ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಷ್ಠ ವೇತನ, ಕೆಲಸದ ವೇಳೆ ಬಗ್ಗೆ ಶೀಘ್ರದಲ್ಲೇ ಕಾನೂನು ಜಾರಿ, ತಪ್ಪಿದರೆ 10 ಲಕ್ಷ ತನಕ ದಂಡ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಎಲ್ಲ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕಡ್ಡಾಯಗೊಳಿಸಿ ‌ಸಂಸದೀಯ ಕಾರ್ಮಿಕ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ. ಆ ವಲಯ ಸರಕಾರದಿಂದ ಮಾನ್ಯತೆ ಪಡೆದಿದೆಯೋ ಅಥವಾ ಇಲ್ಲವೋ, ಅದು ಸಂಘಟಿತವೋ ಅಸಂಘಟಿತವೋ ಕನಿಷ್ಠ ವೇತನವನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ವರದಿ ಹೇಳಿದೆ.

ಯಾರು ಈ ನಿಯಮವನ್ನು ಅನುಸರಿಸುವುದಿಲ್ಲವೋ ಅಂಥವರಿಗೆ ಹತ್ತು ಲಕ್ಷ ರುಪಾಯಿ ತನಕ ಜುಲ್ಮಾನೆ ವಿಧಿಸಬಹುದು. ಇನ್ನು ಎಂಥ ತುರ್ತು ಕೆಲಸವಾದರೂ ಸರಿ ಎಂಟು ಗಂಟೆಗೂ ಹೆಚ್ಚು ಕೆಲಸ ಮಾಡುವಂತೆ ಬಲವಂತ ಪಡಿಸುವಂತಿಲ್ಲ. ಅನುಭವಿಗಳು ಹಾಗೂ ಹೊಸಬರಿಗೆ ಒಂದು ರೀತಿಯ ವೇತನ ನೀಡುವಂತಿಲ್ಲ.

ಅನುಭವವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇನ್ನು ಶಿಫಾರಸು ಮಾಡಿರುವ ಬಗ್ಗೆ ವರದಿ ನೀಡಿರುವ ಮನಿ ಭಾಸ್ಕರ್ ಪ್ರಕಾರ, ಕನಿಷ್ಠ ವೇತನವನ್ನು ಪ್ರತಿ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಲೇಬೇಕು. ಕನಿಷ್ಠ ವೇತನವನ್ನು ನಿಗದಿಪಡಿಸುವುದು ಎಲ್ಲ ಕಾರ್ಮಿಕರ ಕಾನೂನಾತ್ಮಕ ಹಕ್ಕಾಗಿರುತ್ತದೆ.

Minimum wage to be implemented for every sector, Rs 10 lakh penalty for not adhering to it

ಈ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕನಿಷ್ಠ ವೇತನ ನಿಗದಿಪಡಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುತ್ತದೆ. ಕಾರ್ಮಿಕ ಸಚಿವಾಲಯದ ಪ್ರಕಾರ, ವೇತನದ ವಿಚಾರ, ಕಾರ್ಯಾಚರಣೆ ಸುರಕ್ಷತೆ, ಆರೋಗ್ಯ, ಕೆಲಸ ಮಾಡುವ ಪರಿಸರ ಈ ಬಗ್ಗೆ ಕೇಂದ್ರ ಸಂಪುಟ ಈ ವಾರ ಒಪ್ಪಿಗೆ ಸೂಚಿಸಲಿದೆ. ಆ ನಂತರ ಚರ್ಚೆ ಹಾಗೂ ಒಪ್ಪಿಗೆ ಸೂಚಿಸಲು ಸಂಸತ್ ನಲ್ಲಿ ಮಂಡನೆಯಾಗಲಿದೆ.

English summary
Parliamentary Standing Committee on Labour has recommended making minimum wage compulsory for workers of all sectors. Whether the sector is recognised by the government or not, or if it is organised or unorganised, the minimum wage code must be enforced, the recommendation says, as per reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X