ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹಿರಿಯ ನಾಯಕ ಲಾಲ್ ಅಡ್ವಾಣಿಗೆ ಶುಭಕೋರಿದ ಮೋದಿ

|
Google Oneindia Kannada News

Recommended Video

LK Advani celebrates his 92nd birthday , Modi visits his residence

ನವದೆಹಲಿ, ನವೆಂಬರ್ 08: ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿಯವರ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ವಿವಿಧ ಗಣ್ಯರು ಶುಭ ಕೋರಿದ್ದಾರೆ.

"ನನಗೆ ಪಕ್ಷ ಹಾಗೂ ದೇಶ ಎಲ್ಲವನ್ನು ಕೊಟ್ಟಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ನನಗೆ ಈವರೆವಿಗೂ ಸಿಕ್ಕಿರುವ ಪ್ರೀತಿ ವಿಶ್ವಾಸಗಳು ಪ್ರಧಾನಿ ಹುದ್ದೆಗಿಂತ ದೊಡ್ಡದು" ಎಂಬ ಘೋಷಣೆ ಬಳಿಕ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿದು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಅಗ್ರಪಂಕ್ತಿಯನ್ನು ಬಿಟ್ಟುಕೊಟ್ಟರು. ಆದರೆ ಅಡ್ವಾಣಿಯವರ 92ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಜೆಪಿ ನಾಯಕರೆಲ್ಲರೂ ಒಗ್ಗೂಡಿದ್ದಾರೆ.

2009ರ ಚುನಾವಣೆ ಸಂದರ್ಭದಲ್ಲಿ ದೇಶದಾದ್ಯಂತ ರಥಯಾತ್ರೆ ನಡೆಸಿದ್ದ ಅಡ್ವಾಣಿ ಅವರು ಪ್ರಧಾನಿ ಪಟ್ಟಕ್ಕೇರುವ ಇಂಗಿತ ವ್ಯಕ್ತಪಡಿಸಿದ್ದರು. ಅದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ಯಾರು ವಹಿಸಬೇಕು ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಕಾಣಿಸಿಕೊಂಡ ಮೋದಿ ಅವರು ಈಗ ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ.

ಕರಾಚಿಯ ವ್ಯಾಪಾರಿ ಕಿಶನ್ ಚಂದ್ ಅಡ್ವಾಣಿ ಮತ್ತು ಗ್ಯಾನಿ ದೇವಿ ಅವರ ಪುತ್ರನಾಗಿ 1927 ನವೆಂಬರ್ 8 ರಂದು ಜನಿಸಿದ ಅಡ್ವಾಣಿಯವರು ಪ್ರಖರ ಹಿಂದುತ್ವವಾದಿಯಾಗಿ ಗುರುತಿಸಿಕೊಂಡವರು. ಅಡ್ವಾಣಿಯವರ ಜನ್ಮದಿನದ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಅಡ್ವಾಣಿ ಭೇಟಿ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಅವರು ಎಲ್ ಕೆ ಅಡ್ವಾಣಿ ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು.

ಅಡ್ವಾಣಿಯನ್ನು ವಿದ್ವಾಂಸ ಎಂದ ಮೋದಿ

ಎಲ್ ಕೆ ಅಡ್ವಾಣಿ ಅವರನ್ನು ವಿದ್ವಾಂಸ, ಶ್ರೇಷ್ಠ ರಾಜಕೀಯ ಪಟು, ಗೌರವಾನ್ವಿತ ನಾಯಕ ಭಾರತ ಎಂದೆಂದಿಗೂ ಇವರ ಕೊಡುಗೆಯನ್ನು ಸ್ಮರಿಸಲಿದೆ. ನಮ್ಮ ನಾಗರಿಕರಿಗೆ ಬಲ ತರಲಿದೆ, ಅವರ ಹುಟ್ಟುಹಬ್ಬಕ್ಕೆ ನನ್ನ ಶುಭ ಹಾರೈಕೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಅಡ್ವಾಣಿಗೆ ಶುಭಕೋರಿದ ಅಮಿತ್ ಶಾ

ಬಿಜೆಪಿ ಮುಖಂಡರಾದ ಅಮಿತ್ ಶಾ, ಎಲ್ ಕೆ ಅಡ್ವಾಣಿ ಅವರಿಗೆ ಶುಭ ಹಾರೈಸಿದ್ದಾರೆ.

#LKAdvani ಟ್ರೆಂಡಿಂಗ್ ನಲ್ಲಿದೆ

ಬಿಜೆಪಿ ಮುಖಂಡರಾದ ಅಮಿತ್ ಶಾ, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ರಾಜ್ಯಗಳ ಮುಖಂಡರು, ಸಾರ್ವಜನಿಕರು ಎಲ್ ಕೆ ಅಡ್ವಾಣಿ ಅವರಿಗೆ ಶುಭ ಹಾರೈಸಿದ್ದಾರೆ. ಅಡ್ವಾಣಿಯವರ ಜನ್ಮದಿನದ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

English summary
RSS and BJP leader, former president of BJP, former deputy prime minister of India, Lal Krishna Advani is celebrating his 92nd birthday on Nov.8th. Prime minister Narendra Modi wishes him on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X