ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೆಗಳ ಆಟ: ಮಕ್ಕಳಿಗೂ ಇದೆಯಾ ಕೊರೊನಾವೈರಸ್ ಲಸಿಕೆ?

|
Google Oneindia Kannada News

ನವದೆಹಲಿ, ಮೇ 07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಲೆಗಳ ಲೆಕ್ಕದಲ್ಲಿ ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತೆ ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. 1ನೇ ಅಲೆ ಬಂದೋಯ್ತು, ಎರಡನೇ ಅಲೆ ನಡೀತಿದೆ, ಮೂರನೇ ಅಲೆಯೂ ಬರುತ್ತೆ, 4ನೇ ಅಲೆಯ ಆತಂಕವೂ ಕಡಿಮೆಯೇನಿಲ್ಲ. ಹೀಗೆ ಕೊವಿಡ್-19 ಅಲೆಗಳನ್ನು ಎದುರಿಸಲು ಜಗತ್ತು ಸನ್ನದ್ಧವಾಗಬೇಕಿದೆ.

Recommended Video

Chidren Vaccination ವಿಚಾರವಾಗಿ ಬರುತ್ತಿರುವ ಹೊಸ ಸುದ್ದಿ | Oneindia Kannada

ಭಾರತದ ಮಟ್ಟಿಗೆ ವೈದ್ಯರು, ಮೊದಲ ಶ್ರೇಣಿ ಕಾರ್ಮಿಕರು, 45 ವರ್ಷ ಮೇಲ್ಪಟ್ಟವರು ಹಾಗೂ 12 ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾವೈರಸ್ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಕೊವಿಡ್-19 ಮೂರನೇ ಅಲೆಯಿಂದ ಪುಟ್ಟ ಮಕ್ಕಳು ಹೆಚ್ಚು ಆತಂಕವನ್ನು ಎದುರಿಸಲಿದ್ದಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ 2ನೇ ಅಲೆ ಭೀತಿಯಲ್ಲೇ ಲಸಿಕೆಗೆ ಹೆಚ್ಚಿದ ಬೇಡಿಕೆ! ಕೊರೊನಾ 2ನೇ ಅಲೆ ಭೀತಿಯಲ್ಲೇ ಲಸಿಕೆಗೆ ಹೆಚ್ಚಿದ ಬೇಡಿಕೆ!

ಜಗತ್ತಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾವ ಲಸಿಕೆ ಉತ್ತಮ ಹಾಗೂ ಪರಿಣಾಮಕಾರಿ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಇದರ ಮಧ್ಯೆ 12 ವರ್ಷದಿಂದ 17ರ ವಯೋಮಾನದವರನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

12-17 ವರ್ಷದವರಿಗೆ ಕೊರೊನಾವೈರಸ್ ಲಸಿಕೆ

12-17 ವರ್ಷದವರಿಗೆ ಕೊರೊನಾವೈರಸ್ ಲಸಿಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡಲು 12 ರಿಂದ 17 ವರ್ಷದ ಯುವಕರಿಗೆ ಲಸಿಕೆಯೊಂದು ಸಿಕ್ಕಿದೆ. ಮೊದಲ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಲಸಿಕೆಯು ಶೇ.96ರಷ್ಟು ಪರಿಣಾಮಕಾರಿಯಾಗಿರುವುದು ಗೋಚರಿಸಿದೆ ಎಂದು ಮಾಡರ್ನಾ ಕಂಪನಿ ಸ್ಪಷ್ಟಪಡಿಸಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ 3235 ಜನರ ಪೈಕಿ 2/3ರಷ್ಟು ಜನರ ಮೇಲೆ ಮೊದಲ ಹಂತ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ.

ಲಸಿಕೆ ಪಡೆದ ಮಾತ್ರಕ್ಕೆ ನಿಯಮ ಉಲ್ಲಂಘಿಸುವಂತಿಲ್ಲ

ಲಸಿಕೆ ಪಡೆದ ಮಾತ್ರಕ್ಕೆ ನಿಯಮ ಉಲ್ಲಂಘಿಸುವಂತಿಲ್ಲ

ಕೊರೊನಾವೈರಸ್ ಸೋಂಕಿನ ಲಸಿಕೆ ಪಡೆದ ಮಾತ್ರಕ್ಕೆ ನಿಯಮಗಳನ್ನು ಗಾಳಿಗೆ ತೂರುವಂತಿಲ್ಲ. ಏಕೆಂದರೆ ವೈದ್ಯಕೀಯ ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಮೊದಲ ಡೋಸ್ ಲಸಿಕೆ ಪಡೆದ 12 ಜನರಿಗೆ 14 ದಿನಗಳಲ್ಲೇ ಕೊವಿಡ್-19 ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ 35 ದಿನಗಳ ಅಂತರದಲ್ಲಿ ಕೊರೊನಾವೈರಸ್ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದವರೂ ಕೂಡಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ.

ಅಡ್ಡ ಪರಿಣಾಮಗಳ ಬಗ್ಗೆ ಕಂಪನಿ ನೀಡುವ ಸ್ಪಷ್ಟನೆ ಏನು?

