ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ ಅನುಮತಿಯೇ ಕೊಟ್ಟಿರಲಿಲ್ಲ!: ಡಿಆರ್‌ಡಿಒ ಶ್ರೇಯಸ್ಸು ತನ್ನದೆಂದ ಕಾಂಗ್ರೆಸ್‌ಗೆ ಮುಖಭಂಗ

|
Google Oneindia Kannada News

ನವದೆಹಲಿ, ಮಾರ್ಚ್ 27: ತಳಮಟ್ಟದ ಭೂ ಕಕ್ಷೆಯಲ್ಲಿ ಜೀವಂತ ಉಪಗ್ರಹಗಳನ್ನು ಹೊಡೆದುರುಳಿಸಬಲ್ಲ ತಂತ್ರಜ್ಞಾನವನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವುದು ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಮಹತ್ವದ ಸಂಗತಿಯನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಮಹತ್ವದ ಯೋಜನೆಗೆ ಚಾಲನೆ ದೊರೆತಿದ್ದು ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ. ಆಗಿನ ಡಿಆರ್‌ಡಿಒ ಮುಖ್ಯಸ್ಥ ಡಾ. ವಿ.ಕೆ. ಸಾರಸ್ವತ್ ಅವರು ಸರ್ಕಾರದ ಎದುರು ಯೋಜನೆ ವಿವರ ನೀಡಿದ್ದರು. ಅದಕ್ಕೆ ಸರ್ಕಾರ ಉತ್ತೇಜನ ನೀಡಿತ್ತು. ಆದ್ದರಿಂದ ಈ ಶ್ರೇಯಸ್ಸು ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.

ಡಿಆರ್‌ಡಿಓ 'ಮಿಷನ್ ಶಕ್ತಿ' ತ್ರಿವಿಕ್ರಮ : ಮೋದಿಗೆ ರಾಹುಲ್ ರಂಗಭೂಮಿ ದಿನದ ಶುಭಾಶಯ ಡಿಆರ್‌ಡಿಓ 'ಮಿಷನ್ ಶಕ್ತಿ' ತ್ರಿವಿಕ್ರಮ : ಮೋದಿಗೆ ರಾಹುಲ್ ರಂಗಭೂಮಿ ದಿನದ ಶುಭಾಶಯ

ಆದರೆ, ಈ ಯಶಸ್ಸಿನ ಕೀರ್ತಿಯನ್ನು ತನ್ನ ಹೆಸರಿಗೆ ಪಡೆದುಕೊಂಡಿದ್ದ ಕಾಂಗ್ರೆಸ್‌ಗೆ ಮುಖಭಂಗ ಉಂಟಾಗಿದೆ. ಆಗಿನ ಯುಪಿಎ ಸರ್ಕಾರ ತಮ್ಮ ಮಹತ್ವಾಕಾಂಕ್ಷಿ ಯೋಜನೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂದು ಸಾರಸ್ವತ್ ಹೇಳಿಕೆ ನೀಡಿದ್ದಾರೆ. ಇದರಿಂದ ಹಿರಿಮೆ ತನ್ನದೆಂದು ಹೇಳಿಕೊಂಡಿರುವ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದೆ.

mission shakti drdo former chief dr vk saraswat said we didnot get positive response from upa

'ನಾವು ಆಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿ ಮುಂದೆ ಪ್ರಾತ್ಯಕ್ಷಿಕೆ ನೀಡಿದ್ದೆವು. ಆಗ ಆ ಚರ್ಚೆಗಳು ನಡೆಯುವಾಗ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಕೊಟ್ಟಿದ್ದೆವು. ಆದರೆ, ದುರದೃಷ್ಟವಶಾತ್ ಯುಪಿಎ ಸರ್ಕಾರದಿಂದ ನಮಗೆ ಸಕಾರಾತ್ಮಕ ಸ್ಪಂದನೆ ದೊರಕಲಿಲ್ಲ. ಹೀಗಾಗಿ ನಾವು ಮುಂದೆ ಹೋಗಲಿಲ್ಲ' ಎಂದು ಅವರು ಹೇಳಿಕೆ ನೀಡಿದ್ದಾರೆ.

ಮಿಶನ್ ಶಕ್ತಿಯ ಹಿಂದೆ ಮನಮೋಹನ್ ಸಿಂಗ್: ಸಿದ್ದು ಅಭಿನಂದನೆ ಮಿಶನ್ ಶಕ್ತಿಯ ಹಿಂದೆ ಮನಮೋಹನ್ ಸಿಂಗ್: ಸಿದ್ದು ಅಭಿನಂದನೆ

ಬಳಿಕ ಮಿಷನ್ ಶಕ್ತಿ ಯೋಜನೆಯ ಪ್ರಸ್ತಾಪವನ್ನು ಡಾ. ಸತೀಶ್ ಧವನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದರು. ಅವರಿಗೆ ಧೈರ್ಯವಿತ್ತು. ಅದರಂತೆ ನಮಗೆ ಅನುಮೋದನೆ ಕೊಟ್ಟರು. 2012-13ರಲ್ಲಿ ಯುಪಿಎ ಸರ್ಕಾರ ಅನುಮತಿ ನೀಡಿದ್ದರೆ ಈ ಪ್ರಯೋಗ 2014-15ರಲ್ಲಿಯೇ ಸಾಧ್ಯವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

English summary
Former DRDO chief Dr VK Saraswat on Wednesday said that, 'We made presendation to NSA and NSC on Mission Shakti. Unfortunately we didnot get positive response'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X