ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಷೆ ಉಗ್ರರ ಹಿಟ್ ಲಿಸ್ಟ್ ನಲ್ಲಿ ಮೋದಿ, ಶಾ ಹಾಗೂ ದೋವಲ್

|
Google Oneindia Kannada News

Recommended Video

ಕಾಶ್ಮೀರಕ್ಕೆ ಹೊಸ ಖಾನೂನು ಮಾಡಿದ್ದೇ ತಪ್ಪಾ..? | Oneindia Kannada

ನವದೆಹಲಿ, ಸೆಪ್ಟೆಂಬರ್ 25: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೇಲೆ ಭಾರತದ ವಿರುದ್ಧ ಪಾಕಿಸ್ತಾನ ಕನಲಿ ಹೋಗಿದೆ. ಆ ಸಿಟ್ಟಿನಲ್ಲೇ ಯುದ್ಧ, ಅಣ್ವಸ್ತ್ರ ಬಳಕೆ ಎಂದೆಲ್ಲ ಮಾತನಾಡುತ್ತಿದೆ. ಇದೀಗ ಜಮ್ಮು- ಕಾಶ್ಮೀರದ ವಿಚಾರಕ್ಕೆ ಪಾಕಿಸ್ತಾನ ಮೂಲದ ಜೈಷ್- ಇ- ಮೊಹ್ಮದ್ ಉಗ್ರ ಸಂಘಟನೆಯು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಆಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮೇಲೆ ದಾಳಿ ನಡೆಸಲು ಹಿಟ್ ಲಿಸ್ಟ್ ಸಿದ್ಧ ಮಾಡಿಟ್ಟುಕೊಂಡಿದೆ.

ನಾಗರಿಕ ವಿಮಾನ ಯಾನ ಭದ್ರತಾ ಸಂಸ್ಥೆಗೆ ಪತ್ರವೊಂದು ಬಂದಿದ್ದು, ಮೋದಿ, ಅಮಿತ್ ಶಾ ಹಾಗೂ ಅಜಿತ್ ದೋವಲ್ ರನ್ನು ಗುರಿ ಮಾಡಿಕೊಂಡು ದಾಳಿ ನಡೆಸಲು ಯೋಜನೆ ರೂಪಿಸಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇಂಥದ್ದೊಂದು ಕುಕೃತ್ಯಕ್ಕೆ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.

ಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯ

ಯಾವಾಗ ಹೀಗೆ ಪತ್ರವೊಂದು ತಲುಪಿತೋ ಆಗಿನಿಂದ ಅಧಿಕಾರಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಜೈಷೆಯಿಂದ ಮೂವತ್ತು ನಗರಗಳನ್ನು ಗುರಿಯಾಗಿಸಿ, ದಾಳಿ ನಡೆಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಜಮ್ಮು, ಪಠಾಣ್ ಕೋಟ್, ಅಮೃತ್ ಸರ್, ಜೈಪುರ್, ಗಾಂಧೀನಗರ್, ಕಾನ್ಪುರ್, ಲಖನೌ ನಗರಗಳು ಉಗ್ರರ ದಾಳಿಯ ಪಟ್ಟಿಯಲ್ಲಿ ಒಳಗೊಂಡಿವೆ. ಇದರ ಜತೆಗೆ ಮುಖ್ಯವಾಗಿ ನಾಲ್ಕು ವಿಮಾನ ನಿಲ್ದಾಣಗಳ ಮೇಲೆ ದಾಳಿಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

Modi, Amit Sha, Ajith Doval In Jaishe Terrorists Hit List

ಮೊದಲಿಗೆ ಬಂದ ವರದಿ ಪ್ರಕಾರ, ಲಷ್ಕರ್- ಇ- ತೈಬಾದಿಂದ ಪ್ರಧಾನಿ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿ ಮೇಲೆ ಉಗ್ರ ದಾಳಿಗೆ ಯೋಜನೆ ರೂಪಿಸಲಾಗಿದೆ ಎನ್ನಲಾಗಿತ್ತು. ಲಷ್ಕರ್ ನ ಮುಖ್ಯಸ್ಥ ಹಫೀಜ್ ಸಯೀದ್ ಉತ್ತರಪ್ರದೇಶದ ವಾರಾಣಸಿಯಲ್ಲಿ ನೆಲೆ ರೂಪಿಸಲು ಯತ್ನಿಸಿದ್ದ.

ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್ಅಮೆರಿಕದ ನೆರವಿಗೆ ನಿಂತಿದ್ದು ಪಾಕಿಸ್ತಾನದ ಮಹಾ ಪ್ರಮಾದ: ಇಮ್ರಾನ್ ಖಾನ್

ಲಷ್ಕರ್ ಉಗ್ರರು ವಾರಾಣಸಿಯಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಹವಣಿಸುತ್ತಿದ್ದಾರೆ. ಅದಕ್ಕಾಗಿ ವಾರಾಣಸಿಯಲ್ಲಿ ನೆಲೆ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಯು ವರದಿ ನೀಡಿದೆ.

English summary
After abrogation of article 370 in Jammu and Kashmir, Jaish- e- Mohammad planning to attack on PM Narendra Modi, home minister Amit Shah and NSA Ajit Doval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X