ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿಯ ಜಯಪುರವನ್ನು ದತ್ತು ಪಡೆದ ಸಂಸದ ಮೋದಿ

By Mahesh
|
Google Oneindia Kannada News

ವಾರಣಾಸಿ ನ.7 : ವಿಶ್ವದ ಪ್ರಾಚೀನ, ಪವಿತ್ರ ನಗರವಾಗಿರುವ ವಾರಣಾಸಿ ಶುಕ್ರವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲು ಸಿದ್ಧತೆ ಭರದಿಂದ ಸಾಗಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಮೋದಿ ಕಾಲಿರಿಸಿದ್ದಾರೆ.

ವಾರಣಾಸಿಯಲ್ಲಿ ನೇಕಾರರಿಗಾಗಿ ಮಾರುಕಟ್ಟೆ ಕೇಂದ್ರ ಸ್ಥಾಪನೆ ಮಾಡಲು ಶಂಕು ಸ್ಥಾಪನೆ ನೆರವೇರಿಸಿದ ಮೋದಿ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಜಯಪುರ ಗ್ರಾಮ ದತ್ತು ತೆಗೆದುಕೊಂಡಿದ್ದಾರೆ. ಜಯಪುರ ಗ್ರಾಮವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂಬುದನ್ನು ವಿವರಿಸಿದ್ದಾರೆ.

ವಾರಣಾಸಿಯಲ್ಲಿ ನಾನು ಮೊದಲಿಗೆ ಕೇಳಿದ್ದು ಜಯಪುರ ಗ್ರಾಮದ ಹೆಸರು, ಅದರೆ, ನನ್ನ ಹೆಸರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಜಯಪುರದಲ್ಲಿ ದುರಂತ ಸಂಭವಿಸಿತ್ತು. ಈ ನೋವಿನ ಜೊತೆಗೆ ಈ ಗ್ರಾಮದ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇನೆ, ನಾನು ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತಿಲ್ಲ, ನೀವೆಲ್ಲರೂ ನನ್ನನ್ನು ದತ್ತು ಸ್ವೀಕರಿಸಿ ನನಗೆ ಮಾರ್ಗದರ್ಶನ ನೀಡಿ ಎಂದು ಜನತೆಯಲ್ಲಿ ಮೋದಿ ಮನವಿ ಮಾಡಿಕೊಂಡಿದ್ದಾರೆ.. ಮೋದಿ ಭಾಷಣದ ಇನ್ನಷ್ಟು ವಿವರ ಮುಂದಿದೆ.

ಸಂಸದರ ಆದರ್ಶ ಗ್ರಾಮ ಯೋಜನೆ

ಸಂಸದರ ಆದರ್ಶ ಗ್ರಾಮ ಯೋಜನೆ

ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡ ನಂತರ ಆ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಒಳಚರಂಡಿ, ಶೌಚಾಲಯ, ಸಮುದಾಯ ಭವನ, ಶಾಲಾ ಕಟ್ಟಡಗಳು ಸೇರಿದಂತೆ ವಿವಿಧ ರೀತಿಯ ಸೌಲಭ್ಯ ಒದಗಿಬರಲಿದೆ.

ಜಯಪುರ ಗ್ರಾಮದ ದುರಂತದ ಬಗ್ಗೆ ಮೋದಿ

ಜಯಪುರ ಗ್ರಾಮದ ದುರಂತದ ಬಗ್ಗೆ ಮೋದಿ ಮೆಲುಕು ಹಾಕಿದರು

ವಾರಣಾಸಿಯ ಜಯಪುರದಲ್ಲಿ ಮೋದಿ ಭಾಷಣ

ವಾರಣಾಸಿಯ ಜಯಪುರದಲ್ಲಿ ಮೋದಿ ಭಾಷಣದ ವಿಡಿಯೋ ನೋಡಿ

ವಾರಣಾಸಿ ಅಭಿವೃದ್ಧಿಗೆ ಕಂಕಣ ಬದ್ಧರಾದ ಮೋದಿ

ವಾರಣಾಸಿ ಅಭಿವೃದ್ಧಿಗೆ ಕಂಕಣ ಬದ್ಧರಾದ ಮೋದಿ

ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿದ್ದ ನರೇಂದ್ರಮೋದಿ ಸುಮಾರು 3,70,000 ಅಧಿಕ ಮತಗಳಿಂದ ಗೆದ್ದಿದ್ದರು. ಕಳೆದ ಜೂನ್ ನಲ್ಲಿ ನಡೆಸಿದ್ದ ಕೇಂದ್ರ ಬಜೆಟ್‍ನಲ್ಲಿ ವಾರಣಾಸಿ ನಗರಕ್ಕೆ ವಿಶೇಷ ಅನುದಾನ ನೀಡುವ ವಾಗ್ದಾನ ಮಾಡಿದ್ದರು. ಗಂಗಾ ನದಿ ಸ್ವಚ್ಛತೆಗಾಗಿ ಪ್ರತ್ಯೇಕ ಖಾತೆಯನ್ನು ಸೃಷ್ಟಿಸಿ ಉಮಾಭಾರತಿ ಅವರಿಗೆ ಜವಾಬ್ದಾರಿಯನ್ನು ನೀಡಿದ್ದರು.

English summary
Prime Minister Narendra Modi arrived at his Lok Sabha constituency Varanasi for the first time today after assuming charge, where he is likely to firm up plans for its development.PM Modi adopts a village - Jayapur in Varanasi under Saansad Adarsh Gram Yojana Varanasi under Saansad Adarsh Gram Yojana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X