ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋ ಕ್ಯೂಟ್! ಮುದ್ದು ಹುಡುಗನ ಮುಗ್ಧತೆಗೆ ಇಂಟರ್ ನೆಟ್ ಲೋಕ ಫಿದಾ!

|
Google Oneindia Kannada News

ಸಾಯಿರಂಗ್(ಮಿಜೋರಾಂ), ಏಪ್ರಿಲ್ 04: ಒಂದು ಕೈಯಲ್ಲಿ ಕೋಳಿಮರಿ, ಮತ್ತೊಂದು ಕೈಯಲ್ಲಿ 10 ರೂ.ನೋಟು ಹಿಡಿದಿರುವ ಪುಟ್ಟ ಬಾಲಕನೊಬ್ಬನ ಚಿತ್ರಕ್ಕೆ ಇಂಟರ್ನೆಟ್ ಲೋಕ ಫಿದಾ ಆಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸತ್ತುಹೋದ ಕೋಳಿಮರಿಯನ್ನು ಹಿಡಿದು, ಅದಕ್ಕೆ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ತೆರಳಿದ ಈ ಬಾಲಕ, ತಾನು ಉಳಿತಾಯ ಮಾಡಿದ ಹತ್ತು ರೂಪಾಯಿಯನ್ನು ಹಿಡಿದು, ವೈದ್ಯರ ಬಳಿ ಅಂಗಲಾಚುತ್ತಿದ್ದಾನೆ!

ವೈರಲ್ ಚಿತ್ರ: ಹುತಾತ್ಮ ಅಪ್ಪನ ಕಳೇಬರಕ್ಕೆ ಮುತ್ತಿಕ್ಕುತ್ತಿರುವ ಮುದ್ದುಕಂದವೈರಲ್ ಚಿತ್ರ: ಹುತಾತ್ಮ ಅಪ್ಪನ ಕಳೇಬರಕ್ಕೆ ಮುತ್ತಿಕ್ಕುತ್ತಿರುವ ಮುದ್ದುಕಂದ

ಪುಟ್ಟ ಮಕ್ಕಳ ಮುಗ್ಧತೆಯ ಪ್ರತೀಕವಾದ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 85 ಸಾವಿರಕ್ಕೂ ಹೆಚ್ಚು ಜನ ಈ ಚಿತ್ರವನ್ನು ಶೇರ್ ಮಾಡಿದ್ದರೆ, 11 ಸಾವಿರಕ್ಕೂ ಹೆಚ್ಚು ಜನ ಈ ಚಿತ್ರಕ್ಕೆ ಕಮೆಂಟ್ ಮಾಡಿದ್ದಾರೆ!

ಆಗಿದ್ದಿಷ್ಟು: ಮಿಜೋರಾಂನ ಸಾಯಿರಂಗ್ ಎಂಬಲ್ಲಿಯ ಆರು ವರ್ಷ ವಯಸ್ಸಿನ ದೆರಕ್ ಸಿ ಲಾಲ್ ಚಾನ್ಹಿಮಾ ಎಂಬ ಬಾಲಕ ತನ್ನ ಸೈಕಲ್ ಏರಿ ಶಾಲೆಗೆ ಹೊರಟಿದ್ದ ಸಂದರ್ಭದಲ್ಲಿ ಆತನ ಸೈಕಲ್ಲಿಗೆ ಕೋಳಿಮರಿಯೊಂದು ಅಡ್ಡಬಂದಿತ್ತು. ಅದು ತಕ್ಷಣವೇ ಸತ್ತೂ ಹೋಗಿತ್ತು. ಕೂಡಲೇ ಈ ಬಾಲಕ ಆ ಕೋಳಿಮರಿಯನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದು, ಮತ್ತೊಂದು ಕೈಯಲ್ಲಿ ತನ್ನ ಬಳಿ ಉಳಿತಾಯ ಮಾಡಿಟ್ಟುಕೊಂಡಿದ್ದ 10 ರೂ. ನೋಟನ್ನು ಹಿಡಿದು ಆಸ್ಪತ್ರೆಗೆ ಬಂದಿದ್ದ!

ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ

Mizoram: A cute and humble gesture of 6 year old child

ಆಸ್ಪತ್ರೆಯ ಸಿಬ್ಬಂದಿಗಳ ಬಳಿ, ಕೋಳಿಮರಿಗೆ ಚಿಕಿತ್ಸೆ ನೀಡುವಂತೆ ಅಂಗಲಾಚಿ ಬೇಡಿಕೊಂಡಿದ್ದ. ಆದರೆ ಕೋಳಿ ಮರಿ ಆಗಲೇ ಸತ್ತು ಹೋಗಿದೆ, ಕೋಳಿಮರಿಗಳಿಗೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡೋಲ್ಲ ಎಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಈ ಬಾಲಕನನ್ನು ವಾಪಸ್ ಕಳಿಸಿದ್ದಾರೆ!

English summary
This young boy from Sairang, Mizoram, accidentally ran over his neighbour's chicken. He took the chicken, ran to a nearby hospital and with all the money he had, asked for help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X