ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#ಮಿಟೂಗೆ ಮೊದಲ ಜಯ, ಕೇಂದ್ರ ಮಂತ್ರಿ ಎಂಜೆ ಅಕ್ಬರ್‌ ರಾಜೀನಾಮೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 17: #ಮಿಟೂ ಅಭಿಯಾನಕ್ಕೆ ಮೊದಲ ಜಯ ದೊರೆತಿದೆ. ಇದೇ ಅಭಿಯಾನದಡಿ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿ ಆಗಿದ್ದ ಕೇಂದ್ರ ಮಂತ್ರಿ ಎಂಜೆ ಅಕ್ಬರ್‌ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾಜಿ ಸಂಪಾದಕ ಹಾಗೂ ಕೇಂದ್ರದ ವಿದೇಶಾಂಗ ರಾಜ್ಯ ಖಾತೆ ಸಚಿವ ಆಗಿರುವ ಎಂಜೆ ಅಕ್ಬರ್‌ ವಿರುದ್ಧ 20 ಪತ್ರಕರ್ತೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅವರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು.

ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ

ಎಂಜೆ ಅಕ್ಬರ್‌ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಪ್ರಿಯಾ ರಮಣಿ ಎಂಬುವರು ಮೊದಲಿಗೆ ಟ್ವಿಟ್ಟರ್‌ನಲ್ಲಿ #ಮಿಟೂ ಅಭಿಯಾನದ ಅಡಿ ಎಂಜೆ ಅಕ್ಬರ್‌ ಅವರ ಕಾಮಚೇಷ್ಟೆಗಳ ಬಗ್ಗೆ ವಿವರವಾಗಿ ಬರೆದುಕೊಂಡಿದ್ದರು.

ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?

ಇದರ ನಂತರ ಹಲವು ಪತ್ರಕರ್ತೆಯರು ಇದಕ್ಕೆ ಧನಿ ಗೂಡಿಸಿದ್ದರು. ಸುಮಾರು 20 ಪತ್ರಕರ್ತೆಯರು ಅಕ್ಬರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಮೂಲಕ ಅಕ್ಬರ್‌ ಹೆಣ್ಣುಬಾಕತನವನ್ನು ಜಾಹೀರು ಮಾಡಿದ್ದರು.

ಎಂಜೆ ಅಕ್ಬರ್ ವಿರುದ್ಧ ಹೇಳಿಕೆ ನೀಡಲು 20 ಪತ್ರಕರ್ತೆಯರು ಸಿದ್ಧ ಎಂಜೆ ಅಕ್ಬರ್ ವಿರುದ್ಧ ಹೇಳಿಕೆ ನೀಡಲು 20 ಪತ್ರಕರ್ತೆಯರು ಸಿದ್ಧ

ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಾಂಗ್ರೆಸ್‌ ಸಹ ಅಕ್ಬರ್‌ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಿತ್ತು. ಸರ್ಕಾರ ಸಹ ಈ ಪ್ರಕರಣದಿಂದ ಭಾರಿ ಮುಜುಗರಕ್ಕೆ ಒಳಗಾಗಿತ್ತು. ಅಂತಿಮವಾಗಿ ಇಂದು ಎಂಜೆ ಅಕ್ಬರ್‌ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

'ಸುಳ್ಳು ಆರೋಪದ ವಿರುದ್ಧ ಹೋರಾಡಲು ರಾಜೀನಾಮೆ'

'ಸುಳ್ಳು ಆರೋಪದ ವಿರುದ್ಧ ಹೋರಾಡಲು ರಾಜೀನಾಮೆ'

ರಾಜೀನಾಮೆ ನೀಡಿರುವ ಬಗ್ಗೆ ಹೇಳಿಕೆ ನೀಡಿರುವ ಅವರು, ನನ್ನ ಮೇಲೆ ಸುಳ್ಳು ಆರೋಪಗಳು ಬಂದಿರುವ ಕಾರಣ, ರಾಜೀನಾಮೆ ನೀಡಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಸ್ವಂತ ಬಲದ ಮೇಲೆ ಹೋರಾಡುತ್ತೇನೆ ಎಂದಿದ್ದಾರೆ.

ಮೋದಿ, ಸುಷ್ಮಾ ಸ್ವರಾಜ್‌ಗೆ ಧನ್ಯವಾದಗಳು

ಮೋದಿ, ಸುಷ್ಮಾ ಸ್ವರಾಜ್‌ಗೆ ಧನ್ಯವಾದಗಳು

ಇಷ್ಟು ದಿನ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ನರೇಂದ್ರ ಮೋದಿ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

ಅಕ್ಬರ್‌ ಪರ ವಾದಿಸಲು 97 ವಕೀಲರು

ಅಕ್ಬರ್‌ ಪರ ವಾದಿಸಲು 97 ವಕೀಲರು

ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ ಎಂಜೆ ಅಕ್ಬರ್‌ ಪರ ವಾದಿಸಲು 97 ವಕೀಲರ ದೊಡ್ಡ ತಂಡ ತಯಾರಾಗಿದೆ. ಈಗಾಗಲೇ ಅಕ್ಬರ್‌ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

English summary
Sexual Harrasment accused central minister MJ Akbhar resigns from his post. He was accused under #metoo movment by several women journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X