿಂದ ಪಾಲಿಮೆಟಾಲಿಕ್ ನೋಡ್ಯೂಲ್ ಗಳ ಗಣಿಗಾರಿಕೆ ಮಾಡಲು ಸಮಗ್ರ ಗಣಿಗಾರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಖನಿಜಗಳ ಪರಿಶೋಧನೆ ಅಧ್ಯಯನಗಳು ಮುಂದಿನ ದಿನಗಳಲ್ಲಿ ವಾಣಿಜ್ಯ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ ಮತ್ತು ವಾಣಿಜ್ಯ ಅನ್ವೇಷಣೆ ಸಂಹಿತೆಯನ್ನು ವಿಶ್ವ ಸಂಸ್ಥೆಯ ಸಂಘಟನೆಯಾದ ಅಂತಾರಾಷ್ಟ್ರೀಯ ಸಾಗರ ತಟ ಪ್ರಾಧಿಕಾರ ವಿಕಾಸಗೊಳಿಸಿದೆ. ಇದು ಆಳ ಸಮುದ್ರದಲ್ಲಿನ ಖನಿಜ ಮತ್ತು ಇಂಧನವನ್ನು ಅನ್ವೇಷಿಸಲು ನೀಲಿ ಆರ್ಥಿಕತೆಗೆ ಆದ್ಯತೆಯ ನೆರವು ನೀಡುತ್ತದೆ.

Modi Cabinet approves Deep Ocean Mission, Know more about it

* ಸಾಗರ ಹವಾಮಾನ ಬದಲಾವಣೆ ಸಲಹಾ ಸೇವೆಗಳ ಅಭಿವೃದ್ಧಿ: ಪರಿಕಲ್ಪನೆಯ ಘಟಕದ ಈ ಪುರಾವೆಯಡಿಯ ಸಾಧನದಲ್ಲಿ ಸಮಯೋಚಿತ ಮತ್ತು ದಶಮಾಂಶ ಕಾಲ ಮಾಪಕಗಳಲ್ಲಿನ ಪ್ರಮುಖ ಹವಾಮಾನ ಅಸ್ಥಿರತೆಗಳ ಭವಿಷ್ಯದ ಪ್ರಕ್ಷೇಪಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಒದಗಿಸಲು ಅವಲೋಕನಗಳು ಮತ್ತು ಮಾದರಿಗಳ ಸೂಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಘಟಕವು ಕರಾವಳಿ ಪ್ರವಾಸೋದ್ಯಮದ ನೀಲಿ ಆರ್ಥಿಕತೆಯ ಆದ್ಯತೆಯ ಪ್ರದೇಶವನ್ನು ಬೆಂಬಲಿಸುತ್ತದೆ.

* ಆಳ ಸಮುದ್ರ ಜೀವ ವೈವಿಧ್ಯಗಳ ಪರಿಶೋಧನೆ ಮತ್ತು ಸಂರಕ್ಷಣೆಗೆ ತಾಂತ್ರಿಕ ಆವಿಷ್ಕಾರಗಳು: ಸೂಕ್ಷ್ಮಜೀವಿಗಳು ಮತ್ತು ಆಳ ಸಮುದ್ರದ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಕುರಿತಾದ ಅಧ್ಯಯನಗಳು ಸೇರಿದಂತೆ ಆಳ ಸಮುದ್ರದ ಸಸ್ಯ ಮತ್ತು ಪ್ರಾಣಿಗಳ ಜೈವಿಕ ಸಂಪನ್ಮೂಲ ಗಮನ ಕೇಂದ್ರವಾಗಿದೆ. ಈ ಘಟಕವು ಸಾಗರ ಮೀನುಗಾರಿಕೆ ಮತ್ತು ಪೂರಕ ಸೇವೆಗಳ ನೀಲಿ ಆರ್ಥಿಕತೆಯ ಆದ್ಯತೆಯ ಪ್ರದೇಶವನ್ನು ಬೆಂಬಲಿಸುತ್ತದೆ.

Modi Cabinet approves Deep Ocean Mission, Know more about it

* ಆಳ ಸಮುದ್ರ ಸಮೀಕ್ಷೆ ಮತ್ತು ಪರಿಶೋಧನೆ: ಹಿಂದೂ ಮಹಾಸಾಗರದ ಮಧ್ಯ-ಸಾಗರ ರೇಖೆಗಳ ಉದ್ದಕ್ಕೂ ಬಹು-ಲೋಹದ ಜಲವಿದ್ಯುತ್ ಸಲ್ಫೈಡ್ಸ್ ಖನಿಜೀಕರಣದ ಸಂಭಾವ್ಯ ತಾಣಗಳನ್ನು ಅನ್ವೇಷಿಸುವುದು ಮತ್ತು ಗುರುತಿಸುವುದು ಈ ಘಟಕದ ಪ್ರಾಥಮಿಕ ಉದ್ದೇಶವಾಗಿದೆ. ಈ ಘಟಕವು ಸಾಗರ ಸಂಪನ್ಮೂಲಗಳ ಆಳವಾದ ಸಮುದ್ರ ಪರಿಶೋಧನೆಯ ನೀಲಿ ಆರ್ಥಿಕತೆಯ ಆದ್ಯತೆಯ ಪ್ರದೇಶವನ್ನು ಹೆಚ್ಚುವರಿಯಾಗಿ ಬೆಂಬಲಿಸುತ್ತದೆ.

