ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ಕ್ರಮ

|
Google Oneindia Kannada News

ವಿಮಾನದಲ್ಲಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದು ಮತ್ತು ಪ್ರಯಾಣಿಕರಲ್ಲಿ ಜಗಳ ಮತ್ತು ಅನುಚಿತ ವರ್ತನೆಯ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ. ಸೋಮವಾರ ಸ್ಪೈಸ್‌ಜೆಟ್ ವಿಮಾನದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ನಂತರ ವಿಮಾನದ ಸಿಬ್ಬಂದಿಗಳು ಇಬ್ಬರೂ ಪ್ರಯಾಣಿಕರನ್ನು ಡಿಬೋರ್ಡ್ ಮಾಡಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ.

ಘಟನೆಯ ಬಗ್ಗೆ ಸ್ಪೈಸ್ ಜೆಟ್ ಸ್ವತಃ ಮಾಹಿತಿ ನೀಡಿದೆ. ಈ ಸಂಪೂರ್ಣ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ಘಟನೆಯ ಬಗ್ಗೆ ವಿವರಗಳನ್ನು ನೀಡಿದ ಸ್ಪೈಸ್‌ಜೆಟ್, ಎಸ್‌ಜಿ -8133 ದೆಹಲಿ-ಹೈದರಾಬಾದ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ದೆಹಲಿಯಲ್ಲಿ ಬೋರ್ಡಿಂಗ್ ಸಮಯದಲ್ಲಿ ಪ್ರಯಾಣಿಕರೊಬ್ಬರು ಅಶಿಸ್ತಿನ ಮತ್ತು ಅನುಚಿತ ರೀತಿಯಲ್ಲಿ ವರ್ತಿಸಿದರು.

ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ

ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ

ಪ್ರಯಾಣಿಕರು ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದರು. ಹೀಗಾಗಿ ಘಟನೆಯ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಪಿಐಸಿ ಮತ್ತು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಜಗಳವಾಡಿದ ಪ್ರಯಾಣಿಕ ಮತ್ತು ಆತನ ಸಹ-ಪ್ರಯಾಣಿಕನನ್ನು ಕೆಳಗಿಳಿಸಿ ಭದ್ರತಾ ತಂಡಕ್ಕೆ ಹಸ್ತಾಂತರಿಸಿದೆ ಎಂದು ಹೇಳಿದೆ. ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿ ಅಥವಾ ಸಹ-ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುವ ಪ್ರಕರಣ ಇದು ಮೊದಲಲ್ಲ.

ಈ ಹಿಂದೆ ಶಂಕರ್ ಮಿಶ್ರಾ ಎಂಬಾತ 34 ವರ್ಷದ ಯುವಕ ಸಹ ಪ್ರಯಾಣಿಕ ಮಹಿಳಾ ಜೊತೆ ಅನುಚಿತವಾಗಿ ವರ್ತಿಸಿದ್ದ. ಬಳಿಕ ಮಹಿಳೆಯ ದೂರಿನ ಮೇರೆಗೆ ದೆಹಲಿ ಪೊಲೀಸರು ಯುವಕನನ್ನು ಬಂಧಿಸಿದ್ದರು. ವೆಲ್ಸ್ ಫಾರ್ಗೋ ಎಂಬ ಕಂಪನಿಯು ತನ್ನ ಉದ್ಯೋಗಿಯಿಂದ ಇಂತಹ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಯುವಕನನ್ನು ಕೆಲಸದಿಂದ ವಜಾಗೊಳಿಸಿತ್ತು. ಅನೇಕ ಪ್ರಕ್ರಿಯೆಗಳ ನಂತರ ಕಂಪನಿ ಉದ್ಯೋಗಿಯ ಮರು ನೇಮಕ ಮಾಡಿಕೊಂಡಿದೆ.

