ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಿಕ್ಕರೆ ಏನು ಹೇಳುತ್ತೀರಿ?: ಮಿಸ್ ಕೊಹಿಮಾ ಸ್ಪರ್ಧಿ ನೀಡಿದ ಉತ್ತರ ಇದು

|
Google Oneindia Kannada News

Recommended Video

Modi focus more on women instead of cows | Oneindia Kannada

ಕೊಹಿಮಾ, ಅಕ್ಟೋಬರ್ 16: ನಾಗಾಲ್ಯಾಂಡ್‌ ರಾಜಧಾನಿ ಕೊಹಿಮಾದಲ್ಲಿ ನಡೆದ 'ಮಿಸ್ ಕೊಹಿಮಾ' 2019ರ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಸ್ಪರ್ಧಾಳು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಮೆಚ್ಚುಗೆಯ ಹಾಗೂ ಟೀಕೆಯ ಪ್ರತಿಕ್ರಿಯೆಗಳೆರಡೂ ವ್ಯಕ್ತವಾಗಿವೆ.

ಮಿಸ್ ಕೊಹಿಮಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 18 ವರ್ಷದ ವಿಕುಒನುಒ ಸಚು ಅವರಿಗೆ ತೀರ್ಪುಗಾರರ ಪೈಕಿ ಒಬ್ಬರು, 'ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೊಂದಿಗೆ ಮಾತನಾಡುವಂತೆ ಅವಕಾಶ ನೀಡಿದರೆ ಏನು ಹೇಳುತ್ತೀರಿ?' ಎಂದು ಪ್ರಶ್ನಿಸಿದರು.

'ಓಂ' ಮತ್ತು 'ಗೋವು' ಎಂದರೆ ಕೆಲವರಿಗೆ ಸಿಟ್ಟು ಬರುತ್ತದೆ: ಮೋದಿ'ಓಂ' ಮತ್ತು 'ಗೋವು' ಎಂದರೆ ಕೆಲವರಿಗೆ ಸಿಟ್ಟು ಬರುತ್ತದೆ: ಮೋದಿ

ಆಗ ಸಚು, 'ನನ್ನನ್ನು ಭಾರತದ ಪ್ರಧಾನಿ ಆಹ್ವಾನಿಸಿದರೆ, ಗೋವುಗಳ ಬದಲು ಮಹಿಳೆಯರತ್ತ ಹೆಚ್ಚು ಗಮನ ಹರಿಸಿ ಎಂದು ಹೇಳುತ್ತೇನೆ' ಎಂಬುದಾಗಿ ಉತ್ತರ ನೀಡಿದ್ದಾರೆ. ಸಚು ಅವರ ಹೇಳಿಕೆಗೆ ಸಭಾಂಗಣದಲ್ಲಿ ಮೆಚ್ಚುಗೆಯ ಕರತಾಡನ ವ್ಯಕ್ತವಾಗಿದೆ.

Miss Kohima 2019 Pageant Focus More On Women Instead Of Cows

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚು ಅವರ ಹೇಳಿಕೆಯನ್ನು ಕೆಲವರು ಬೆಂಬಲಿಸಿದರೆ, ಅನೇಕರು ಆಕೆಯನ್ನು ಟೀಕಿಸಿದ್ದಾರೆ. ಮೋದಿ ಅವರು ಭೇಟಿ ಬಚಾವೊದಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವುಗಳ ಬಗ್ಗೆ ತಿಳಿವಳಿಕೆ ಇಲ್ಲದವರು ಈ ರೀತಿಯಾಗಿ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಸೌಂದರ್ಯ ಸ್ಪರ್ಧೆಯು ಮಹಿಳೆಯರ ಸಬಲೀಕರಣದ ಪ್ರತೀಕವೇ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಆಕೆಯ ದಿಟ್ಟತನವನ್ನು ಶ್ಲಾಘಿಸಿದ್ದಾರೆ.

Miss Kohima 2019 Pageant Focus More On Women Instead Of Cows

ನಾಗಾ ಮಹಿಳಾ ಬೆಟಾಲಿಯನ್ ಶಕ್ತಿ ಕಡೆಗಣಿಸುವಷ್ಟು ಮೂರ್ಖನಲ್ಲ: ಆನಂದ್ ಮಹೀಂದ್ರಾನಾಗಾ ಮಹಿಳಾ ಬೆಟಾಲಿಯನ್ ಶಕ್ತಿ ಕಡೆಗಣಿಸುವಷ್ಟು ಮೂರ್ಖನಲ್ಲ: ಆನಂದ್ ಮಹೀಂದ್ರಾ

ಮಿಸ್ ಕೊಹಿಮಾ 2019 ಸ್ಪರ್ಧೆಯು ಅ. 5ರಂದು ನಡೆದಿತ್ತು. 23 ವರ್ಷದ ಖ್ರಿಯೆನೊ ಲೀಜೆತ್ಸು ಜಯಶಾಲಿಯಾಗಿದ್ದರೆ, 19 ವರ್ಷದ ಖ್ರೀಲಿವೀನೌ ಸೌಚು ಮೊದಲ ರನ್ನರ್ ಅಪ್ ಆಗಿದ್ದರು.

English summary
Miss Kohima 2019 pageant's 2nd runner up Vikuonuo Sachu replied to a question, “If I were invited to have a chat with the prime minister of India, I would tell him to concentrate more on women instead of cows.”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X