* ಸಾಗರದಿಂದ ಇಂಧನ ಮತ್ತು ಸಿಹಿನೀರು: ಕಡಲಾಚೆಯ ಸಾಗರವನ್ನು ಶಾಖೋತ್ಪನ್ನ ವಿದ್ಯುತ್ ಆಗಿ ಪರಿವರ್ತನೆ (ಒಟಿಇಸಿ) ಚಾಲಿತ ಕ್ಷಾರ ತೆಗೆಯುವ ಘಟಕದ ಅಧ್ಯಯನಗಳು ಮತ್ತು ವಿವರವಾದ ಎಂಜಿನಿಯರಿಂಗ್ ವಿನ್ಯಾಸವನ್ನು ಪರಿಕಲ್ಪನೆಯ ಪ್ರಸ್ತಾಪದ ಈ ಪುರಾವೆಗಳಲ್ಲಿ ಊಹಿಸಲಾಗಿದೆ. ಈ ಘಟಕವು ಸಾಗರದಾಚೆ ಇಂಧನ ಅಭಿವೃದ್ಧಿಯ ನೀಲಿ ಆರ್ಥಿಕತೆಯ ಆದ್ಯತೆಯ ಪ್ರದೇಶವನ್ನು ಬೆಂಬಲಿಸುತ್ತದೆ

Modi Cabinet approves Deep Ocean Mission, Know more about it

* ಸಾಗರ ಜೀವಶಾಸ್ತ್ರ ಸುಧಾರಿತ ಸಾಗರ ನಿಲ್ದಾಣ: ಸಾಗರ ಜೀವಶಾಸ್ತ್ರ ಮತ್ತು ಎಂಜಿನಿಯರಿಂಗ್‌ ನಲ್ಲಿ ಮಾನವ ಸಾಮರ್ಥ್ಯ ಮತ್ತು ಉದ್ಯಮದ ಅಭಿವೃದ್ಧಿಯಂತೆ ಈ ಘಟಕವನ್ನು ಉದ್ದೇಶಿಸಲಾಗಿದೆ. ಈ ಘಟಕವು ಸ್ಥಳದಲ್ಲೇ ವ್ಯವಹಾರ ಇನ್ಕ್ಯುಬೇಟರ್ ಸೌಲಭ್ಯಗಳ ಮೂಲಕ ಕೈಗಾರಿಕಾ ಆನ್ವಯಿಕ ಮತ್ತು ಉತ್ಪನ್ನ ಅಭಿವೃದ್ಧಿಗೆ ಸಂಶೋಧನೆಯನ್ನು ಪರಿವರ್ತಿಸುತ್ತದೆ. ಈ ಘಟಕವು ಸಾಗರ ಜೀವಶಾಸ್ತ್ರ, ನೀಲಿ ವ್ಯಾಪಾರ ಮತ್ತು ನೀಲಿ ಉತ್ಪಾದನೆಯ, ನೀಲಿ ಜತೆಗೆ ಸಂದ ಆದ್ಯತೆಯ ಪ್ರದೇಶವನ್ನು ಬೆಂಬಲಿಸುತ್ತದೆ.

ಆಳ ಸಮುದ್ರದ ಗಣಿಗಾರಿಕೆಗೆ ಅಗತ್ಯವಾದ ತಂತ್ರಜ್ಞಾನಗಳು ವ್ಯೂಹಾತ್ಮಕ ಪರಿಣಾಮಗಳನ್ನು ಹೊಂದಿದ್ದರೂ ವಾಣಿಜ್ಯಿಕವಾಗಿ ಲಭ್ಯವಿರುವುದಿಲ್ಲ. ಆದ್ದರಿಂದ, ಪ್ರಮುಖ ಸಂಸ್ಥೆಗಳು ಮತ್ತು ಖಾಸಗಿ ಕೈಗಾರಿಕೆಗಳೊಂದಿಗೆ ಸಹಕರಿಸುವ ಮೂಲಕ ತಂತ್ರಜ್ಞಾನಗಳನ್ನು ದೇಶೀಯವಾಗಿಸಲು ಪ್ರಯತ್ನಿಸಲಾಗುವುದು. ಆಳವಾದ ಸಾಗರ ಪರಿಶೋಧನೆಗಾಗಿ ಸಂಶೋಧನಾ ಹಡಗುಗಳನ್ನು ಭಾರತೀಯ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗುವುದು, ಅದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

