ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಚಿಕೆಯಾಗದ ವಿದ್ಯುತ್ ಬಳಸಿ, ಗ್ರಾಹಕರ ಹೊರೆ ತಗ್ಗಿಸಿ: ರಾಜ್ಯಗಳಿಗೆ ಸೂಚನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ತಮ್ಮ ಗ್ರಾಹಕರ ವಿದ್ಯುತ್ ಬೇಡಿಕೆ ಈಡೇರಿಸಲು ಮಾತ್ರ ವಿದ್ಯುತ್ ಉತ್ಪಾದನಾ ಕೇಂದ್ರ(ಸಿಜಿಎಸ್)ಗಳಲ್ಲಿನ ಹಂಚಿಕೆಯಾಗದ ವಿದ್ಯುತ್ ಬಳಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.

ಕೆಲವು ರಾಜ್ಯಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಮತ್ತು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ ಎಂಬುದು ಕೇಂದ್ರ ಇಂಧನ ಸಚಿವಾಲಯದ ಗಮನಕ್ಕೆ ಬಂದಿದೆ. ಅಲ್ಲದೆ, ಇದೇ ವೇಳೆ, ಅಧಿಕ ಬೆಲೆಗೆ ವಿದ್ಯುತ್ ವಿನಿಮಯ ಮಾಡಿಕೊಂಡು ವಿದ್ಯುತ್ ಮಾರಾಟ ಮಾಡುತ್ತಿರುವುದೂ ಸಹ ಕಂಡು ಬಂದಿದೆ.

ವಿದ್ಯುತ್ ಹಂಚಿಕೆಯ ಮಾರ್ಗಸೂಚಿಯ ಪ್ರಕಾರ, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳು (ಸಿಜಿಎಸ್)ಗಳ ಶೇ.15ರಷ್ಟು ವಿದ್ಯುತ್ ಅನ್ನು 'ಹಂಚಿಕೆ ಮಾಡಲಾಗದ ವಿದ್ಯುತ್' ಕೋಟಾದಡಿ ತೆಗೆದಿರಿಸಲಾಗುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಅವುಗಳ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ಹಂಚಿಕೆ ಮಾಡಲಿದೆ.

Ministry of Power asks states to utilise unallocated power of the CGS,

ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಜವಾಬ್ದಾರಿ ವಿದ್ಯುತ್ ವಿತರಣಾ ಕಂಪನಿಗಳದ್ದು ಮತ್ತು ಅವು ಯಾವ ಗ್ರಾಹಕರು ದಿನದ 24 ಗಂಟೆ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೊ ಅವರೆಲ್ಲರಿಗೂ ವಿದ್ಯುತ್ ಪೊರೈಸುವುದು ಅವರ ಮೊದಲ ಆದ್ಯ ಕರ್ತವ್ಯ. ಆದ್ದರಿಂದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ವಿನಿಮಯಕ್ಕಾಗಿ ತಮ್ಮ ವಿದ್ಯುತ್ ಅನ್ನು ಮಾರಾಟ ಮಾಡಬಾರದು ಮತ್ತು ತಮ್ಮ ಗ್ರಾಹಕರಿಗೆ ಕೊರತೆಯಾಗುವಂತೆ ಮಾಡಬಾರದು.

ಆದ್ದರಿಂದ ರಾಜ್ಯಗಳು ತಮ್ಮ ರಾಜ್ಯದ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡಲು ಆ ಹಂಚಿಕೆಯಾಗದ ವಿದ್ಯುತ್ ಅನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಹೆಚ್ಚುವರಿ ವಿದ್ಯುತ್ ಲಭ್ಯವಿದ್ದರೆ, ಆ ಬಗ್ಗೆ ಭಾರತ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ, ಆ ವಿದ್ಯುತ್ ಅನ್ನು ಅಗತ್ಯವಿರುವ ರಾಜ್ಯಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ.

