ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂನಲ್ಲಿ ಮುಖ್ಯಮಂತ್ರಿಗೆ ಒಂದು ಕ್ಷೇತ್ರದಲ್ಲಿ ಸೋಲು!

|
Google Oneindia Kannada News

ನವದೆಹಲಿ, ಡಿಸೆಂಬರ್ 11 : ಮಿಜೋರಾಂನ ಮುಖ್ಯಮಂತ್ರಿ ಲಾಲ್ ಥಾನಾವಾಲ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಎರಡು ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದು, ಚಂಫೈ ದಕ್ಷಿಣ ಕ್ಷೇತ್ರದಲ್ಲಿ ಸೋತಿದ್ದಾರೆ.

40 ಸ್ಥಾನಗಳನ್ನು ಹೊಂದಿರುವ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಎಂಎನ್‌ಎಫ್ 28, ಕಾಂಗ್ರೆಸ್‌ 7 ಮತ್ತು ಇತರ ಅಭ್ಯರ್ಥಿಗಳು 5 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮಿಜೋರಾಂ ಸಮೀಕ್ಷೆ: ಈಶಾನ್ಯ ರಾಜ್ಯಗಳ ಕೊನೆಯ ಕೊಂಡಿಯನ್ನೂ ಕಳಚಿಕೊಂಡೀತೆ ಕಾಂಗ್ರೆಸ್ಮಿಜೋರಾಂ ಸಮೀಕ್ಷೆ: ಈಶಾನ್ಯ ರಾಜ್ಯಗಳ ಕೊನೆಯ ಕೊಂಡಿಯನ್ನೂ ಕಳಚಿಕೊಂಡೀತೆ ಕಾಂಗ್ರೆಸ್

Mizoram CM Lal Thanhawla lost election in Champhai South seat

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಿಜೋರಾಂ ಮುಖ್ಯಮಂತ್ರಿ ಲಾಲ್ ಥಾನಾವಾಲ ಅವರು ಚಂಫೈ ದಕ್ಷಿಣ ಮತ್ತು ಸರ್ಚಿಪ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಚಂಫೈ ದಕ್ಷಿಣ ಕ್ಷೇತ್ರದಲ್ಲಿ ಅವರು ಸೋಲು ಕಂಡಿದ್ದಾರೆ.

ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?ಮಿಜೋರಾಂ ಚುನಾವಣೆ: ಆಡಳಿತ ವಿರೋಧಿ ಅಲೆ ಜಯಿಸಬಲ್ಲದೆ ಕಾಂಗ್ರೆಸ್?

ಲಾಲ್ ಥಾನಾವಾಲ ಅವರು ಐದು ಬಾರಿ ಮಿಜೋರಾಂನ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸೋಲು ಕಾಣುವ ಮೂಲಕ ಕಾಂಗ್ರೆಸ್ ಈಶಾನ್ಯ ರಾಜ್ಯಗಳ ಕೊನೆ ಕೊಂಡಿಯನ್ನು ಕಡಿದುಕೊಂಡಿದೆ.

ವಿಜೋ ನ್ಯಾಷನಪ್ ಫ್ರಂಟ್ (ಎಂಎನ್‌ಎಫ್) ಈ ಬಾರಿ ಕಾಂಗ್ರೆಸ್‌ ಗೆಲುವಿನ ನಿರೀಕ್ಷೆಯನ್ನು ಹುಸಿ ಮಾಡಿದೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 21 ಸ್ಥಾನಗಳು ಬಹುಮತಕ್ಕೆ ಅಗತ್ಯವಾಗಿದೆ. ಬಿಜೆಪಿ ಅಧಿಕಾರದಿಂದ ದೂರವಿರುವ ಈಶಾನ್ಯ ಭಾರತದ ಏಕೈಕ ರಾಜ್ಯ ಮಿಜೋರಾಂ ಆಗಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ 34, ಎಂಎನ್‌ಎಫ್ 5 ಮತ್ತು ಇತರರು 1 ಕ್ಷೇತ್ರದಲ್ಲಿ ಜಯಗಳಿಸಿದ್ದರು. ಆದರೆ, ಈ ಬಾರಿ ಪುನಃ ಅಧಿಕಾರ ಪಡೆಯುವ ಕಾಂಗ್ರೆಸ್ ಕನಸು ನನಸಾಗಲಿಲ್ಲ.

English summary
Mizoram Chief Minister and Congress leader Lal Thanhawla lost election in Champhai South seat. He contested in Champhai South and Serchhip assembly seats for 2018 assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X