• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಮಾನಯಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಬಳಕೆ ನಿಷೇಧ!

By Mahesh
|

ನವದೆಹಲಿ, ಸೆ.09: ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಇರುವವರು ಆರಾಮವಾಗಿ ವಿಮಾನಯಾನ ಮಾಡುವಂತಿಲ್ಲ. ವಿಮಾನಯಾನದ ವೇಳೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಬಳಕೆ ನಿಷೇಧಿಸಿ ವಿಮಾನಯಾನ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ವಿಮಾನಯಾನದ ವೇಳೆ ಮೊಬೈಲ್ ಬಳಕೆ, ಇಂಟರ್ನೆಟ್, ಚಾರ್ಜಿಂಗ್ ಯಾವುದಕ್ಕೂ ಆಸ್ಪದ ಇರುವುದಿಲ್ಲ. ವಿಶ್ವದ ಹಲವೆಡೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಚಾರ್ಜಿಂಗ್ ವೇಳೆಗೆ ಬೆಂಕಿ ತಗುಲಿದ ಪ್ರಕರಣಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಾದ ಬಳಿಕ ಎಲ್ಲೆಡೆಯಿಂದ ಮೂಬೈಲ್ ಹಿಂದಕ್ಕೆ ಪಡೆಯಲು ಸಂಸ್ಥೆ ಕೂಡಾ ಮುಂದಾಗಿತ್ತು. [ವಿಮಾನಯಾನಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ]

ಸ್ಯಾಮ್ ಸಂಗ್ ನೋಟ್ 7 ಬ್ಯಾಟರಿಯಲ್ಲಿ ದೋಷ ಇರುವುದು ಕಂಡ ಬಂದ ಹಿನ್ನಲೆಯಲ್ಲಿ ಮಾರಾಟ ಕೂದಾ ನಿಷೇಧಿಸಲಾಗಿದೆ. ಹಲವಾರು ಕಡೆ ನೋಟ್ 7 ಬದಲಿಗೆ ಬೇರೆ ಮೊಬೈಲ್ ಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನೋಟ್ 7 ಬಳಕೆಗೆ ನಿಷೇಧ ಹೇರಲಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ವುಳ್ಳ ಪ್ರಯಾಣಿಕರು ಬ್ಯಾಗೇಜ್ ವೇಳೆ ಕೂಡಾ ಮೊಬೈಲ್ ಇರುವುದನ್ನು ತೋರಿಸದಿದ್ದರೆ ಒಳ್ಳೆಯದು ಎಂಬ ಕಿವಿಮಾತು ಕೂಡಾ ಸಚಿವಾಲಯದಿಂದ ಬಂದಿದೆ.

English summary
The Ministry of Civil Aviation has issued a public notice prohibiting the use of Samsung’s Galaxy Note 7 smartphone on board an aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X