ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ರೇಜ್ ಸಾವು: ರೋಚಕ ತಿರುವು ಪಡೆದ ಮರಣೋತ್ತರ ವರದಿ

|
Google Oneindia Kannada News

ರಾಂಚಿ, ಸೆಪ್ಟೆಂಬರ್ 13: ಜಾರ್ಖಂಡ್ ನಲ್ಲಿ ತಬ್ರೇಜ್ ಅನ್ಸಾರಿ ಎಂಬ 24 ವರ್ಷ ವಯಸ್ಸಿನ ಯುವಕನ ಸಾವಿನ ಪ್ರಕರಣದ ಮರಣೋತ್ತರ ವರದಿ ರೋಚಕ ತಿರುವು ಪಡೆದಿದೆ.

ಇತ್ತೀಚೆಗೆ ಹೊರಬಿದ್ದ ಮರಣೋತ್ತರ ವರದಿಯಲ್ಲಿ ತಬ್ರೇಜ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆಂದು ಉಲ್ಲೇಖಿಸಲಾಗಿತ್ತು. ಇದರಿಂದಾಗಿ ಆತನ ಕೊಲೆ ಆರೋಪ ಹೊತ್ತಿದ್ದ 11 ಜನರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನೇ ಕೈಬಿಡಲಾಗಿತ್ತು.

ತಬ್ರೇಜ್ ಸಾವಿನ ಪ್ರಕರಣದ ದಿಕ್ಕನ್ನೇ ಬದಲಿಸಿದ ಅಟಾಪ್ಸಿ ವರದಿತಬ್ರೇಜ್ ಸಾವಿನ ಪ್ರಕರಣದ ದಿಕ್ಕನ್ನೇ ಬದಲಿಸಿದ ಅಟಾಪ್ಸಿ ವರದಿ

ಆದರೆ ಇದೀಗ ಮರಣೋತ್ತರ ವರದಿ ನೀಡಿದ್ದ ವೈದ್ಯರು ವರಸೆ ಬದಲಿಸಿದ್ದಾರೆ. ತಬ್ರೇಜ್ ಹೃದಯಾಘಾತದಿಂದ ಮರಣಹೊಂದಿದ್ದು ಸತ್ಯ. ಆದರೆ ಅದಕ್ಕೂ ಮುನ್ನ ಅವರ ತಲೆಬುರುಡೆಗೆ ಬಲವಾಗಿ ಏಟಾಗಿತ್ತು. ಅತಿಯಾದ ಹಿಂಸೆಯಿಂದ ಸಂಕಟ ಅನುಭವಿಸುತ್ತಿದ್ದ ತಬ್ರೇಜ್ ನಂತರ ಹೃದಯಾಘಾತಕ್ಕೊಳಗಾಗಿದ್ದಾರೆ.

ಅತಿಯಾದ ಭಯ ಮತ್ತು ದೇಹಕ್ಕಾಗಿರುವ ನೋವನ್ನು ಸಹಿಸಿಕೊಳ್ಳಲಾಗದೆಯೂ ತಬ್ರೇಜ್ ಗೆ ಹೃದಯಾಘಾತವಾಗಿರಬಹುದು. ಅದೂ ಹೃದಯಾಘಾತಕ್ಕೆ ಒಂದು ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಏನಿದು ಪ್ರಕರಣ?

ಏನಿದು ಪ್ರಕರಣ?

ಕಳೆದ ಜೂನ್ ತಿಂಗಳಿನಲ್ಲಿ ತಬ್ರೇಜ್ ಅನ್ಸಾರಿ ಎಂಬುವವರ ಮೇಲೆ ಮೋಟರ್ ಸೈಕಲ್ ಕದ್ದಿದ್ದಾನೆಂದು ಆರೋಪಿಸಿ ಜನರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿತ್ತು. ಆತನ ಬಳಿ 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ ವಿಡಿಯೋ ಸಹ ವೈರಲ್ ಆಗಿತ್ತು. ಪೊಲೀಸರು ನಂತರ ಆತನನ್ನು ರಕ್ಷಿಸಿ, ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದರು. ಮಾರಣಾಂತಿಕ ಗಾಯಗಳಿಂದ ಬಳಲುತ್ತಿದ್ದ ಆತ ತನ್ನನ್ನು ಆಸ್ಪತ್ರೆಗೆ ಸೇರಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಪೊಲಿಸರು ನಾಲ್ಕು ದಿನದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ.

