ಶಾಸಕಿ- ಮಹಿಳಾ ಕಾನ್ ಸ್ಟೇಬಲ್ ಪರಸ್ಪರ ಕಪಾಳಮೋಕ್ಷ

Posted By:
Subscribe to Oneindia Kannada
   ಮಹಿಳಾ ಪೇದೆ ಕಪಾಳಕ್ಕೆ ಹೊಡೆದು ವಾಪಾಸ್ ಹೊಡೆಸಿಕೊಂಡ ಕಾಂಗ್ರೆಸ್ ಎಂ ಎಲ್ ಎ | Oneindia Kannada

   ಶಿಮ್ಲಾ, ಡಿಸೆಂಬರ್ 30 : ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಪ್ರಹಸನ ಶುಕ್ರವಾರ ಇಡೀ ಸುದ್ದಿಗೆ ಕಾರಣವಾಯಿತು. ಹಿಮಾಚಲಪ್ರದೇಶದ ಕಾಂಗ್ರೆಸ್ ಶಾಸಕಿ ಹಾಗೂ ಎಐಸಿಸಿಯಲ್ಲಿ ಒಳ್ಳೆ ಹುದ್ದೆಯಲ್ಲಿರುವ ಆಶಾಕುಮಾರಿ ಅವರು ಮಹಿಳಾ ಕಾನ್ ಸ್ಟೇಬಲ್ ವೊಬ್ಬರ ಮೇಲೆ ಕೈ ಮಾಡಿದ್ದಾರೆ. ಪ್ರತಿಯಾಗಿ ಆ ಕಾನ್ ಸ್ಟೇಬಲ್ ಕೂಡ ಈಕೆಗೆ ಹೊಡೆದಿದ್ದಾರೆ. ಈ ಘಟನೆ ರಂಪ- ರಾಮಾಯಣವಾಗಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿವರೆಗೆ ಸುದ್ದಿ ಮುಟ್ಟಿದೆ.

   ಕೊನೆಗೆ ಶಾಸಕಿ ಆಶಾಕುಮಾರಿ ನಡವಳಿಕೆಗೆ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕಿಯೂ ಆಗಿರುವ ಆಶಾ ಕುಮಾರಿ ಅವರು ಪಂಜಾಬ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯೂ ಹೌದು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಭೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿತ್ತು. ಆ ಸಭೆಯಲ್ಲಿ ಭಾಗವಹಿಸಲು ಆಶಾಕುಮಾರಿ ತೆರಳಿದ್ದಾರೆ.

   MLA and lady constable slapped each other

   ಅವರನ್ನು ಒಳಗೆ ಬಿಡದೆ ಮಹಿಳಾ ಕಾನ್ ಸ್ಟೇಬಲ್ ತಡೆದಿದ್ದಾರೆ. ಆ ಸಿಟ್ಟಿನಲ್ಲಿ ಆಶಾಕುಮಾರಿ ಅವರು ಕರ್ತವ್ಯನಿರತ ಮಹಿಳಾ ಕಾನ್ ಸ್ಟೇಬಲ್ ಕೆನ್ನೆಗೆ ಹೊಡೆದಿದ್ದಾರೆ. ಹೊಡೆತ ತಿಂದ ಆ ಮಹಿಳೆ ಸಿಟ್ಟಿನಲ್ಲಿ ಶಾಸಕಿಯ ಕಪಾಳಕ್ಕೆ ಹೊಡೆದಿದ್ದಾರೆ. ಇಷ್ಟೆಲ್ಲ ಆದ ಮೇಲೆ ಮಾಧ್ಯಮಗಳ ಜತೆ ಆಶಾಕುಮಾರಿ ಮಾತನಾಡಿದ್ದಾರೆ.

   "ಹೌದು, ಸಿಟ್ಟಿನ ಭರದಲ್ಲಿ ಕಾನ್ ಸ್ಟೇಬಲ್ ಗೆ ಹೊಡೆದಿದ್ದು ನಿಜ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಆದರೆ ಆಕೆಯ ತಾಯಿಯ ವಯಸ್ಸು ನನಗೆ. ಪ್ರತಿಯಾಗಿ ನನ್ನ ಕಪಾಳಕ್ಕೆ ಹೊಡೆದದ್ದು ಸರಿಯೇ?" ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಕ್ಷಣದ ಕೋಪ ಮರ್ಯಾದೆಯನ್ನು ಕಳೆದಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Himachal Pradesh MLA Ashakumari and lady constable slapped each other in Shimla on Friday. There was a meeting of AICC president Rahul Gandhi. Lady constable did not allow Ashakumari for meeting, angry MLA slaps constable. In return constable slapped MLA Ashakumari.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