ಅಡ್ಡ ಪರಿಣಾಮಗಳ ಬಗ್ಗೆ ಕಂಪನಿ ನೀಡುವ ಸ್ಪಷ್ಟನೆ ಏನು?

ಮೊದಲ ಡೋಸ್ ಕೊವಿಡ್-19 ಲಸಿಕೆ ಹಾಕಿಸಿಕೊಂಡವರಲ್ಲಿ ಸೌಮ್ಯ, ಮಧ್ಯಮ ಹಾಗೂ ತೀವ್ರ ಸ್ವರೂಪದ ಅಡ್ಡಪರಿಣಾಮ ಗೋಚರಿಸುವ ಸಾಧ್ಯತೆಗಳಿವೆ ಎಂದು ಮಾಡರ್ನಾ ಕಂಪನಿ ತಿಳಿಸಿದೆ. ಇದರ ಜೊತೆಗೆ ಲಸಿಕೆ ಪಡೆದ ತೋಳಿನಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಎರಡನೇ ಡೋಸ್ ಲಸಿಕೆ ಪಡೆದ ನಂತರದಲ್ಲಿ ತಲೆನೋವು, ಆಯಾಸ, ಮೈಯಾಲ್ಜಿಯಾ ಮತ್ತು ಶೀತದ ರೀತಿಯ ಅಡ್ಡಪರಿಣಾಮದ ಲಕ್ಷಣಗಳು ಗೋಚರಿಸುತ್ತವೆ. ಆದರೆ ಇಲ್ಲಿವರೆಗೂ ಯಾವುದೇ ರೀತಿ ಗಂಭೀರ ಸ್ವರೂಪದ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ನಿಯಂತ್ರಕರ ಜೊತೆಗೆ ತಿದ್ದುಪಡಿ ಬಗ್ಗೆ ಚರ್ಚೆ

ನಿಯಂತ್ರಕರ ಜೊತೆಗೆ ತಿದ್ದುಪಡಿ ಬಗ್ಗೆ ಚರ್ಚೆ

ಮಾಡರ್ನಾ ಕಂಪನಿಯ ಲಸಿಕೆಯನ್ನು 12-17ವಯೋಮಾನದವರಿಗೆ ನೀಡುವುದನ್ನು ಅಧಿಕೃತಗೊಳಿಸಬೇಕಿದೆ. ಈ ಸಂಬಂಧ ತಿದ್ದುಪಡಿ ಮಾಡುವುದಕ್ಕಾಗಿ ನಿಯಂತ್ರಕರ ಜೊತೆಗೆ ಕಂಪನಿಯು ಚರ್ಚೆ ನಡೆಸುತ್ತಿದೆ. ಪ್ರಸ್ತುತ ಅನುಮೋದನೆ ಪಡೆದ ರಾಷ್ಟ್ರಗಳಲ್ಲಿ ಕೇವಲ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಮಾಡರ್ನಾ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಇದರ ಮಧ್ಯೆ 6 ತಿಂಗಳ ಮಗುವಿನಿಂದ 11 ವರ್ಷದವರಿನ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಯೋಗಗಳನ್ನು ಕಂಪನಿ ಆರಂಭಿಸಿದೆ.

ಫೈಜರ್, ಬಯೋಟೆಕ್ ಸಂಸ್ಥೆಗಳಿಂದ ಈಗಾಗಲೇ ಅರ್ಜಿ

ಫೈಜರ್, ಬಯೋಟೆಕ್ ಸಂಸ್ಥೆಗಳಿಂದ ಈಗಾಗಲೇ ಅರ್ಜಿ

ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಫೈಜರ್ ಮತ್ತು ಬಯೋಟೆಕ್ ಲಸಿಕೆಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಈ ರಾಷ್ಟ್ರಗಳಲ್ಲೇ ಪ್ರಾಥಮಿಕವಾಗಿ 12-15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆಗಾಗಿ ಎರಡೂ ಕಂಪನಿಗಳು ಅರ್ಜಿ ಸಲ್ಲಿಸಿವೆ. ಈ ಪೈಕಿ ಫೈಜರ್ ಕಂಪನಿ ಕೊವಿಡ್-19 ಲಸಿಕೆಯನ್ನು 12-15 ವರ್ಷದ ಮಕ್ಕಳ ಮೇಲೆ ತುರ್ತು ಸಂದರ್ಭಗಳಲ್ಲಿ ಬಳಸಬಹುದು ಎಂದು ಕೆನಡಾ ಸರ್ಕಾರ ಅನುಮೋದನೆ ನೀಡಿದೆ. ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ನೀಡಿದ ಮೊದಲ ರಾಷ್ಟ್ರಗಳ ಪಟ್ಟಿಯಲ್ಲಿ ಕೆನಡಾ ಗುರುತಿಸಿಕೊಂಡಿದೆ.

English summary
Moderna Vaccine 96 Percent Effective In 12-17 Year Childrens: Clinical Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X