ಮರಣೋತ್ತರ ವರದಿಯಲ್ಲೇನಿತ್ತು?

ಮರಣೋತ್ತರ ವರದಿಯಲ್ಲೇನಿತ್ತು?

ಮರಣೋತ್ತರ ವರದಿಯಲ್ಲಿ ಮೊದಲಿಗೆ, "ತಬ್ರೇಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ" ಎಂದು ಉಲ್ಲೇಖಿಸಲಾಗಿತ್ತು. ಆದರೆ ಇದೀಗ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದರೂ, ಅದಕ್ಕೂ ಮುನ್ನ ಆತನ ತಲೆಬುರುಡೆಗೆ ಬಲವಾದ ಗಾಯವಾಗಿತ್ತು. ಆತನ ದೇಹದಲ್ಲಿ ಸಾಕಷ್ಟು ಏಟುಗಳಿದ್ದವು. ಆ ಯಾತನೆಗೇ ಆತ ಹೃದಯಾಘಾತಕ್ಕೊಳಗಾಗಿರಬಹುದು" ಎಂದು ವೈದ್ಯರು ಹೇಳಿದ್ದಾರೆ.

ಮದುವೆಯಾಗಿ ಒಂದೂವರೆ ತಿಂಗಳಾಗಿತ್ತಷ್ಟೇ.. ತಬ್ರಿಝ್ ಸಾವಿನ ಕಣ್ಣೀರ ಕತೆಮದುವೆಯಾಗಿ ಒಂದೂವರೆ ತಿಂಗಳಾಗಿತ್ತಷ್ಟೇ.. ತಬ್ರಿಝ್ ಸಾವಿನ ಕಣ್ಣೀರ ಕತೆ

ಹನ್ನೊಂದು ಆರೋಪಿಗಳ ಕತೆ ಏನು?

ಹನ್ನೊಂದು ಆರೋಪಿಗಳ ಕತೆ ಏನು?

ತಬ್ರೇಜ್ ಪ್ರಕರಣದಲ್ಲಿ ಬಂಧಿತರಾಗಿದ್ದ 11 ಜನರ ಮೇಲೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಆದರೆ ಮರಣೋತ್ತರ ವರದಿಯಲ್ಲಿ ಆತ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ಉಲ್ಲೇಖಿಸಿದ್ದರಿಂದ ಆರೋಪಿಗಳ ಮೇಲಿದ್ದ ಪ್ರಕರಣವನು ಪೊಲೀಸರು ಹಿಂಪಡೆದಿದ್ದರು. ಆದರೆ ಇದೀಗ ವೈದ್ಯರ ಹೇಳಿಕೆ ವಿಭಿನ್ನವಾಗಿದ್ದು, ಆರೋಪಿಗಳು ಮತ್ತೆ ವಿಚಾರಣೆ ಎದುರಿಸಬೇಕಾಗಬಹುದು.

ಸಿಬಿಐ ತನಿಖೆಗೆ ಆಗ್ರಹ

ಸಿಬಿಐ ತನಿಖೆಗೆ ಆಗ್ರಹ

ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ತಬ್ರೇಜ್ ಪತ್ನಿ ಶೈಶ್ತಾ ಸನ್ಸಾರಿ ಮತ್ತು ಅವರ ಕುಟುಂಬಸ್ತರು ಆಗ್ರಹಿಸಿದ್ದಾರೆ.

ಜಾರ್ಖಂಡ್: ಮೋಟರ್ ಸೈಕಲ್ ಕದ್ದ ಎಂದು ಹೊಡೆದು ಕೊಂದ ಜನಜಾರ್ಖಂಡ್: ಮೋಟರ್ ಸೈಕಲ್ ಕದ್ದ ಎಂದು ಹೊಡೆದು ಕೊಂದ ಜನ

English summary
Mob Lynching: Doctors tell there are some confusion in Tabrez Ansari's Post Mortem report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X