ಮದ್ಯ ಸೇವಿಸಿ ಪ್ರಯಾಣ

ಮದ್ಯ ಸೇವಿಸಿ ಪ್ರಯಾಣ

ತಿಂಗಳ ಆರಂಭದಲ್ಲಿ ವಿಮಾನದಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ದೆಹಲಿ- ಪಾಟ್ನಾ ಇಂಡಿಗೋ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣ ಪೊಲೀಸರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಹಾಯದಿಂದ ಬಂಧಿಸಿದ್ದರು. ದಿಲ್ಲಿಯಿಂದ ಪಾಟ್ನಾಗೆ 6ಇ 6383 ವಿಮಾನದಲ್ಲಿ ನಡೆದ ಘಟನೆ ಇದಾಗಿದೆ. ಸಿಐಎಸ್‌ಎಫ್ ತಂಡ ಅವರನ್ನು ಕಸ್ಟಡಿಗೆ ತೆಗೆದುಕೊಂಡಿತು. ನಂತರ ಅವರನ್ನು ವಿಮಾನ ನಿಲ್ದಾಣದ ಪೊಲೀಸರಿಗೆ ಹಸ್ತಾಂತರಿಸಲಾಯಿತು. ನಂತರ ಉಸಿರಾಟ ವಿಶ್ಲೇಷಣೆ ಪರೀಕ್ಷೆಯ ನಂತರ ಇಬ್ಬರೂ ಪ್ರಯಾಣಿಕರು ಕುಡಿದಿರುವುದು ದೃಢಪಟ್ಟಿದೆ ಎಂದು ಬಿಹಾರ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗಂಗ್ವಾರ್ ಹೇಳಿದರು.

ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ

ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ

ಈ ಹಿಂದೆ ಏರ್ ಇಂಡಿಯಾ ವಿಮಾನದಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನು. ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಯುವಕನೊಬ್ಬ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನು. ಈ ಘಟನೆಯ ನಂತರ ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷರಿಗೆ ಪತ್ರ ಬರೆದು ದೂರು ನೀಡಿದ್ದರು. ಘಟನೆಯ ನಂತರ, ಸಿಬ್ಬಂದಿಗಳು ಸರಿಯಾದ ಕ್ರಮ ಕೈಗೊಂಡಿಲ್ಲ ಮತ್ತು ವಿಮಾನ ಲ್ಯಾಂಡ್ ಆದ ನಂತರ ಮತ್ತು ವ್ಯಕ್ತಿಯನ್ನು ಹೋಗಲು ಅನುಮತಿಸಿದ್ದಾರೆ ಎಂದು ದೂರಲಾಗಿತ್ತು.

ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ

ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ

ಡಿಸೆಂಬರ್ 6 ರಂದು ಪ್ಯಾರಿಸ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎನ್ನಲಾಗಿದೆ. ಬಳಿಕ ಪುರುಷ ಪ್ರಯಾಣಿಕ ಲಿಖಿತವಾಗಿ ಕ್ಷಮೆಯಾಚಿಸಿದ ಕಾರಣ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಆದರೂ ಪುರುಷ ಪ್ರಯಾಣಿಕನನ್ನು ಬಂಧಿಸಲಾಗಿದೆ. ವಿಮಾನವು ಡಿಸೆಂಬರ್ 6 ರಂದು ಬೆಳಿಗ್ಗೆ 9:40 ರ ಸುಮಾರಿಗೆ ದೆಹಲಿಯಲ್ಲಿ ಇಳಿಯಿತು. ಪುರುಷ ಪ್ರಯಾಣಿಕರು "ಕುಡಿತದ ಅಮಲಿನಲ್ಲಿದ್ದರು ಮತ್ತು ಅವರು ಕ್ಯಾಬಿನ್ ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸುತ್ತಿರಲಿಲ್ಲ. ನಂತರ ಪ್ರಯಾಣಿಕ ಮಹಿಳೆ ಹೊದಿಕೆಯ ಮೇಲೆ ಮೂತ್ರ ವಿಸರ್ಜಿಸಿದರು" ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

English summary
Action taken against passenger who misbehaved with cabin crew of SpiceJet flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X