ಒಂದು ವೇಳೆ ರಾಜ್ಯಗಳು ತಮ್ಮ ಗ್ರಾಹಕರಿಗೆ ವಿದ್ಯುತ್ ಪೊರೈಕೆ ಮಾಡುತ್ತಿಲ್ಲ ಮತ್ತು ಅಧಿಕ ದರಕ್ಕೆ ವಿದ್ಯುತ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ, ಅಂತಹ ರಾಜ್ಯಗಳಿಗೆ ಹಂಚಿಕೆ ಮಾಡಲಾಗದ ವಿದ್ಯುತ್ ಅನ್ನು ವಾಪಸ್ ಪಡೆದು ಅದನ್ನು ಅಗತ್ಯವಿರುವ ಇತರೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು.

Ministry of Power asks states to utilise unallocated power of the CGS,

ವಿದ್ಯುತ್ ನಷ್ಟ ತಗ್ಗಿಸುವ ನಿಟ್ಟಿನಲ್ಲಿ ಡಿಸ್ಕಾಂಗಳ ಇಂಧನ ಲೆಕ್ಕಾಚಾರ ಕಡ್ಡಾಯ:

ವಿದ್ಯುತ್ ವಲಯದಲ್ಲಿ ನಡೆಯುತ್ತಿರುವ ಸುಧಾರಣೆಗಳ ಅಡಿಯಲ್ಲಿ ಒಂದು ಪ್ರಮುಖ ಕ್ರಮವಾಗಿ, ನಿಯಮಿತವಾಗಿ ಇಂಧನ ಲೆಕ್ಕಾಚಾರ ಕೈಗೊಳ್ಳುವಂತೆ ವಿದ್ಯುತ್ ವಿತರಣಾ ಕಂಪನಿಗಳಿಗೆ ವಿದ್ಯುತ್ ಸಚಿವಾಲಯವು ಇಂದು ಆದೇಶಿಸಿದೆ. ಈ ಸಂಬಂಧ ಇಂಧನ ಸಂರಕ್ಷಣೆ (ಇಸಿ) ಕಾಯಿದೆ, 2001 ರ ಅಡಿಯಲ್ಲಿ, ವಿದ್ಯುತ್ ಸಚಿವಾಲಯದ ಅನುಮೋದನೆಯೊಂದಿಗೆ, ಇಂಧನ ದಕ್ಷತೆ ಸಂಸ್ಥೆ -ಬ್ಯೂರೋ ಆಫ್ ಎನರ್ಜಿ ಎಫೀಶಿಯೆನ್ಸಿ (ಬಿಇಇ) ಯಿಂದ ಆದೇಶ ನೀಡಲಾಗಿದೆ. ಈ ಅಧಿಸೂಚನೆ ತ್ರೈಮಾಸಿಕಕ್ಕೆ ಒಮ್ಮೆ ಡಿಸ್ಕಾಂಗಳು ಪ್ರಮಾಣೀಕೃತ ಇಂಧನ ವ್ಯವಸ್ಥಾಪಕರ ಮೂಲಕ 60 ದಿನಗಳ ಒಳಗಾಗಿ ಇಂಧನ ಲೆಕ್ಕಾಚಾರ ಮಾಡುವುದನ್ನು ಕಡ್ಡಾಯ ಮಾಡುತ್ತದೆ.

ಸ್ವತಂತ್ರ ಮಾನ್ಯತೆ ಪಡೆದ ಇಂಧನ ಲೆಕ್ಕ ಪರಿಶೋಧಕರಿಂದ ವಾರ್ಷಿಕ ಇಂಧನ ಲೆಕ್ಕಪರಿಶೋಧನೆಯೂ ನಡೆಯುತ್ತದೆ. ಈ ಎರಡೂ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ಇಂಧನ ಲೆಕ್ಕಚಾರ ವರದಿಗಳು ವಿವಿಧ ವರ್ಗದ ಗ್ರಾಹಕರಿಂದ ವಿದ್ಯುತ್ ಬಳಕೆ ಮತ್ತು ವಿವಿಧ ಪ್ರದೇಶಗಳಲ್ಲಿ ಪ್ರಸರಣ ಮತ್ತು ವಿತರಣೆಯ ನಷ್ಟದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಇದು ಹೆಚ್ಚಿನ ನಷ್ಟಗಳು ಮತ್ತು ಕಳ್ಳತನದ ಪ್ರದೇಶಗಳನ್ನು ಗುರುತಿಸುತ್ತದೆ ಮತ್ತು ಸರಿಪಡಿಸುವ ಕ್ರಮಗಳನ್ನೂ ಸಕ್ರಿಯಗೊಳಿಸುತ್ತದೆ. ಈ ಕ್ರಮಗಳಿಂದ ನಷ್ಟ ಮತ್ತು ಕಳ್ಳತನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಹ ಸಾಧ್ಯವಾಗುತ್ತದೆ.

