ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾನಾಭಿವೃದ್ಧಿಗೆ ಹಾರಿ ಬಂದ ಪ್ರಣಯ ಪಕ್ಷಿಗಳು

By Srinath
|
Google Oneindia Kannada News

migratory-birds-arrive-in-bhitarkanika-national-park-odisha
ಭುವನೇಶ್ವರ (ಒಡಿಶಾ), ನ. 30: ನಾನಾ ವಿದೇಶಗಳಿಂದ ಹಾರಿ ಬಂದ ನಾನಾ ಜಾತಿಯ 25 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಒರಿಸ್ಸಾ ರಾಜ್ಯದೊಳಕ್ಕೆ ಲಗ್ಗೆ ಹಾಕಿವೆ.

ಹೇಳಿಕೇಳಿ ವಲಸೆ ಪ್ರಾಣಿ ಪಕ್ಷಿಗಳಿಗೆ ಇದು ಸಂತಾನಾಭಿವೃದ್ಧಿ ಸಮಯ. ಹಾಗಾಗಿ ಪ್ರಶಸ್ತ ಸ್ಥಳವನ್ನರಸಿ ಕೇಂದ್ರಪಾಡಾ ಜಿಲ್ಲೆಯಲ್ಲಿರುವ ಬಿಠಾರಕಣಿಕಾ ರಾಷ್ಟ್ರೀಯ ಉದ್ಯಾನದಲ್ಲಿ ಈಗ ವಿದೇಶಿ ಹಕ್ಕಿಗಳು ಬೀಡುಬಿಟ್ಟಿವೆ.

ಸೈಬೀರಿಯಾ, ಇರಾನ್, ಇರಾಕ್, ಅಫಘಾನಿಸ್ತಾನ ಮತ್ತು ನಮ್ಮದೇ ಹಿಮಾಲಯ ಪ್ರಾಂತ್ಯದಿಂದ ಸುದೀರ್ಘ ಪಯಣದಲ್ಲಿ ಪ್ರಣಯಕ್ಕಾಗಿ ಹಕ್ಕಿಗಳು ಹಾರಿಬಂದಿವೆ. ಈ ಪ್ರಣಯ ಪಕ್ಷಿಗಳ ವಿಗಂಹಮನೋಟ/ ಕಲರವವನ್ನು ಕಣ್ತುಂಬಿಸಿಕೊಳ್ಳಲು ಪ್ರವಾಸಿಗರೂ ಸಹ ಪಾರ್ಕಿಗೆ ಎಡತಾಕುತ್ತಿದ್ದಾರೆ.

ಪಕ್ಷಿಗಳ ಜಲವಿಹಾರಕ್ಕೆ ಹೇಳಿ ಮಾಡಿಸಿದ ಜಾಗ: Bhitarkanika National Park ಹಿರಿಯ ಅಧಿಕಾರಿ ಕೇದಾರ್ ಕುಮಾರ್ ಸ್ವೇನ್ ಅವರು ಹೇಳುವಂತೆ ನಾನಾ ಜಾತಿಯ ಮನಮೋಹಕ ಬಾತುಕೋಳಿಗಳು, ಕ್ರೌಂಚ (ಉದ್ದ ಕಾಲಿನ ನೀರು ಹಕ್ಕಿಗಳು) ಇಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿವೆ.

'ವಲಸೆ ಋತು ಆರಂಭವಾಗಿದ್ದು, ಈಗಾಗಲೇ 25 ಸಾವಿರ ಹಕ್ಕಿಗಳು ನ್ಯಾಷನಲ್ ಪಾರ್ಕಿನಲ್ಲಿ ಕಾಲಿಟ್ಟಿವೆ. ಡಿಸೆಂಬರ್ ಮಧ್ಯ ಭಾಗಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಆಗಮಿಸಲಿವೆ. ಪಾರ್ಕಿನ ಸತ್ಯಭಯ ಭಾಗದಲ್ಲಿ ಪಕ್ಷಿಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಫೆಬ್ರವರಿ-ಮಾರ್ಚ್ ವೇಳೆಗೆ ಚಕ್ಕಂದ ಮುಗಿಸುವ ಪಕ್ಷಿಗಳು ಪುಟ್ಟ ಮರಿಗಳ ಜತೆ ತಮ್ಮ ದೂರದೂರುಗಳಿಗೆ ವಾಪಸಾಗುತ್ತವೆ' ಎಂದು ಅವರು ತಿಳಿಸಿದ್ದಾರೆ.

'ಪಕ್ಷಿಗಳು ಆಹ್ಲಾದಕರ ವಾತಾವರಣ ಕಲ್ಪಿಸಲು ಮತ್ತು ಅವುಗಳ ಸಂರಕ್ಷಣೆಗಾಗಿ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ 15 ವಿಶೇಷ ತಂಡಗಳನ್ನು ರಚಿಸಲಾಗಿದೆ. ಹಕ್ಕಿಗಳ ವಾಸಕ್ಕೆ ಯಾವುದೇ ಧಕ್ಕೆಯೊದಗದಂತೆ ಕಣ್ಗಾವಲು ಹಾಕಲಾಗಿದೆ' ಎಂದು ಕೇದಾರ್ ಕುಮಾರ್ ವಿವರಿಸಿದ್ದಾರೆ. ಭವನೇಶ್ವರದಿಂದ 170 ಕಿಮೀ ದೂರದಲ್ಲಿರುವ Bhitarkanika National Park ವನ್ಯಜೀವಿ ಧಾಮವೂ ಆಗಿದೆ. ಇಲ್ಲಿನ ಸಮುದ್ರ ಆಮೆ (Olive Ridley) ಧಾಮವು ಇಡೀ ವಿಶ್ವದ ಗಮನ ಸೆಳೆದಿದೆ. ( ಚಿತ್ರ ಕೃಪೆ )

English summary
Migratory birds arrive in Bhitarkanika National Park in Odisha. More than 25,000 migratory birds have already arrived. The birds started arriving in the middle of this month and the number will gradually increase by the second week of December. Every year, more than a million migratory birds from places as far as Siberia and Iraq flock to various sites of the state in October-November and return in February-March, often with their fledelings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X