ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಂ ಮೆಚ್ಚಿದ ತೈಲವರ್ಣ ಚಿತ್ರ ಬಿಡಿಸಿದವರು ಯಾರು?

|
Google Oneindia Kannada News

ಬೆಂಗಳೂರು, ಜೂ, 16: ಭಾರತದ ಸೇನೆಯ ಯೋಧ ರೆಂಜಿತ್ ಅವರ ಹಸ್ತದಲ್ಲಿ ಮೂಡಿಬಂದಿರುವ ಕಲಾಂ ತೈಲ ವರ್ಣ ಚಿತ್ರಕ್ಕೆ ಸ್ವತಃ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಕಲಾಂ 30 ವರ್ಷದ ಸೈನಿಕ ಬಿಡಿಸಿದ ಕಲಾಕೃತಿಯನ್ನು ನೋಡಿ ಮೆಚ್ಚಿದ್ದರು. ರಾಜಭವನದಲ್ಲಿ ಸೈನಿಕನ ಬಹುದಿನದ ಆಸೆ ಕೈಗೂಡಿತು. ಕ್ಷಿಪಣಿ ಮಾನವ ಮತ್ತು ಕಲಾಕಾರನ ಭೇಟಿಗೆ ಜೂನ್ 12 ಸಾಕ್ಷಿಯಾಗಿತ್ತು.[ಕಲಾಂ ಭೇಟಿಯಾಗುವ ಸೇನಾ ಸಿಪಾಯಿ ಕನಸು ನನಸು]

kalam

ತೇಗದ ಮರದ ಹಲಗೆಯ ಮೇಲೆ ಬಿಡಿಸಿರುವ ತೈಲ ವರ್ಣವನ್ನು ನೋಡಿದ ಕಲಾಂ ಸಂತಸಗೊಂಡರು. ತುಂಬಾ ಸುಂದರವಾಗಿದೆ, ನಿಮ್ಮದು ಯಾವ ಊರು? ಇದನ್ನು ಬಿಡಿಸಲು ಎಷ್ಟು ಕಾಲ ತೆಗೆದುಕೊಂಡಿರಿ? ಇಂಥ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಅಲ್ಲದೇ ತೈಲ ವರ್ಣದ ಮೇಲೆ ತಮ್ಮ ಹಸ್ತಾಕ್ಷರ ಹಾಕಿದರು.[ಒನ್ಇಂಡಿಯಾದಿಂದ ಅಬ್ದುಲ್ ಕಲಾಂ ಸಂದರ್ಶನ]

ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಪ್ರದರ್ಶನದಲ್ಲಿ ರಂಜಿತ್ ಭಾಗವಹಿಸಿದ್ದರು. ಕಲಾಂ ಅವರನ್ನು ಹತ್ತಿರದಿಂದ ಕಂಡು ತುಂಬಾ ಸಂತಸವಾಗಿದೆ. ಅವರದ್ದೊಂದು ಸ್ಪೆನ್ಸಿಲ್ ಸ್ಕೆಚ್ ಬಿಡಿಸಬೇಕು ಎಂದು ಕೊಂಡಿದ್ದೇನೆ. ಅವರ ಪ್ರೋತ್ಸಾಹಸದ ಮಾತುಗಳು ಹೊಸ ಉತ್ಸಾಹ ತಂದಿದೆ ಎಂದು ರೆಂಜಿತ್ ಹೇಳಿದರು.

English summary
Former President Dr A P J Abdul Kalam was impressed by an oil painting of his done by Renjith C, a Sepoy with the Indian Army. During his recent visit to Bengaluru, the Missile Man met the 30-year-old soldier, a gifted artist, and complimented his work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X