ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡರ್ನಾ ಕೊವಿಡ್-19 ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿ

|
Google Oneindia Kannada News

ನವದೆಹಲಿ, ಡಿಸೆಂಬರ್.04: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮಾಡರ್ನಾ ಕಂಪನಿಯ ಕೊರೊನಾವೈರಸ್ ಲಸಿಕೆಯು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಹೇಳಿಕೊಂಡಿದೆ.

ಕೊವಿಡ್-19 ಸೋಂಕಿನಲ್ಲಿ ಮೂರು ತಿಂಗಳವರೆಗೂ ಇರುವಷ್ಟು ರೋಗ ನಿರೋಧಕಶಕ್ತಿ ವೃದ್ಧಿಸುವ ಸಾಮರ್ಥ್ಯವನ್ನು ಮಾಡರ್ನಾ ಕಂಪನಿಯ ಲಸಿಕೆ ಹೊಂದಿದೆ. ಇತ್ತೀಚಿಗೆ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಲಸಿಕೆಯು ಶೇ.94ರಷ್ಟು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ ಎಂದು ಕಂಪನಿಯು ಹೇಳಿದೆ.

ಸಿಹಿಸುದ್ದಿ: ಭಾರತದಲ್ಲಿ 90,16,289 ಕೊರೊನಾ ಸೋಂಕಿತರು ಗುಣಮುಖಸಿಹಿಸುದ್ದಿ: ಭಾರತದಲ್ಲಿ 90,16,289 ಕೊರೊನಾ ಸೋಂಕಿತರು ಗುಣಮುಖ

ಸಾಂಕ್ರಾಮಿಕ ರೋಗ ಮತ್ತು ಅಲರ್ಜಿಯ ರಾಷ್ಟ್ರೀಯ ಸಂಸ್ಥೆಯ ಸಂಶೋಧಕರು 34 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸಿದರು. ಈ ವೈದ್ಯಕೀಯ ಪ್ರಯೋಗದಲ್ಲಿ ಯುವಕರು ಮತ್ತು ವೃದ್ಧರು ಕೂಡಾ ಸೇರಿದ್ದರು. ಪ್ರಾಥಮಿಕವಾಗಿ ಪ್ರತಿಕಾಯಗಳ ಪ್ರಮಾಣದಲ್ಲಿ ಕೊಂಚ ಇಳಿಮುಖವಾಯಿತು. ಬೂಸ್ಟರ್ ನೀಡುತ್ತಿದ್ದಂತೆ ನಿರೀಕ್ಷೆಯಂತೆ ಭಾಗವಹಿಸಿದ ಪ್ರತಿಯೊಬ್ಬರಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಸಿದೆ ಎಂದು ಸಂಸ್ಥೆಯು ತಿಳಿಸಿದೆ.

Moderna Covid-19 Vaccine Can Help Produce Antibodies That Last For Atleast 3 Months: Study

ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ:

ಮನುಷ್ಯನ ದೇಹದಲ್ಲಿ ಪ್ರತಿಕಾಯಗಳ ಸಂಖ್ಯೆ ಇಳಿಮುಖವಾಗಬಹುದು. ಆದರೆ ವೈರಸ್ ಉತ್ಪಾದನೆ ಆಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹೊಸ ರೋಗ ನಿರೋಧಕ ಶಕ್ತಿ ಉತ್ಪಾದಿಸುವುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅಧ್ಯಯನದ ಪ್ರಕಾರ, ಹೊಸ ವೈರಸ್ ಗಳನ್ನು ಪತ್ತೆ ಮಾಡುವ ಪ್ರತಿಕಾಯಗಳನ್ನು ಹೆಚ್ಚಿಸುವ ಸಾಮರ್ಥ್ಯವು ಲಸಿಕೆಗಿದೆ. ಈ ಬಗ್ಗೆ ದೀರ್ಘಕಾಲಿಕ ಅಧ್ಯಯನದ ನಂತರದಲ್ಲಿ ಸ್ಪಷ್ಟವಾಗಿ ಹೇಳಲಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಾಡರ್ನಾ ಲಸಿಕೆ ಅನುಮೋದನೆಗೆ ಅರ್ಜಿ:

ಕೊರೊನಾವೈರಸ್ ಸೋಂಕಿತರಿಗೆ ತುರ್ತು ಸಂದರ್ಭಗಳಲ್ಲಿ ಮಾಡರ್ನಾ ಲಸಿಕೆ ಬಳಸಲು ಅನುಮತಿ ನೀಡುವಂತೆ ಡಿಸೆಂಬರ್.17ರಂದು ಕಂಪನಿಯು ಅಮೆರಿಕಾದ ಆಹಾರ ಮತ್ತು ಔಷಧೀಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು.

Recommended Video

Covid-19 Vaccine ಪಡೆಯಲು ಇಂಗ್ಲೆಂಡಿನತ್ತ ಭಾರತೀಯರು! | Oneindia Kannada

English summary
Moderna Covid-19 Vaccine Can Help Produce Antibodies That Last For Atleast 3 Months, Said Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X