ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮೇಲೆ ಭಾರತದ ಮಿನಿ ಸರ್ಜಿಕಲ್ ಸ್ಟ್ರೈಕ್, ಸೇನಾ ನೆಲೆ ಧ್ವಂಸ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಅಕ್ಟೋಬರ್ 29 : ಪೂಂಛ್ ಮತ್ತು ಝಲ್ಲಾಸ್ ಪ್ರದೇಶದಲ್ಲಿ ಭಾರತದ ನೆಲೆಯ ಮೇಲೆ ಮಾಡಿದ ದಾಳಿಗೆ ಪ್ರತೀಕಾರ ತೀರಿಸಿಕೊಂಡಿರುವ ಭಾರತೀಯ ಸೇನೆ, ಭಾರತ-ಪಾಕ್ ಗಡಿಯಲ್ಲಿರುವ ಪಾಕಿಸ್ತಾನದ ಸೇನೆಯ ಆಡಳಿತಾತ್ಮಕ ಹೆಡ್ ಕ್ವಾರ್ಟರ್ ಮೇಲೆ ಇಂದು ಸೋಮವಾರ ದಾಳಿ ಮಾಡಿದೆ.

ಪಿಒಕೆಯಲ್ಲಿ ಈಗಲೂ ಉಗ್ರರ ನೆಲೆ, ಎಂಥ ಸವಾಲಿಗೂ ಭಾರತೀಯ ಸೇನೆ ಸರ್ವ ಸನ್ನದ್ಧ ಪಿಒಕೆಯಲ್ಲಿ ಈಗಲೂ ಉಗ್ರರ ನೆಲೆ, ಎಂಥ ಸವಾಲಿಗೂ ಭಾರತೀಯ ಸೇನೆ ಸರ್ವ ಸನ್ನದ್ಧ

ಇದನ್ನು ಮಿನಿ ಸರ್ಜಿಕಲ್ ಸ್ಟ್ರೈಕ್ ಎಂದೇ ಕರೆಯಲಾಗಿದ್ದು, ಅಕ್ಟೋಬರ್ 23ರಂದು ಪೂಂಛ್ ಮತ್ತು ಝಲ್ಲಾಸ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಈಮೂಲಕ ಪಾಕಿಸ್ತಾನಿ ಸೇನೆಗೆ ತನ್ನ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದೆ. ದಾಳಿಯ ಕುರಿತು ಗಡಿಯಲ್ಲಿರುವ ಗ್ರಾಮಗಳಿಗೆ ಮೊದಲೇ ಸೂಚನೆ ನೀಡಲಾಗಿತ್ತು.

Mini surgical strikes: India hits Pak army HQ alone LoC

ಪಾಕಿಸ್ತಾನಿ ಸೇನೆ ಅಪ್ರಚೋದಿತ ದಾಳಿಗಳನ್ನು ನಿರಂತರವಾಗಿ ಮಾಡುತ್ತಿದ್ದರೂ ತಾಳಿಕೊಂಡಿದ್ದ ಭಾರತೀಯ ಸೇನೆ ಕಡೆಗೂ ತಕ್ಕ ಉತ್ತರ ನೀಡಲು ನಿರ್ಧರಿಸಿದೆ. ಈ ದಾಳಿ ನಡೆಸುವಾಗ ಪಾಕ್ ಗಡಿಭಾಗದಲ್ಲಿರುವ ಹಜಿರಾದಂಥ ಗ್ರಾಮಗಳ ಮೇಲೆ ದಾಳಿ ಮಾಡಿ ನಾಗರಿಕರಿಗೆ ತೊಂದರೆ ನೀಡದಿರಲು ನಿರ್ಧರಿಸಿತು.

ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ತಕ್ಕ ಪ್ರತ್ಯುತ್ತರ: ಪಾಕ್ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ತಕ್ಕ ಪ್ರತ್ಯುತ್ತರ: ಪಾಕ್

ಎರಡು ವರ್ಷಗಳ ಹಿಂದೆ 2016ರ ಸೆಪ್ಟೆಂಬರ್ ನಲ್ಲಿ, ಭಾರತದ ಉರಿ ಮತ್ತು ನಗ್ರೋಟಾ ಎಂಬಲ್ಲಿ ಪಾಕ್ ಸೇನೆ ನಡೆಸಿದ ಭಾರೀ ದಾಳಿಗೆ ಪ್ರತಿಯಾಗಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಹಲವಾರು ಪಾಕಿಸ್ತಾನಿ ಸೇನೆಯ ನೆಲೆಗಳನ್ನು ಧ್ವಂಸ ಮಾಡಿಹಾಕಿತ್ತು. ಪಾಕ್ ಗಡಿಯೊಳಗೆ ನುಗ್ಗಿ ದುರಹಂಕಾರದಿಂ ಮೆರೆಯುತ್ತಿದ್ದ ಪಾಕ್ ಸೈನಿಕರಿಗೆ ಬುದ್ಧಿ ಕಲಿಸಿತ್ತು.

ಚಿತ್ರ ಸಹಿತ ಮಾಹಿತಿ: ಹೀಗೆ ನಡೆದಿತ್ತು 'ಸರ್ಜಿಕಲ್ ಸ್ಟ್ರೈಕ್‌'ಗೆ ತಯಾರಿ ಚಿತ್ರ ಸಹಿತ ಮಾಹಿತಿ: ಹೀಗೆ ನಡೆದಿತ್ತು 'ಸರ್ಜಿಕಲ್ ಸ್ಟ್ರೈಕ್‌'ಗೆ ತಯಾರಿ

Mini surgical strikes: India hits Pak army HQ alone LoC

ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸದಂತೆ ಪಾಕ್ ಸೇನೆಯ ಮೇಲೆ ಭಾರತ ಒತ್ತಡ ಹೇರುತ್ತಲೇ ಬಂದಿದೆ. ಪೂಂಛ್ ಮತ್ತು ರಾಜೌರಿ ವಲಯದಲ್ಲಿ ತಿರುಗೇಟು ನೀಡಿರುವ ಭಾರತೀಯ ಸೇನೆ, 2017ರಲ್ಲಿ 138 ಪಾಕ್ ಸೈನಿಕರನ್ನು ಬಲಿ ತೆಗೆದುಕೊಂಡಿತ್ತು. 2018ರ ಮೇವರೆಗೆ ಕಳೆದ ವರ್ಷಕ್ಕಿಂತ ಅರ್ಧದಷ್ಟು ಉಗ್ರರು ಹತ್ಯೆಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕದನವಿರಾಮ ಘೋಷಿಸುವಂತೆ ಪಾಕ್ ದುಂಬಾಲು ಬಿದ್ದಿತ್ತು.

English summary
The Indian Army has hit the Pakistan army's administrative headquarters along the Line of Control. This was done in retaliation to Pakistan mortar shelling at Poonch and Jhallas on October 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X