ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ವೈದ್ಯರ ಮೇಲೆ ಮಗಳ ಹಲ್ಲೆ, ಕ್ಷಮೆ ಕೇಳಿದ ಮಿಜೋರಾಂ ಸಿಎಂ

|
Google Oneindia Kannada News

ಐಜ್ವಾಲ್, ಆಗಸ್ಟ್ 21: ಮಿಜೋರಾಂ ಮುಖ್ಯಮಂತ್ರಿ ಝೋರಾಮ್‌ತಂಗ ಮಗಳು ವೈದ್ಯರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಭಾರೀ ಟೀಕೆ ವ್ಯಕ್ತವಾದ ಬಳಿಕ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ರಾಜ್ಯದ ರಾಜಧಾನಿ ಐಜ್ವಾಲ್‌ನಲ್ಲಿ ಕ್ಲಿನಿಕ್‌ ಒಂದರಲ್ಲಿ ಚರ್ಮರೋಗ ತಜ್ಞ ವೈದ್ಯರು ಅಪಾಯಿಂಟ್‌ಮೆಂಟ್ ಇಲ್ಲದೆ ಅವರನ್ನು ನೋಡಲು ನಿರಾಕರಿಸಿದ ನಂತರ ಮುಖ್ಯಮಂತ್ರಿಯವರ ಪುತ್ರಿ ಮಿಲಾರಿ ಚಾಂಗ್ಟೆ ಅಸಮಾಧಾನಗೊಂಡು, ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಗುಲಾಂ ನಬಿ ಆಜಾದ್ ಗುಡ್ ಬೈ!ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಗುಲಾಂ ನಬಿ ಆಜಾದ್ ಗುಡ್ ಬೈ!

ಬುಧವಾರ ಈ ಘಟನೆ ನಡೆದಿದ್ದು, ಸಮಾಲೋಚನೆಗಾಗಿ ಕ್ಲಿನಿಕ್‌ಗೆ ಬರುವ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವಂತೆ ವೈದ್ಯರು ಮುಖ್ಯಮಂತ್ರಿಯವರ ಮಗಳು ಮಿಲಾರಿ ಚಾಂಗ್ಟೆ ಅವರಿಗೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಆಕೆ ವೈದ್ಯರ ಮೇಲೆ ಹಲ್ಲೆ ಮಾಡಿದ್ದರು.

Mizoram Chief Ministers Daughter Hits Doctor, Father askes public apology

ಸುಮಾರು ಎರಡು ದಿನಗಳಿಂದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಗುರಿಯಾದರು. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಿಜೋರಾಂ ಘಟಕ ಪ್ರತಿಭಟನೆ ಆರಂಭಿಸಿದ್ದು, ವೈದ್ಯರು ಕಪ್ಪು ಪಟ್ಟಿ ಧರಿಸಿ ಶನಿವಾರ ಕೆಲಸ ಮಾಡಿದ್ದರು.

ಮುಖ್ಯಮಂತ್ರಿಯವರು ಅಂತಿಮವಾಗಿ ತಮ್ಮ ಅಧಿಕೃತ Instagram ಖಾತೆಯ ಮೂಲಕ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ 'ಐಜ್ವಾಲ್ ಮೂಲದ ಚರ್ಮರೋಗ ವೈದ್ಯರೊಂದಿಗೆ ತಮ್ಮ ಮಗಳ "ದುರ್ವರ್ತನೆ" ಗಾಗಿ ಕ್ಷಮೆಯಾಚಿಸುತ್ತೇನೆ. ಯಾವುದೇ ರೀತಿಯಲ್ಲಿ ಆಕೆಯ ನಡವಳಿಕೆಯನ್ನು ಸಮರ್ಥಿಸುವುದಿಲ್ಲ ಎಂದು ಹೇಳಿದ್ದಾರೆ.

ಝೋರಾಮ್‌ತಂಗ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಡಿಸೆಂಬರ್ 1998 ರಿಂದ ಡಿಸೆಂಬರ್ 2008 ರವರೆಗೆ ಸತತ ಎರಡು ಅವಧಿಗೆ ಮಿಜೋರಾಂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮಿಜೋ ನ್ಯಾಷನಲ್ ಫ್ರಂಟ್‌ನ ಪ್ರತ್ಯೇಕತೆಯ ಚಳವಳಿಯ ಸಮಯದಲ್ಲಿ ಅವರು ಲಾಲ್‌ಡೆಂಗಾಗೆ ಎರಡನೇ-ಕಮಾಂಡ್ ಆಗಿದ್ದರು. 2018 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಯಾಗಿದ್ದಾರೆ.

English summary
Mizoram Chief Minister Zoramthanga's Daughter assault Doctor, Father askes public apology. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X