ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಮುಂದಿನ ವರ್ಷ ಲಭ್ಯವಾಗಲಿದೆ ಮಾಡರ್ನಾ ಲಸಿಕೆ

|
Google Oneindia Kannada News

ನವದೆಹಲಿ, ಮೇ 26: ಮಾಡರ್ನಾ ಇಂಕ್ ಸಂಸ್ಥೆ ಮುಂದಿನ ವರ್ಷ ಭಾರತದಲ್ಲಿ ತನ್ನ ಒಂದು ಡೋಸ್‌ನ ಕೊರೊನಾ ಲಸಿಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಕುರಿತು ಸಂಸ್ಥೆಯು ಸಿಪ್ಲಾ ಸೇರಿದಂತೆ ಹಲವು ಭಾರತೀಯ ಔಷಧ ತಯಾರಕ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

12 ರಿಂದ 17ರ ವಯೋಮಾನದವರಿಗೂ ತನ್ನ ಕೊರೊನಾ ಲಸಿಕೆ ಪ್ರಭಾವಕಾರಿ ಎಂದು ಸಂಸ್ಥೆ ಮಂಗಳವಾರ ಘೋಷಣೆ ಮಾಡಿದೆ. ವೈದ್ಯಕೀಯ ಪ್ರಯೋಗದಲ್ಲಿ ಸುರಕ್ಷತಾ ಸಂಬಂಧಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಜುಲೈನಲ್ಲಿ ಶಾಲಾ ಮಕ್ಕಳಿಗೆ ಲಸಿಕೆ ಅಭಿವೃದ್ಧಿ ಕುರಿತು ಪ್ರಯೋಗ ಆರಂಭಿಸಲಾಗುವುದು ಎಂದು ತಿಳಿಸಿದೆ. ಅಮೆರಿಕದ ಆಹಾರ ಹಾಗೂ ಔಷಧ ಸಂಸ್ಥೆಗೆ ಈ ಕುರಿತು ತನ್ನ ಅಧ್ಯಯನ ಪ್ರಸ್ತುತಪಡಿಸಿ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಕೋರುವುದಾಗಿ ತಿಳಿಸಿದೆ.

ಮೂರನೇ ಲಸಿಕೆಗೆ ಅನುಮತಿ ನೀಡಿದ ಬ್ರಿಟನ್; ಮಾಡರ್ನಾಗೆ ಬೇಡಿಕೆಮೂರನೇ ಲಸಿಕೆಗೆ ಅನುಮತಿ ನೀಡಿದ ಬ್ರಿಟನ್; ಮಾಡರ್ನಾಗೆ ಬೇಡಿಕೆ

ಸಂಸ್ಥೆಯು 12-17 ವಯಸ್ಸಿನ 3700 ಮಂದಿಯ ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ವಯಸ್ಕರಂತೆಯೇ ಮಕ್ಕಳಲ್ಲಿ ಕೊರೊನಾ ಲಸಿಕೆಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲಿವೆ ಎಂಬುದು ಸಾಬೀತಾಗಿದೆ. ಅದೇ ರೀತಿ, ತಲೆ ನೋವು, ಕೈಗಳ ಊತ, ಸುಸ್ತಿನಂಥ ಅಡ್ಡ ಪರಿಣಾಮಗಳೂ ಸಹಜವಾಗಿರುತ್ತವೆ ಎಂದು ಹೇಳಿದೆ.

Moderna Single Dose Corona Vaccine Expected To Launch In India Next Year

ಭಾರತಕ್ಕೆ ಈ ವರ್ಷ ಲಸಿಕೆ ಪೂರೈಕೆಗೆ ತಮ್ಮ ಬಳಿ ದಾಸ್ತಾನು ಇಲ್ಲ ಎಂದು ಮಾಡರ್ನಾ ಹೇಳಿದ್ದು, ಸಣ್ಣ ಮಟ್ಟದಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳನ್ನು ಪೂರೈಸುತ್ತಿದೆ ಎಂದು ತಿಳಿಸಿದೆ.

ಕೊರೊನಾ ಎರಡನೇ ಅಲೆ ಭೀಕರತೆ ಎದುರಿಸುತ್ತಿರುವ ದೇಶಗಳಿಗೆ ತುರ್ತು ಲಸಿಕೆ ಪೂರೈಕೆ ಹಾಗೂ ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಗಳ ಲಭ್ಯತೆ ಕುರಿತು ಕಳೆದ ವಾರ ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎರಡು ಸುತ್ತಿನ ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಂದರ್ಭ ಮಾಡರ್ನಾ ಮಾಹಿತಿ ನೀಡಿದೆ. ಭಾರತದೊಂದಿಗೆ ಹಂಚಿಕೊಳ್ಳಲು ಮಾಡರ್ನಾ ಸಂಸ್ಥೆಯಲ್ಲಿ ಹೆಚ್ಚಿನ ಲಸಿಕೆಗಳು ಲಭ್ಯವಿಲ್ಲ. 2022ರಲ್ಲಿ ತನ್ನ ಏಕ ಡೋಸ್ ಲಸಿಕೆಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎಂದು ಸಭೆಯಲ್ಲಿ ತಿಳಿಸಿದೆ.

English summary
Moderna Inc vaccine expected to launch its single dose corona vaccine in india next year,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X