ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತ ಬಾಲಕಿ ಮೇಲೆ ಸ್ನೇಹಿತ ಸೇರಿ 9 ಮಂದಿಯಿಂದ ಅತ್ಯಾಚಾರ

|
Google Oneindia Kannada News

ಡುಮ್ಕಾ, ಮಾರ್ಚ್ 27: ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸ್ನೇಹಿತ ಸೇರಿ 9 ಮಂದಿ ಅತ್ಯಾಚಾರ ನಡೆಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಆಕೆಯ ಸ್ನೇಹಿತ ಆಕೆಯ ಬಳಿ ಬಂದು ಮನೆಗೆ ತೆರಳಲು ಶಾರ್ಟ್‌ಕಟ್ ದಾರಿಯನ್ನು ತೋರಿಸುತ್ತೇನೆ ಎಂದು ಕಾಡಿಗೆ ಕರೆದೊಯ್ದು 9 ಮಂದಿ ಸೇರಿ ಅತ್ಯಾಚಾರ ನಡೆಸಿದ್ದಾರೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವೈಎಸ್ ರಮೇಶ್ ತಿಳಿಸಿದ್ದಾರೆ.

9 People Gangraped Teenager In Jharkhand

ಆ ಒಂಬತ್ತು ಜನರಲ್ಲಿ ಇಬ್ಬರು ಬೈಕಿನಲ್ಲಿ ಬಂದಿದ್ದರು. ನನ್ನನ್ನು ರಕ್ಷಿಸಿ ಮನೆಗೆ ಕರೆದುಕೊಂಡು ಹೋಗಿ ಎಂದು ಆಕೆ ಬೇಡಿಕೊಂಡರೇ ಅವರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಕಾಡಿನಲ್ಲಿ ಮೊದಲೇ 7 ಮಂದಿ ಇದ್ದರು. ಎಲ್ಲರೂ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಗೆ ಪ್ರಜ್ಞೆ ತಪ್ಪಿದೆ. ಮರುದಿನ ಬೆಳಗ್ಗೆ ಪ್ರಜ್ಞೆ ಬಂದಿದೆ. ಆದರೆ ಅತ್ಯಾಚಾರವೆಸಗಿರುವವರ ವಯಸ್ಸು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

English summary
A 16-year-old girl has alleged that nine people raped her in Jharkhand's Dumka district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X