ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಿಧಾನಸಭೆ ಸದಸ್ಯರ ಸಂಬಳ 85 ಸಾವಿರ ರು ಏರಿಕೆ!

|
Google Oneindia Kannada News

ಐಜ್ವಾಲ್, ನವೆಂಬರ್ 21: ಮುಖ್ಯಮಂತ್ರಿ, ವಿಧಾನಸಭಾಪತಿ, ಉಪ ಸಭಾಪತಿ, ಶಾಸಕ, ಸಚಿವ, ವಿಪಕ್ಷ ನಾಯಕ ಹೀಗೆ ಈ ವಿಧಾನಸಭೆ ಸದಸ್ಯರ ಸಂಬಳವನ್ನು 85 ಸಾವಿರ ರುಗೆ ಏರಿಕೆ ಮಾಡಲು ತಿದ್ದುಪಡಿ ಮಾಡಿದ ಮಸೂದೆ ಯಾವುದೇ ವಿರೋಧವಿಲ್ಲದೆ ಒಕ್ಕೊರಲ ಸಮ್ಮತಿ ಸಿಕ್ಕಿದೆ. ಮಿಜೋರಾಂ ಅಸೆಂಬ್ಲಿ ಸದಸ್ಯರ ಸಂಬಳ, ಭತ್ಯೆ ಭರ್ಜರಿಯಾಗಿ ಏರಿಕೆಯಾಗಲಿದೆ.

ಶಾಸಕರ ತಿಂಗಳ ಸಂಬಳ ಹಾಗೂ ಭತ್ಯೆ ಸುಮಾರು 65, 000 ರು ನಷ್ಟಿದ್ದು, ಈಗ 1.50 ಲಕ್ಷ ರುಗೇರಲಿದೆ. ಸುಮಾರು ಶೇ 130.77ರಷ್ಟು ಏರಿಕೆ ಕಾಣಲಿದೆ. ಶಾಸಕರ ಸಂಬಳ ಏರಿಕೆ ಬಗ್ಗೆ ಸದ್ಯದಲ್ಲೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗುತ್ತದೆ.

ಶಾಸಕರಲ್ಲದೆ ಮುಖ್ಯ ವಿಪ್ ಹಾಗೂ ಸಹಾಯಕ ವಿಪ್ ಗಳ ಸಂಬಳ ಏರಿಕೆಗೂ ಶಿಫಾರಸು ಮಾಡಲಾಗಿದೆ. ಪರಿಷ್ಕೃತ ಸಂಬಳ ಅದೇಶದ ನಂತರ ಮುಖ್ಯಮಂತ್ರಿಗೆ 1.84 ಲಕ್ಷ ರು ಪ್ರತಿ ತಿಂಗಳು ಸಿಗಲಿದೆ. ಸ್ಪೀಕರ್ ಗೆ 1.73 ಲಕ್ಷ ಸಿಗಲಿದೆ. ಕ್ಯಾಬಿನೆಟ್ ದರ್ಜೆ ಹಾಗೂ ವಿಪಕ್ಷ ನಾಯಕನಿಗೆ 1.68 ಲಕ್ಷ ರು ಲಭಿಸಲಿದೆ ಎಂದು ತಿದ್ದುಪಡಿ ಮಸೂದೆ ಮಂಡಿಸಿದ ಸಂಸದೀಯ ವ್ಯವಹಾರ ಸಚಿವ ಟಿ. ಜೆ ಲಾಲ್ ನುಂತ್ತ್ ಲುಯಾಂಗ ಹೇಳಿದರು.

Mizoram Assembly increases salary of MLAs by Rs 85,000

ಉಪ ಸಭಾಪತಿಗೆ ಪ್ರತಿ ತಿಂಗಳಿಗೆ 1.60 ಲಕ್ಷ ರು, ರಾಜ್ಯ ಸಚಿವ, ಉಪ ವಿಫ್ 1.57 ಲಕ್ಷ ರು ಗಳಿಸಿದರು ಹೆಚ್ಚುವರಿ ಭತ್ಯೆ ಪಡೆಯುವುದಿಲ್ಲ.

ಒಟ್ಟಾರೆ, ಮುಖ್ಯಮಂತ್ರಿ, ಸ್ಪೀಕರ್, ಉಪ ಸಭಾಪತಿ, ವಿಪಕ್ಷ ನಾಯಕ, ಶಾಸಕರ ಸರಾಸರಿ ಸಂಬಳ 80, 000 ರು ಪ್ರತಿ ತಿಂಗಳು ಎಂದು ನಿಗದಿಪಡಿಸಲಾಗಿದೆ.

ಇನ್ನು ಮಾಜಿ ಶಾಸಕರ ಪಿಂಚಣಿ ಮೊತ್ತವು 25,000 ರು ನಿಂದ 40, 000ರುಗೇರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದವರಿಗೆ 5,000 ರು ಪ್ರತಿ ತಿಂಗಳು ಹೆಚ್ಚುವರಿಯಾಗಿ ಸಿಗಲಿದೆ. ಒಟ್ಟಾರೆ, ಪಿಂಚಣಿ ಮೊತ್ತವನ್ನು ಸರಾಸರಿ 70, 000 ರು ಪ್ರತಿ ತಿಂಗಳು ಎಂದು ನಿಗದಿಪಡಿಸಲಾಗಿದೆ.

English summary
The Mizoram Assembly on Thursday passed amendment bills by which the salaries and allowances of the chief minister, speaker, deputy speaker, MLAs, ministers and leader of opposition will go up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X