• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳನ್ನು ಬೈಕ್ ಹಿಂಬದಿ ಕೂರಿಸಿಕೊಂಡು ಹೋಗಲು ಕೇಂದ್ರದಿಂದ ಹೊಸ ನಿಯಮ

|
Google Oneindia Kannada News

ನವದೆಹಲಿ, ಅಕ್ಟೋಬರ್ 27: ಮಕ್ಕಳನ್ನು ಬೈಕಿನ ಹಿಂಬದಿ ಕೂರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್‌ಟಿಎಚ್), ಸಣ್ಣ ಮಕ್ಕಳನ್ನು ದ್ವಿಚಕ್ರ ವಾಹನದ​ ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರಯಾಣಿಸುವವರಿಗೆ ಹೊಸ ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ಸಚಿವಾಲಯ ಹೊರಡಿಸಿದ ಕರಡು ಅಧಿಸೂಚನೆಯ ಪ್ರಕಾರ, 4 ವರ್ಷದೊಳಗಿನ ಮಗುವನ್ನು ಮೋಟಾರ್‌ ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗುವಾಗ ವೇಗವು 40 ಕಿ.ಮೀಗಿಂತ ಹೆಚ್ಚಿರಬಾರದು.

ಮೋಟಾರ್ ಸೈಕಲ್‌ ಹಿಂಬದಿಯಲ್ಲಿ ಕುಳಿತ ಮಗುವನ್ನು ಸವಾರನೊಂದಿಗೆ ಕೂಡಿಸುವಂತಹ ಸುರಕ್ಷತಾ ಪಟ್ಟಿಯನ್ನು ಒದಗಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಟ್ವೀಟ್​ ಮಾಡಿದ್ದಾರೆ.

ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಮತ್ತು ಸಲಹೆ ಇದ್ದಲ್ಲಿ, ಅದನ್ನು ನೀಡುವಂತೆ ಎಂಒಆರ್‌ಟಿಎಚ್ ಕೇಳಿದೆ.

ಪ್ರಸ್ತಾವಿತ ನಿಯಮಗಳ ಪ್ರಕಾರ, 4 ವರ್ಷದೊಳಗಿನ ಮಕ್ಕಳನ್ನು ಮೋಟಾರ್​ ಸೈಕಲ್​​ನ ಹಿಂಬದಿಯಲ್ಲಿ ಕೂರಿಸಿಕೊಂಡು ಹೋಗುವಾಗ ವೇಗವು ಗಂಟೆಗೆ 40 ಕಿ.ಮೀಗಿಂತ ಹೆಚ್ಚಿರಬಾರದು. ಅಲ್ಲದೇ 9 ತಿಂಗಳಿಂದ 4 ವರ್ಷದೊಳಗಿನ ಮಕ್ಕಳನ್ನು ಕೂರಿಸಿಕೊಂಡು ಹೋಗುವುದಾದರೆ ಕ್ರ್ಯಾಶ್ ಹೆಲ್ಮೆಟ್ ಧರಿಸಬೇಕು ಎಂದಿದೆ.

ರಕ್ಷಣೆಗಾಗಿ, ಚಾಲಕನ ಸೊಂಟದ ಬೆಲ್ಟ್ ಸುತ್ತಲೂ ಪಟ್ಟಿಗಳನ್ನು ಹೊಂದಿರುವ ಲೈಫ್ ಜಾಕೆಟ್ ತರಹದ ಜಾಕೆಟ್ ಅನ್ನು ಧರಿಸಲು ಮಕ್ಕಳಿಗೆ ಸಲಹೆ ನೀಡಲಾಗುತ್ತದೆ. ಈ ಪ್ರಸ್ತಾಪಗಳ ಕುರಿತು ಸಲಹೆಗಳನ್ನು ಆಹ್ವಾನಿಸಲಾಗುತ್ತಿದೆ. ಷರತ್ತುಗಳನ್ನು ಅಂತಿಮಗೊಳಿಸಿದ ನಂತರ ಈ ನಿಯಮಗಳು ಜಾರಿಗೆ ಬರುತ್ತವೆ.

4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್ ಅಥವಾ ಸ್ಕೂಟರ್‌ ರೈಡ್ ಹೋಗುವಾಗ ಮಕ್ಕಳು ಹೆಲ್ಮೆಟ್ ಖಡ್ಡಾಯವಾಗಿ ಧರಿಸಬೇಕು. ಈ ಹೆಲ್ಮೆಟ್ ASTM 1447 ಅಥವಾ ಯುರೋಪಿಯನ್ (CEN) BS EN 1080/BS EN 1078 ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು. 9 ರಿಂದ 4 ವರ್ಷದೊಳಗಿನ ಮಕ್ಕಳ ಸೈಕಲ್ ಹೆಲ್ಮೆಟ್ ರೀತಿಯ ಸ್ಟಾಂಡರ್ಡ್ ಹೆಲ್ಮೆಟನ್ನು ಮಕ್ಕಳಿಗೂ ಹಾಕಬೇಕು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2019ರಲ್ಲಿ 11,168 ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸರಾಸರಿ ನೋಡಿದರೆ 31 ಮಕ್ಕಳು ಪ್ರತಿ ದಿನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ ಅನ್ನೋ ಕೂಗು ಹಿಂದಿನಿಂದಲೂ ಇದೆ. ಇದೀಗ ಕೇಂದ್ರ ದಿಟ್ಟ ನಿರ್ಧಾರ ಕೈಗೊಂಡಿದೆ.

