• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋ

By Mahesh
|

ಬೆಂಗಳೂರು, ಸೆಪ್ಟೆಂಬರ್ 08: ದೇಶೀಯವಾಗಿ ರೂಪಿಸಲಾದ ನಾವಿಕ್(NaVIC) ಜಿಪಿಎಸ್ ವ್ಯವಸ್ಥೆ ಮುಂದಿನ ವರ್ಷದಿಂದ ಮೊಬೈಲ್ ಫೋನ್ ಗಳಲ್ಲೂ ಲಭ್ಯವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹೇಳಿದೆ.

ಮೂಲತ: ಬೆಸ್ತರಿಗೆ ನೈಸರ್ಗಿಕ ವಿಕೋಪ ಹಾಗೂ ಜಲ ಗಡಿಯನ್ನು ಅರಿತುಕೊಳ್ಳಲು ನೆರವಾಗಲು ಇಸ್ರೋ ಈ ಜಿಪಿಎಸ್ ಸಾಧನ ರೂಪಿಸಿದೆ ಎಂದು ಬೆಂಗಳೂರು ಬಾಹ್ಯಾಕಾಶ ಎಕ್ಸೋ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ

ಈ ಸಾಧನದಿಂದಾಗಿ ಬೆಸ್ತರ ಜೀವಕ್ಕೆ ಹೆಚ್ಚಿನ ಸುರಕ್ಷತೆ ದೊರೆಯಲಿದೆ ಮತ್ತು ನೆರೆ ದೇಶಗಳ ಜಲ ಗಡಿ ದಾಟದಂತೆ ಎಚ್ಚರಿಕೆಯೂ ದೊರೆಯುತ್ತದೆ. ಕಳೆದ ವರ್ಷ ಓಕಿ ಚಂಡಮಾರುತ ಅಪ್ಪಳಿಸಿದ ಕುರಿತ ಮಾಹಿತಿಯನ್ನು ಹಲವು ಬೆಸ್ತರಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ.

ಇದು ಕೇರಳದ ಹಲವು ಬೆಸ್ತರ ಸಾವಿಗೆ ಕಾರಣವಾಗಿತ್ತು. ಕೇರಳ ಸರ್ಕಾರ ನಾವಿಕ್ ಜಿಪಿಎಸ್ ತಂತ್ರಜ್ಞಾನ ರೂಪಿಸಬೇಕೆಂದು ಇಸ್ರೋ ಮೊರೆ ಹೋಗಿತ್ತು. ಆನಂತರ ಇಸ್ರೋ ದೇಶೀಯ ಜಿಪಿಎಸ್ ರೂಪಿಸಿದೆ.

ಮಹಿಳೆ, ಮಕ್ಕಳು, ಹಿರಿಯರ ಸುರಕ್ಷೆಗಾಗಿ ಜಿಪಿಎಸ್ ಸಾಧನ ಬಳಸಿ

ಕಡಿಮೆ ವೆಚ್ಚದಲ್ಲಿ ರೂಪಿಸಲಾಗಿರುವ ನಾವಿಕ್ ಉಪಕರಣದ ಮೂಲಕ ಸಮುದ್ರದಲ್ಲಿ ಮೀನುಗಳು ಲಭ್ಯವಿರುವ ಜಾಗದ ಬಗ್ಗೆಯೂ ತಿಳಿಯಬಹುದಾಗಿದೆ ಎಂದು ಇಸ್ರೋದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನ ಉಪ ನಿರ್ದೇಶಕ ನೀಲೇಶ್ ದೇಸಾಯಿ ತಿಳಿಸಿದ್ದಾರೆ.

