ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪವನ್ನು ಹೊಗಳಿಕೆ ಎಂದು ರಾಹುಲ್‌ಗೆ ಹೇಳಿದ ಸಿಎಂ!

|
Google Oneindia Kannada News

ಪುದುಚೇರಿ, ಫೆಬ್ರವರಿ 17; ಮಹಿಳೆ ಮಾಡಿದ ಆರೋಪವನ್ನು ಹೊಗಳಿಕೆ ಎಂದು ರಾಹುಲ್ ಗಾಂಧಿಗೆ ಭಾಷಾಂತರ ಮಾಡಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಪುದುಚೇರಿ ಮುಖ್ಯಮಂತ್ರಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿ ಎರಡು ದಿನಗಳ ಪುದುಚೇರಿ ಪ್ರವಾಸದಲ್ಲಿದ್ದಾರೆ. ಬುಧವಾರ ಅವರು ಮೀನುಗಾರರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಭಾಷಾಂತರ ಮಾಡುತ್ತಿದ್ದರು.

ತಂದೆಯನ್ನು ಹತ್ಯೆ ಮಾಡಿದವರ ಬಗ್ಗೆ ದ್ವೇಷವಿಲ್ಲ; ರಾಹುಲ್ ಗಾಂಧಿ ತಂದೆಯನ್ನು ಹತ್ಯೆ ಮಾಡಿದವರ ಬಗ್ಗೆ ದ್ವೇಷವಿಲ್ಲ; ರಾಹುಲ್ ಗಾಂಧಿ

"ನಮಗೆ ಸಮುದ್ರವೇ ಎಲ್ಲಾ ಚಂಡಮಾರುತದ ಸಮಯದಲ್ಲಿ ನಮಗೆ ಯಾರೂ ಸಹ ಸಹಾಯ ಮಾಡಿಲ್ಲ. ಅವರು (ವಿ. ನಾರಾಯಣಸ್ವಾಮಿ) ಸಹ ಆಗ ಇಲ್ಲಿಗೆ ಭೇಟಿ ನೀಡಿಲ್ಲ" ಎಂದು ಮಹಿಳೆ ರಾಹುಲ್ ಗಾಂಧಿಗೆ ಹೇಳಿದರು.

ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ರಾಜ್ಯಪಾಲೆ ಕಿರಣ್ ಬೇಡಿ ವಜಾ!ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ರಾಜ್ಯಪಾಲೆ ಕಿರಣ್ ಬೇಡಿ ವಜಾ!

 Mistranslating Puducherry CM Narayanasamy Landed In Controversy

ಆದರೆ, ಇದನ್ನು ಭಾಷಾಂತರ ಮಾಡುವಾಗ ವಿ. ನಾರಾಯಣ ಸ್ವಾಮಿ, "ಮಹಿಳೆ ನಮ್ಮನ್ನು ಹೊಗಳುತ್ತಿದ್ದಾಳೆ. ನಿವಾರ್ ಚಂಡಮಾರುತ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದ್ದೆ. ಅದಕ್ಕೆ ಧನ್ಯವಾದ ಹೇಳುತ್ತಿದ್ದೇಳೆ" ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಜಾ ಬಗ್ಗೆ ಪುದುಚೇರಿ ಸಿಎಂ ಮಾತು? ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಜಾ ಬಗ್ಗೆ ಪುದುಚೇರಿ ಸಿಎಂ ಮಾತು?

ಮಹಿಳೆ ಮಾತನಾಡಿರುವ, ನಾರಾಯಣ ಸ್ವಾಮಿ ಭಾಷಾಂತರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕರು ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನಾರಾಯಣ ಸ್ವಾಮಿ ಟೀಕಿಸಿದ್ದಾರೆ.

ಬಿಜೆಪಿ ಚುನಾವಣಾ ಉಸ್ತುವಾರಿ ಸಿ. ಟಿ. ರವಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂತಾದ ನಾಯಕರು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಬುಧವಾರ ರಾಹುಲ್ ಗಾಂಧಿ ಮೀನುಗಾರರ ಜೊತೆ ಸಂವಾದ ನಡೆಸಿದರು. ಬಳಿಕ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

English summary
Puducherry CM V. Narayanasamy has landed in a controversy after mistranslating fisherwoman's complaint in front of Congress leader Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X