ಈ ದತ್ತಾಂಶದಿಂದಾಗಿ ಡಿಸ್ಕಾಂಗಳು ತಮ್ಮ ವಿದ್ಯುತ್ ನಷ್ಟವನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಸುತ್ತದೆ. ಡಿಸ್ಕಾಂಗಳು ಸೂಕ್ತ ಮೂಲಸೌಕರ್ಯ ಉನ್ನತೀಕರಣದ ಜೊತೆಗೆ ಬೇಡಿಕೆಯ ಕಡೆಯ ನಿರ್ವಹಣೆ (ಡಿಎಸ್.ಎಂ.) ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ಸಾಧ್ಯವಾಗುತ್ತದೆ. ಈ ಉಪಕ್ರಮವು ನಮ್ಮ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸುವಲ್ಲಿ ಭಾರತದ ಹವಾಮಾನ ಕ್ರಮಗಳಿಗೆ ಮತ್ತಷ್ಟು ಕೊಡುಗೆ ನೀಡುತ್ತದೆ.

Ministry of Power asks states to utilise unallocated power of the CGS,

ಈ ನಿಬಂಧನೆಗಳನ್ನು ಇಂಧನ ಸಂರಕ್ಷಣಾ ಕಾಯ್ದೆ, 2001ರ ಅಡಿಯಲ್ಲಿ ಹೊರಡಿಸಲಾಗಿದೆ, ವಿತರಣಾ ವಲಯವನ್ನು ದಕ್ಷಗೊಳಿಸಿ ನಷ್ಟಗಳನ್ನು ಕಡಿಮೆ ಮಾಡುವ ಒಟ್ಟಾರೆ ಉದ್ದೇಶದೊಂದಿಗೆ ಡಿಸ್ಕಾಂಗಳ ಆರ್ಥಿಕ ಕಾರ್ಯಸಾಧ್ಯತೆಯತ್ತ ಸಾಗುವವಂತೆ ಮಾಡುತ್ತದೆ.

ಇಂಧನ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ರಾಷ್ಟ್ರೀಯ ಮಾನ್ಯತೆ ಪಡೆದ ಇಂಧನ ಲೆಕ್ಕಪರಿಶೋಧಕರು ಮತ್ತು ಇಂಧನ ವ್ಯವಸ್ಥಾಪಕರ ಸಂಗ್ರಹವನ್ನು ಬಿಇಇ ಪ್ರಮಾಣೀಕರಿಸುತ್ತದೆ, ನಷ್ಟ ಕಡಿತ ಮತ್ತು ಇತರ ತಾಂತ್ರಿಕ ಕ್ರಮಗಳಿಗೆ ಶಿಫಾರಸುಗಳನ್ನು ಸರಿಯಾಗಿ ಒದಗಿಸುತ್ತದೆ.

ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪಡೆಯಲು ಏಪ್ರಿಲ್ 2021ರಲ್ಲಿ ಮೇಲೆ ಹೇಳಿದ ನಿಬಂಧನೆಗಳನ್ನು ಮೊದಲೇ ಪ್ರಕಟಿಸಲಾಗಿದೆ ಮತ್ತು ನಂತರ ವಿದ್ಯುತ್ ಸಚಿವಾಲಯವು ಅಂತಿಮವಾಗಿ ಈ ನಿಬಂಧನೆಗಳನ್ನು ಹೊರಡಿಸುವ ಮೊದಲು ವಿವಿಧ ಬಾಧ್ಯಸ್ಥರೊಂದಿಗೆ ವಿವರವಾದ ಚರ್ಚೆಗಳನ್ನೂ ನಡೆಸಿದೆ.