Modi Cabinet approves Deep Ocean Mission, Know more about it

ಈ ಅಭಿಯಾನ ಸಾಗರ ಜೀವಶಾಸ್ತ್ರದಲ್ಲಿ ಸಾಮರ್ಥ್ಯವರ್ಧನೆಯನ್ನೂ ನಿರ್ದೇಶಿಸುತ್ತದೆ, ಇದು ಭಾರತೀಯ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ, ವಿಶಿಷ್ಟ ಸಾಧನಗಳ ನಿರ್ಮಾಣ, ವಿಶೇಷ ಉಪಕರಣಗಳು, ಹಡಗುಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಮತ್ತು ಅಗತ್ಯವಾದ ಮೂಲಸೌಕರ್ಯಗಳ ಸ್ಥಾಪನೆಯು ಭಾರತೀಯ ಉದ್ಯಮದ ವಿಶೇಷವಾಗಿ ಎಂ.ಎಸ್‌.ಎಂ,ಇ. ಮತ್ತು ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಭೂಮಂಡಲದ ಶೇಕಡ 70ರಷ್ಟು ಸಮುದ್ರವಿದ್ದು, ನಮ್ಮ ಬದುಕಿನ ಬಹು ಮುಖ್ಯ ಭಾಗವಾಗಿ ಉಳಿದುಕೊಂಡಿದೆ. ಸಮಾರು ಶೇಕಡ 95ರಷ್ಟು ಆಳ ಸಮುದ್ರದ ಪರಿಶೋಧನೆ ಇನ್ನೂ ಆಗಿಲ್ಲ. ಭಾರತ ತನ್ನ ಮೂರು ಕಡೆಗಳಿಂದಲೂ ಸಾಗರಗಳಿಂದ ಆವೃತವಾಗಿವೆ ಮತ್ತು ದೇಶದ ಜನಸಂಖ್ಯೆಯ ಶೇಕಡಾ 30ರಷ್ಟು ಜನರು ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಇದು ಸಾಗರ ಮೀನುಗಾರಿಕೆ ಮತ್ತು ಜಲಚರಗಳು, ಪ್ರವಾಸೋದ್ಯಮ, ಜೀವನೋಪಾಯ ಮತ್ತು ನೀಲಿ ವ್ಯಾಪಾರವನ್ನು ಬೆಂಬಲಿಸುವ ಪ್ರಮುಖ ಆರ್ಥಿಕ ಅಂಶವಾಗಿದೆ.

Modi Cabinet approves Deep Ocean Mission, Know more about it

ಸಾಗರಗಳು ಆಹಾರ, ಇಂಧನ, ಖನಿಜಗಳು, ಔಷಧಿಗಳು, ಹವಾಮಾನ ಮತ್ತು ಹವಾಮಾನದ ಸರಿ ಹೊಂದಿಸುವ ಸಾಧನ ಮತ್ತು ಭೂಮಿಯ ಮೇಲಿನ ಜೀವನವನ್ನು ಆಧಾರವಾಗಿರಿಸುತ್ತವೆ. ಸುಸ್ಥಿರತೆಗೆ ಸಾಗರಗಳ ಪ್ರಾಮುಖ್ಯವನ್ನು ಪರಿಗಣಿಸಿ, ವಿಶ್ವಸಂಸ್ಥೆ (ಯುಎನ್) 2021-2030ರ ದಶಕವನ್ನು ಸುಸ್ಥಿರ ಅಭಿವೃದ್ಧಿಗಾಗಿ ಸಾಗರ ವಿಜ್ಞಾನದ ದಶಕವೆಂದು ಘೋಷಿಸಿದೆ. ಭಾರತಕ್ಕೆ ವಿಶಿಷ್ಟ ಕಡಲ ಸ್ಥಾನವಿದೆ. ಇದರ 7517 ಕಿ.ಮೀ ಉದ್ದದ ಕರಾವಳಿಯು ಒಂಬತ್ತು ರಾಜ್ಯಗಳು ಮತ್ತು 1382 ದ್ವೀಪಗಳಿಗೆ ನೆಲೆಯಾಗಿದೆ. ಫೆಬ್ರವರಿ 2019 ರಲ್ಲಿ ಭಾರತ ಸರ್ಕಾರದ ಪ್ರಾರಂಭಿಸಿದ 2030ರ ಹೊತ್ತಿಗೆ ನವ ಭಾರತದ ದೃಷ್ಟಿಯಲ್ಲಿ ನೀಲಿ ಆರ್ಥಿಕತೆಯ ಬೆಳವಣಿಗೆಯ ಹತ್ತು ಪ್ರಮುಖ ಆಯಾಮಗಳಲ್ಲಿ ಒಂದು ಎಂಬುದನ್ನು ಒತ್ತಿ ಹೇಳಿದೆ.(ಭೂವಿಜ್ಞಾನ ಸಚಿವಾಲಯ ಪ್ರಕಟಣೆ)

English summary
The Cabinet Committee on Economic Affairs chaired by PM Narendra Modi, has approved the proposal of Ministry of Earth Sciences (MoES) on "Deep Ocean Mission", with a view to explore deep ocean for resources and develop deep sea technologies for sustainable use of ocean resources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X