• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕಲ್ಪ, ಸಂಯಮದಿಂದಿರಿ, ಮಾ. 22ರಂದು ಜನತಾ ಕರ್ಫ್ಯೂ ಆಚರಿಸಿ: ಮೋದಿ

|

ನವದೆಹಲಿ, ಮಾರ್ಚ್ 19: ಭಾರತದ 130 ಕೋಟಿ ಜನರಿಗೆ ಕೊರೊನಾ ಭೀತಿ ಎದುರಾಗಿದೆ. ನಾನು ಇಲ್ಲಿ ತನಕ ನಾನು ಏನೇ ಕೇಳಿದರೆ ನನಗೆ ನಿರಾಶೆ ಮಾಡಿಲ್ಲ. ನಾನು ನಿಮ್ಮಲ್ಲಿ ಮುಂಬರುವ ಕೆಲವು ದಿನಗಳನ್ನು ಕೇಳುತ್ತಿದ್ದೇನೆ. ಪ್ರತಿಯೊಬ್ಬರು ಜಾಗೃತರಾಗಿರಿ, ವೈರಸ್ ಬಗ್ಗೆ ನಿರ್ಲಕ್ಷ್ಯಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜನತೆಯಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.

ಸಂಕಲ್ಪ ಹಾಗೂ ಸಂಯಯ ಈ ಸಂದರ್ಭದಲ್ಲಿ ನಾಗರಿಕರು ಪಾಲಿಸಬೇಕಾದ ಕರ್ತವ್ಯ. ಕೇಂದ್ರ ಸರ್ಕಾರ, ರಾಜ ಸರ್ಕಾರವು ನೀಡಿರುವ ನಿರ್ದೇಶನಗಳನ್ನು ಪಾಲಿಸಿರಿ. ನಾವು ಸ್ವಸ್ಥರಾಗಿದ್ದರೆ, ವಿಶ್ವವು ಸ್ವಸ್ಥವಾಗಲಿದೆ. social distancing ಬಹುಮುಖ್ಯವಾಗಿದೆ. ವ್ಯಕ್ತಿಯಿಂದ ವ್ಯಕ್ತಿ ಅಂತರ ಕಾಯ್ದುಕೊಳ್ಳುವ ಸಂಕಲ್ಪ ಮಾಡಬೇಕಿದೆ.

PM Modi Coronavirus speech Live: ಜನರಿಗೆ ಸಂಕಲ್ಪ, ಸಂಯಮ ವಹಿಸಲು ಮೋದಿ ಕರೆ

ಈವರೆಗೂ ಕೊರೊನಾ ಸೋಂಕಿಗೆ ಔಷಧ ಕಂಡು ಹಿಡಿದಿಲ್ಲ. ನಮ್ಮ ಕುಟುಂಬದಲ್ಲಿರುವ 70, 75ಕ್ಕೂ ವಯೋವೃದ್ಧರು ಮನೆಯಿಂದ ಕೆಲ ದಿನಗಳ ಕಾಲ ಹೊರಗೆ ಬರದಿರುವುದು ಉತ್ತಮ ಎಂದರು. ವಿಶ್ವಯುದ್ಧದ ಸಂದರ್ಭದಲ್ಲಿ ಗ್ರಾಮ ಗ್ರಾಮಗಳು ಬಂದ್ ಆಗಿದ್ದವು. ಎಲ್ಲವನ್ನು ಬ್ಲ್ಯಾಕ್ ಔಟ್ ಮಾಡಲಾಗಿತ್ತು.

ವಿಶ್ವಯುದ್ಧದ ಸಂದರ್ಭದಲ್ಲಿ ಗ್ರಾಮ ಗ್ರಾಮಗಳು ಬಂದ್ ಆಗಿದ್ದವು. ಎಲ್ಲವನ್ನು ಬ್ಲ್ಯಾಕ್ ಔಟ್ ಮಾಡಲಾಗಿತ್ತು. ಇಂದಿನ ಪೀಳಿಗೆಗೆ ಇದು ಹೊಸದರಂತೆ ಕಾಣುತ್ತದೆ. ನಮ್ಮ ಕಾಲದಲ್ಲಿ ಇಂಥ ಪರಿಸ್ಥಿತಿ ಎದುರಿಸಿದ್ದೆವು ಎಂದರು. ಮಾರ್ಚ್ 22ರಂದು ದೇಶದ ಜನತೆ ಹೇಗೆ ನಡೆದುಕೊಳ್ಳಬೇಕು, ಏನು ಮಾಡಬೇಕು ಎಂದು ಮೋದಿ ಹೇಳಿದರು. ಮೋದಿ ಹೇಳಿದ ಜನತಾ ಕರ್ಫ್ಯೂ ಬಗ್ಗೆ ವಿವರ ಮುಂದಿದೆ..