ಸೆಪ್ಟೆಂಬರ್ 2020ರಲ್ಲಿ, ಪ್ರತ್ಯೇಕ ಅಧಿಸೂಚನೆಯ ಮೂಲಕ, ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಇಸಿ ಕಾಯ್ದೆಯಡಿ ನಿಯೋಜಿತ ಗ್ರಾಹಕರು (ಡಿಸಿಗಳು) ಎಂದು ಅಧಿಸೂಚಿಸಲಾಯಿತು. ಇಡೀ ವಿತರಣಾ ವ್ಯವಸ್ಥೆ ಮತ್ತು ಚಿಲ್ಲರೆ ಪೂರೈಕೆ ವ್ಯವಹಾರದ ಮೇಲೆ ಇಂಧನ ಲೆಕ್ಕಪರಿಶೋಧನೆಯ ಸಂಭಾವ್ಯ ಪ್ರಯೋಜನಗಳಿಂದಾಗಿ, ಭಾರತದಾದ್ಯಂತ ಎಲ್ಲಾ ವಿತರಣಾ ಉಪಯುಕ್ತತೆಗಳಿಗೆ ಬದ್ಧರಾಗಿರಲು ಮತ್ತು ಕ್ರಮಗಳನ್ನು ರೂಪಿಸಲು ಸಮಗ್ರ ಮಾರ್ಗಸೂಚಿಗಳು ಮತ್ತು ಚೌಕಟ್ಟಿನ ಗುಂಪನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿತ್ತು.

ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಮುಕ್ತ ಪ್ರವೇಶ ಗ್ರಾಹಕರು, ಮತ್ತು ಅಂತಿಮ ಗ್ರಾಹಕರಿಂದ ಇಂಧನ ಬಳಕೆ ಸೇರಿದಂತೆ ಜಾಲದ ವಿತರಣಾ ಪರಿಧಿಯಲ್ಲಿ ವಿವಿಧ ವೋಲ್ಟೇಜ್ ಹಂತಗಳಲ್ಲಿ ಎಲ್ಲಾ ಇಂಧನ ಒಳಹರಿವಿನ ಲೆಕ್ಕವನ್ನು ಇಂಧನ ಲೆಕ್ಕಾಚಾರ ಸೂಚಿಸುತ್ತದೆ. ನಿಯಮಿತವಾಗಿ ಇಂಧನ ಲೆಕ್ಕಾಚಾರ ಮತ್ತು ನಂತರದ ವಾರ್ಷಿಕ ಇಂಧನ ಲೆಕ್ಕಪರಿಶೋಧನೆ, ಹೆಚ್ಚಿನ ನಷ್ಟ ಮತ್ತು ಕಳ್ಳತನದ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳತ್ತ ಕೇಂದ್ರೀಕರಿಸುತ್ತದೆ. ಇಂದು ಹೊರಡಿಸಲಾದ ನಿಬಂಧನೆಗಳು ವಿದ್ಯುತ್ ವಿತರಣಾ ಕಂಪನಿಗಳಿಗೆ ವಾರ್ಷಿಕ ಇಂಧನ ಲೆಕ್ಕಪರಿಶೋಧನೆ ಮತ್ತು ತ್ರೈಮಾಸಿಕ ನಿಯಮಿತ ಇಂಧನ ಲೆಕ್ಕಾಚಾರಕ್ಕೆ ಅಗತ್ಯವಾದ ಪೂರ್ವ ಅಗತ್ಯ ಮತ್ತು ವರದಿ ಮಾಡುವ ಅವಶ್ಯಕತೆಗಳೊಂದಿಗೆ ಪೂರೈಸಲು ಬಹುನಿರೀಕ್ಷಿತ ವಿಶಾಲ ಚೌಕಟ್ಟನ್ನು ಒದಗಿಸುತ್ತದೆ.

English summary
Ministry of Power has asked States to utilise unallocated power of the CGS only to meet the power requirement of their own Consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X