ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ರೋಗಿಗಳಿಗೆ ಪ್ರೀತಿಪಾತ್ರರೊಂದಿಗೆ ಮಾತನಾಡಲು 'ಮಿತ್ರ ರೋಬೋಟ್' ಸಹಾಯ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಕೊವಿಡ್ 19 ರೋಗಿಗಳು ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಲು ಮಿತ್ರ ರೋಬೋಟ್ ಸಹಾಯ ಮಾಡಲಿದೆ.

ಆಸ್ಪತ್ರೆಗಳಲ್ಲಿ ಕಸ್ಟಮರ್ ಸರ್ವೀಸ್ ರೋಬೋಟ್‌ಗಳು ಎಲ್ಲಾ ವಾರ್ಡ್‌ನ್ನು ಸುತ್ತಲಿದೆ. ಜೊತೆಗೆ ಕೊರೊನಾ ಸೋಂಕಿತರನ್ನು ಭೇಟಿಯಾಗಿ ಕೊರೊನಾ ಸೋಂಕಿತರಿಗೆ ಅವರ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ನೆರವಾಗುತ್ತಿದೆ.

ರೋಬೋಟ್ ಬರೆದ ಮೊದಲ ಲೇಖನರೋಬೋಟ್ ಬರೆದ ಮೊದಲ ಲೇಖನ

ಮಿತ್ರ ಎಂದರೆ ಸ್ನೇಹಿತ ಎಂದರ್ಥ. ಮಿತ್ರ ರೋಬೋಟ್ ಎದೆಯ ಭಾಗದಲ್ಲಿ ಟ್ಯಾಬ್ಲೆಟ್ ಇರಿಸಲಾಗಿದ್ದು, ಅದರ ಮೂಲಕ ತಮ್ಮ ಪ್ರೀತಿಪಾತ್ರರನ್ನು ನೋಡಬಹುದಾಗಿದೆ. ಆಸ್ಪತ್ರೆ ಸಿಬ್ಬಂದಿ ಎಲ್ಲಾ ಸಮಯದಲ್ಲೂ ಎಲ್ಲಾ ವಾರ್ಡ್‌ನಲ್ಲಿ ಇರಲು ಸಾಧ್ಯವಾಗದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ.

Mitra The Robot, Is Helping Coronavirus Patients Speak To Loved Ones

ಕೊರೊನಾ ಸೋಂಕಿತರು ಗುಣಮುಖರಾಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ರೋಗಿಗಳು ತಮ್ಮವರ ಜೊತೆ ಮಾತನಾಡಬೇಕು ಎಂದು ಅಪೇಕ್ಷಿಸುತ್ತಾರೆ, ಎಲ್ಲರ ಬಳಿಯೂ ಆಂಡ್ರಾಯ್ಡ್ ಮೊಬೈಲ್ ಇರುವುದಿಲ್ಲ.

ಹೀಗಿರುವಾಗ ಈ ಮಿತ್ರ ರೋಬೋಟ್ ಅಂತಹ ರೋಗಿಗಳ ಸಹಾಯಕ್ಕೆ ಬರಲಿದೆ ಎಂದು ಯಥಾರ್ಥ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಅರುಣ್ ಲಖನ್‌ಪಾಲ್ ತಿಳಿಸಿದ್ದಾರೆ.

ಈ ರೋಬೋಟ್‌ನ್ನು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಅದಕ್ಕೆ 1 ಮಿಲಿಯನ್ ಹಣವನ್ನು ವೆಚ್ಚ ಮಾಡಲಾಗಿದೆ. ಬುಧವಾರ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 50 ಲಕ್ಷ ದಾಟಿದೆ.

Recommended Video

Diganth ಹಾಗು Aindrita Ray ಮೊದಲ ದಿನದ ವಿಚಾರಣೆ ಹೇಗಾಯ್ತು | Oneindia Kannada

ಎಲ್ಲರ ಬಳಿಯೂ ವೈದ್ಯರು ಕುಳಿತು ಸಮಾಲೋಚನೆ ನಡೆಸಲು ಸಾಧ್ಯಯವಾಗುತ್ತಿಲ್ಲ. ಆ ಜಾಗದಲ್ಲಿ ಈ ರೋಬೋಟ್ ಎಲ್ಲರ ಯೋಗಕ್ಷೇಮ ನೋಡಿಕೊಳ್ಳಲಿದೆ.

English summary
A hospital in India has deployed a customer-service robot to patrol its wards, connecting coronavirus patients to friends and relatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X