ಮೊಬೈಲ್ ನೆಟ್ವರ್ಕ್ ಸಂಪರ್ಕ ಸಿಗುವುದಿಲ್ಲ

ಮೊಬೈಲ್ ನೆಟ್ವರ್ಕ್ ಸಂಪರ್ಕ ಸಿಗುವುದಿಲ್ಲ

ಸಮುದ್ರದಲ್ಲಿ ದೂರದವರೆಗೆ ತೆರಳಿದಾಗ ಮೊಬೈಲ್ ನೆಟ್ವರ್ಕ್ ಸಂಪರ್ಕ ಸಿಗುವುದಿಲ್ಲ. ಹೀಗಾಗಿ ಅವರಿಗೆ ಮಾಹಿತಿ ತಲುಪಿಸಲು, ವಿಕೋಪದ ಸಂದರ್ಭದಲ್ಲಿ ಎಚ್ಚರಿಕೆ ನೀಡಲು ನಾವಿಕ್ ಸೂಕ್ತವಾಗಲಿದೆ ಎಂದು ಬೆಂಗಳೂರು ಸ್ಪೇಸ್ ಎಕ್ಸ್‌ಪೋದಲ್ಲಿ ಮಾತನಾಡುತ್ತಾ ಹೇಳಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಹಾಗೂ ಗುಜರಾತ್ ಸರ್ಕಾರಗಳೂ ಸಹ ಇಸ್ರೋ ಬಳಿ ಬಂದಿವೆ. ಸಾಗರ ಗಡಿ ಉಲ್ಲಂಘಿಸಿದ ಆರೋಪದ ಮೇಲೆ ಈ ರಾಜ್ಯಗಳ ಬೆಸ್ತರು ಶ್ರೀಲಂಕಾ ಹಾಗೂ ಪಾಕಿಸ್ತಾನಗಳಿಂದ ಬಂಧನಕ್ಕೊಳಗಾಗುವ ಘಟನೆಗಳು ನಡೆಯುತ್ತಿವೆ ಎಂದು ದೇಸಾಯಿ ಹೇಳಿದ್ದಾರೆ.

ಹಬ್ ಒಂದಕ್ಕೆ ಸಂದೇಶ ಕಳಿಸುವ ವ್ಯವಸ್ಥೆ

ಹಬ್ ಒಂದಕ್ಕೆ ಸಂದೇಶ ಕಳಿಸುವ ವ್ಯವಸ್ಥೆ

ಅಲ್ಲದೇ ಬೆಸ್ತರು ಹಬ್ ಒಂದಕ್ಕೆ ಸಂದೇಶ ಕಳಿಸುವ ವ್ಯವಸ್ಥೆ ಮಾಡಲಾಗುವುದು. ಈ ಹಬ್ ಗೆ ತಲುಪುವ ಸಂದೇಶವನ್ನು ಸಂಬಂಧಿಸಿದವರ ಕುಟುಂಬಗಳಿಗೆ ರವಾನಿಸಲಾಗುವುದು ಎಂದು ದೇಸಾಯಿ ತಿಳಿಸಿದ್ದಾರೆ.

ತನ್ನ ವಾಣಿಜ್ಯ ವಿಭಾಗ ಹಾಗೂ ಸರ್ಕಾರಿ ಸ್ವಾಮ್ಯದ ಉದ್ಯಮವಾದ ಆಂಟ್ರಿಕ್ಸ್ ಮೂಲಕ ಈ ಉಪಕರಣಗಳನ್ನು ನೀಡಲು ಇಸ್ರೋ ಯೋಜಿಸಿದೆ. ಸುಮಾರು 2,000 ಉಪಕರಣಗಳನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೀಡಲಾಗುವುದು. ಪ್ರತಿಯೊಂದು ಉಪಕರಣದ ಬೆಲೆ 3,500 ರೂ. ಗಳಾಗಿರಲಿದೆ ಎಂದರು.

1,420 ಕೋಟಿ ರು ವೆಚ್ಚದ ಯೋಜನೆ

1,420 ಕೋಟಿ ರು ವೆಚ್ಚದ ಯೋಜನೆ

ಐಆರ್ ಎನ್ ಎಸ್ ಎಸ್ 7 ಉಪಗ್ರಹಗಳನ್ನು ಒಳಗೊಂಡಿದೆ. ಸುಮಾರು 1,425 ಕೆಜಿ ತೂಗುವ ಉಪಗ್ರಹ ಭೂ ಸಮಾಂತರ ಕಕ್ಷೆಯಿಂದ ಸುಮಾರು 36,000 ಕಿ.ಮೀ ಎತ್ತರದಲ್ಲಿ ಕಾರ್ಯ ನಿರ್ವಹಿಸಲಿದೆ. ಭಾರತದ ಭೂ ಪ್ರದೇಶದ ಮೇಲೆ 20 ಮೀಗೂ ಹೆಚ್ಚು ದೂರದಿಂದ ನಿಖರ ಚಿತ್ರ ತೆಗೆಯುವ ಗುರಿ ಹೊಂದಿದೆ. ಭಾರತದ ಸುತ್ತಮುತ್ತ 1,500 ಕಿ.ಮೀ ವ್ಯಾಪ್ತಿಗೂ ಹರಡಲಿದೆ. IRNSS ಸುಮಾರು 1,420 ಕೋಟಿ ರು ವೆಚ್ಚದ ಯೋಜನೆಯಾಗಿದೆ.