ಮಾರ್ಚ್ 22ರಂದು ಜನತಾ ಕರ್ಫ್ಯೂ

ಮಾರ್ಚ್ 22ರಂದು ಜನತಾ ಕರ್ಫ್ಯೂ

ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ ನಿವಾಸಿಗಳು ಮನೆಯಲ್ಲೇ ಉಳಿದು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಕೋರಿದ್ದಾರೆ. ಅಂದು ಮನೆಯಿಂದ ಹೊರಕ್ಕೆ ಬರಬೇಡಿ, ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಕರೆ ನೀಡಿದರು.

ಯಾರಿಗೆ ಧನ್ಯವಾದ ಅರ್ಪಿಸಬೇಕಿದೆ

ಯಾರಿಗೆ ಧನ್ಯವಾದ ಅರ್ಪಿಸಬೇಕಿದೆ

ವೈದ್ಯರು, ರೈಲ್ವೆ ಸಿಬ್ಬಂದಿ, ಪೊಲೀಸ್ ಇಲಾಖೆ, ಸಾರಿಗೆ ಸಿಬ್ಬಂದಿ, ನರ್ಸ್, ಮಾಧ್ಯಮ ಸಿಬ್ಬಂದಿ ಎಲ್ಲರೂ ಸೋಂಕು ಲೆಕ್ಕಿಸದೇ ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ನಾವು ಭಾನುವಾರದಂದು ಸಂಜೆ 5 ಗಂಟೆಗೆ ನಮ್ಮ ಮನೆ ಬಾಗಿಲು, ಕಿಟಕಿ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಧನ್ಯವಾದ ಸಲ್ಲಿಸೋಣ ಎಂದರು.

ಅನಗತ್ಯವಾಗಿ ಆಸ್ಪತ್ರೆಗೆ ಧಾವಿಸಬೇಡಿ

ಅನಗತ್ಯವಾಗಿ ಆಸ್ಪತ್ರೆಗೆ ಧಾವಿಸಬೇಡಿ

ಶೀತ, ಕೆಮ್ಮು ಬಂದ ತಕ್ಷಣ ಗಾಬರಿಯಾಗಿ ಆಸ್ಪತ್ರೆಗೆ ಧಾವಿಸಬೇಡಿ. ಕೊರೊನಾವೈರಸ್ ಸೋಂಕು, ರೋಗದ ಲಕ್ಷಣ, ರೋಗ ಹರಡುವ ಬಗ್ಗೆ ಆರೋಗ್ಯ ಇಲಾಖೆ ನೀಡಿರುವ ಜಾಗೃತಿ ಸಂದೇಶವನ್ನು ತಪ್ಪದೇ ಓದಿ, ಆಸ್ಪತ್ರೆ ಬಾಗಿಲು ಅಗತ್ಯ ಬಿದ್ದಾಗ ಮಾತ್ರ ತಟ್ಟಿ, ಅಗತ್ಯ ಬಿದ್ದಾಗ ನಿಮ್ಮ ಕುಟುಂಬ ವೈದ್ಯರನ್ನು ಕಾಣಿರಿ, ಅವರ ಸಲಹೆಯಂತೆ ಮುಂದಿನ ನಡೆ ಇಡಿ ಎಂದು ಮೋದಿ ಸಲಹೆ ನೀಡಿದರು.

ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಟಾಸ್ಕ್ ಪೋರ್ಸ್

ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಟಾಸ್ಕ್ ಪೋರ್ಸ್

ದೇಶದಲ್ಲಿ ದೈನಂದಿನ ಅಗತ್ಯ ವಸ್ತುಗಳಾದ ಹಾಲು, ಅಡುಗೆ ಅನಿಲ, ನೀರು ಮುಂತಾದವುಗಳನ್ನು ಸರ್ಕಾರ ಪೂರೈಸಲಿದೆ. ಅಗತ್ಯ ವಸ್ತುಗಳ ಕೊರತೆ ಎಂದಿಗೂ ಬರುವುದಿಲ್ಲ ಈ ಬಗ್ಗೆ ಭಯಬೇಡ. ವೈರಸ್ ನಿಂದಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಈ ಬಗ್ಗೆ ಗಮನ ಹರಿಸಲು ವಿತ್ತ ಸಚಿವರ ನೇತೃತ್ವದಲ್ಲಿ ಆರ್ಥಿಕ ಟಾಸ್ಕ್ ಪೋರ್ಸ್ ರಚಿಸಲಾಗುವುದು ಎಂದರು.

English summary
Prime Minister Narendra Modi addressed the nation on coronavirus. Modi talked about issues relating to COVID-19 and the efforts to combat it announces March 22 Janata curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more