ಜೊತೆಗೆ ರೈಡಿಂಗ್ ಗೇರ್ ಅಂದರೆ ವಯಸ್ಕರು ಹಾಕಿಕೊಳ್ಳುವ ನೀ ಪ್ಯಾಡ್ ಸೇರಿದಂತೆ ಮಕ್ಕಳ ಸುರಕ್ಷತಾ ಸಾಧನಗಳು ಇರಬೇಕು. ದ್ವಿಚಕ್ರ ವಾಹನ ರೈಡ್ ವೇಳೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ರೀತಿ ಪ್ರಕರಣಗಳಲ್ಲಿ ಮಕ್ಕಳು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ.

ಇಷ್ಟೇ ಅಲ್ಲ ಹಲವು ಪ್ರಕರಣಗಳು ಸಾವಿನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ವಯಸ್ಕರ ಪ್ರಯಾಣ ಸುರಕ್ಷತೆ ಜೊತೆಗೆ ಮಕ್ಕಳ ಪ್ರಯಾಣದ ಸುರಕ್ಷತೆ ಹೆಚ್ಚಿಸಲು ಕೇಂದ್ರ ಮೋಟಾರು ವಾಹನ ಕಾಯ್ದಿ ತಿದ್ದುಪಡಿ ಮಾಡಿದೆ.

ತಿದ್ದುಪಡಿಯಲ್ಲಿ ಮತ್ತೊಂದು ಕಠಿಣ ನಿಯಮವನ್ನು ಜಾರಿ ಮಾಡಲಾಗಿದೆ. ನೂತನ ನಿಯಮ ಪ್ರಕಾರ ಬೈಕ್ ಸವಾರ ಹಾಗೂ ಹಿಂಬದಿಯ ಮಗುವಿಗೆ ಸುರಕ್ಷತಾ ಸಾಧನವೊಂದು ಇರಬೇಕು. ಮಗುವನ್ನು ಬೈಕ್ ಸವಾರನ ಜೊತೆ ಕಟ್ಟುವ ಬೆಲ್ಟ್ ರೀತಿಯ ಸುರಕ್ಷತಾ ಸಾಧನ ಇರಬೇಕು.

ಈ ಸುರಕ್ಷ ಸಾಧನದಿಂದ ಮಗುವಿ ಬೆಲ್ಟ್ ರೀತಿಯಲ್ಲಿ ಹಾಕಿ ಈ ಬೆಲ್ಟನ್ನು ಬೈಕ್ ಸವಾರನ ಶೋಲ್ಡರ್ ಲೂಪ್‌ಗೆ ಜೋಡಿಸುವಂತಿರಬೇಕು. ಇದು ಹೊಂದಾಣಿಕೆ ಮಾಡುವಂತಿರಬೇಕು, ಸೊಂಟಪಟ್ಟಿ ಹಾಗೂ ಭುಜಕ್ಕೆ ಜೋಡಿಸುವ ಎರಡು ಪಟ್ಟಿಗಳನ್ನು ಹೊಂದಿರಬೇಕು.

ಈ ಸುರಕ್ಷತಾ ಸಾಧನದಿಂದ ಮಗುವಿನ ದೇಹ ಬೈಕ್ ಸವಾರನ ಜೊತೆ ಭದ್ರವಾಗಿ ಅಂಟಿಕೊಳ್ಳಬೇಕು. ಮಗು ಕೈಬಿಟ್ಟರು, ನಿದ್ರಿಸಿದರು ಬೈಕ್ ಸವಾರನ ಬೆನ್ನಿಗೆ ಹೊಂದಿಕೊಂಡು ಭದ್ರವಾಗಿರಬೇಕು.

   ಚೆನ್ನಾಗಾಡ್ತಿಲ್ಲ,ಫಿಟ್ನೆಸ್ ಸಮಸ್ಯೆ,ಇಷ್ಟಾದ್ರೂ ಯಾಕ್ ಗುರೂ ಇವ್ನುನ್ ಬಿಡ್ತಾಯಿಲ್ಲ | Oneindia
   English summary
   Those riding motorcycles with children aged up to four years on pillion will have to ensure that they are wearing a crash helmet or bicycle helmet complying with relevant safety standards, according to a draft notification proposal. Also, the motorcycle speed cannot exceed 40 kmph.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X