ಭಾರತದ ನಾವಿಕ್ ಜಿಪಿಎಸ್

ಭಾರತದ ನಾವಿಕ್ ಜಿಪಿಎಸ್

ಅಮೆರಿಕ ಜಿಪಿಎಸ್ ವ್ಯವಸ್ಥೆ ಹೊಂದಿದ್ದರೆ, ರಷ್ಯಾ GLONASS (ಗ್ಲೋಬಲ್ ನಾವಿಗೇಶನ್ ಸ್ಯಾಟ ಲೈಟ್ ಸಿಸ್ಟಂ) ಎಂಬ ವ್ಯವಸ್ಥೆಯನ್ನು ಸ್ವಂತವಾಗಿ ಹೊಂದಿದೆ. ಚೀನ ‘ಬೀಡೌ' (ಕಂಪಾಸ್ ಎಂಬ ಹೆಸರೂ ಇದೆ) ನಾವಿಕ ಉಪಗ್ರಹ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಹಾಗೂ ಐರೋಪ್ಯ ಒಕ್ಕೂಟ ತನ್ನ ಸ್ವಂತ ಉಪಯೋಗಕ್ಕಾಗಿ ಗೆಲಿಲಿಯೊ ಹೆಸರಿನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ. ಈಗ ಈ ಸಾಲಿಗೆ ಭಾರತ ನಾವಿಕ್ ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ.

ಅಮೆರಿಕದ ಜಿಪಿಎಸ್ ಗೆ ಸೆಡ್ಡು

ಅಮೆರಿಕದ ಜಿಪಿಎಸ್ ಗೆ ಸೆಡ್ಡು

ಭಾರತೀಯ ಪ್ರಾದೇಶಿಕ ನಾವಿಕ ಉಪಗ್ರಹ ವ್ಯವಸ್ಥೆ (ಐಆರ್ ಎನ್ ಎಸ್ ಎಸ್) ಎಂದು ಹೆಸರಿಸಲಾಗಿರುವ ಈ ಉಪಗ್ರಹ ವಿಶ್ವದ ಕೆಲವೇ ಕೆಲವು ನಾವಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರತದೊಳಗೆ ಹಾಗೂ ಸುತ್ತಲೂ ನಾವಿಕ ವ್ಯವಸ್ಥೆ ಮಾಡಲು ಅಮೆರಿಕ ಮಾಲಕತ್ವದ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಗೆ ಇದು ಪರ್ಯಾಯವಾಗಲಿದೆ.

ಯುದ್ಧ ಹಾಗೂ ಸಂಘರ್ಷಗಳ ಸಮಯದಲ್ಲಿ ಏಕ ಮಾಲೀಕತ್ವ (ಒಂದೇ ದೇಶದ ಹಿಡಿತದಲ್ಲಿ) ವಿರುವ ಜಿಪಿಎಸ್ ನಂಥ ಜಾಗತಿಕ ವ್ಯವಸ್ಥೆಯನ್ನು ನಂಬಿಕೊಂಡಿರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ದೇಶಗಳು ತಮ್ಮದೇ ನಾವಿಕ ವ್ಯವಸ್ಥೆಯನ್ನು ರೂಪಿಸಿವೆ. ಇದು ಭಾರತಕ್ಕೆ ಪ್ರತಿಕೂಲ ಪರಿಸ್ಥಿತಿಯಲ್ಲೂ ನಾವಿಕ ವ್ಯವಸ್ಥೆಯ ಲಭ್ಯತೆಯನ್ನು ಒದಗಿಸಲಿದೆ.

English summary
Mobile phones may have the NaVIC system, a home-grown GPS, as early as next year, a senior ISRO scientist said Friday, 7 September at the Bangalore Space Expo 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X