ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಳಿಮರಿಗಾಗಿ ಮರುಗಿದ ಆ ಮುದ್ದುಹುಡುಗನಿಗೆ ಉಘೇ ಎಂದ ಶಾಲೆ!

|
Google Oneindia Kannada News

ಸಾಯಿರಂಗ್(ಮಿಜೋರಾಂ), ಏಪ್ರಿಲ್ 05: ಅಚಾನಕ್ಕಾಗಿ ತನ್ನ ಸೈಕಲ್ಲಿಗೆ ಸಿಕ್ಕು ಸತ್ತ ಕೋಳಿಮರಿಯನ್ನು ಹಿಡಿದು ಆಸ್ಪತ್ರೆಗೆ ತೆರಳಿ, ಅದನ್ನು ಬದುಕಿಸುವಂತೆ ಅಂಗಲಾಚಿದ ಮುಗ್ಧ ಹುಡುಗನಿಗೆ ಆತನ ಶಾಲೆಯಲ್ಲಿ ರಾಜಮರ್ಯಾದೆ ಸಿಕ್ಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹುಡುಗನ ಚಿತ್ರ ವೈರಲ್ ಆಗಿತ್ತು. ಈ ಚಿತ್ರವನ್ನು ಸುಮಾರು 85 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದರೆ, 11 ಸಾವಿರಕ್ಕೂ ಹೆಚ್ಚು ಜನ ಈ ಚಿತ್ರಕ್ಕೆ ಕಮೆಂಟ್ ಹಾಕಿದ್ದರು. ಅಂತರ್ಜಾಲ ಲೋಕದಲ್ಲಿ ತಲ್ಲಣ ಸೃಷ್ಟಿಸಿದ ಈ 6 ವರ್ಷ ವಯಸ್ಸಿನ ಡೆರೆಕ್ ಸಿ ಲಾಲ್ ಚಾನ್ಹಿಮಾನ ಮುಗ್ಧತೆಗೆ ಆತನ ಶಾಲೆಯಿಂದಲೂ ಪ್ರಶಂಸೆ ಸಿಕ್ಕಿದೆ.

ಸೋ ಕ್ಯೂಟ್! ಮುದ್ದು ಹುಡುಗನ ಮುಗ್ಧತೆಗೆ ಇಂಟರ್ ನೆಟ್ ಲೋಕ ಫಿದಾ!ಸೋ ಕ್ಯೂಟ್! ಮುದ್ದು ಹುಡುಗನ ಮುಗ್ಧತೆಗೆ ಇಂಟರ್ ನೆಟ್ ಲೋಕ ಫಿದಾ!

ಹುಡುಗನ ಮಾನವೀಯ ಅಂತಃಕರಣ ಕಂಡು ಆತನಿಗೆ ಶಾಲೆ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದೆ.

Mizorams humble boy, an internet hero has been rewarded by school

ದೆರೆಕ್ ಸಿ ಲಾಲ್ ಚಾನ್ಹಿಮಾ ಎಂಬ ಬಾಲಕ ತನ್ನ ಸೈಕಲ್ ಏರಿ ಶಾಲೆಗೆ ಹೊರಟಿದ್ದ ಸಂದರ್ಭದಲ್ಲಿ ಆತನ ಸೈಕಲ್ಲಿಗೆ ಕೋಳಿಮರಿಯೊಂದು ಅಡ್ಡಬಂದಿತ್ತು. ಅದು ತಕ್ಷಣವೇ ಸತ್ತೂ ಹೋಗಿತ್ತು. ಕೂಡಲೇ ಈ ಬಾಲಕ ಆ ಕೋಳಿಮರಿಯನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ತನ್ನ ಬಳಿ ಉಳಿತಾಯ ಮಾಡಿಟ್ಟುಕೊಂಡಿದ್ದ 10 ರೂ. ನೋಟನ್ನು ಹಿಡಿದು ಆಸ್ಪತ್ರೆಗೆ ಬಂದಿದ್ದ!

ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ

ಆದರೆ ಕೋಳಿಮರಿ ಸತ್ತಿದೆ ಎಂದು ಹುಡುಗನಿಗೆ ತಿಳಿಸಿದ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಗಳಲ್ಲಿ ಕೋಳಿಮರಿಗೆ ಚಿಕಿತ್ಸೆ ನೀಡೋಲ್ಲ ಎಂದಿದ್ದಾರೆ. ನಿರಾಸೆಯಿಂದ ಹುಡುಗ ವಾಪಸ್ಸಾಗಿದ್ದಾನೆ. ಆದರೆ ಈ ಹುಡು ಒಂದು ಕೈಯಲ್ಲಿ ಕೋಳಿಮರಿ, ಇನ್ನೊಂದು ಕೈಯಲ್ಲಿ ಹತ್ತು ರೂಪಾಯಿ ನೋಟು ಹಿಡಿದಿರುವ ಚಿತ್ರವನ್ನು ನರ್ಸ್ ವೊಬ್ಬರು ಕ್ಲಿಕ್ಕಿಸಿದ್ದಾರೆ. ಬಾಲಕನ ಮಾನವೀಯ ಅಂತಃಕರಣ, ಮುಗ್ಧತೆ ಕಂಡು ಆಸ್ಪತ್ರೆ ಸಿಬ್ಬಂದಿ ಆತನನ್ನು ಶ್ಲಾಘಿಸಿದ್ದಾರೆ.

English summary
Young boy from Sairang, Mizoram, accidentally ran over his neighbour's chicken and took the chicken to a nearby hospital with his savings. After his humble gesture breaks the internet his school rewarded him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X