ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ :ದೇಶದ ಶೇ.42ರಷ್ಟು ವಲಸೆ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 6: ಸಮೀಕ್ಷೆಯೊಂದರ ಪ್ರಕಾರ 3,196 ವಲಸೆ ಕಟ್ಟಡ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ.

Recommended Video

ಇನ್ನೂ ಅಬ್ಬರಿಸಲಿದೆ ಕೊರೊನಾ!!ಕೋಡಿ ಶ್ರೀಗಳು ಕೊರೊನಾ ಬಗ್ಗೆ ನುಡಿದ ಭವಿಷ್ಯ ಇಲ್ಲಿದೆ

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ ಏಪ್ರಿಲ್ 14ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿತ್ತು. ಇನ್ನೂ ಲಾಕ್‌ಡೌನ್ ಮುಂದುವರೆದರೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಲಿದೆ.

ಕಟ್ಟಡ ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ , ಅವರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಇದುವರೆಗೆ ಶೇ.42ರಷ್ಟು ವಲಸಿಗ ಕಟ್ಟಡ ಕಾರ್ಮಿಕರಿಗೆ ಪಡಿತರ ಸಿಕ್ಕಿಲ್ಲ.

Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!

ಮಾರ್ಚ್ 24 ರಂದು ಲೇಬರ್ ಆಂಡ್ ಎಂಪ್ಲಾಯ್‌ಮೆಂಟ್ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ನಿರ್ದೇಶನವೊಂದನ್ನು ನೀಡಿತ್ತು.

ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಅಲ್ಲಿಂದ ಕಾರ್ಮಿಕರು ಹಣವನ್ನು ಪಡೆಯಬೇಕು.

ಆದರೆ ಶೇ.94 ರಷ್ಟು ಮಂದಿ ಕಾರ್ಮಿಕರು ತಮ್ಮ ಗುರುತಿನ ಚೀಟಿ ಹೊಂದಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ.

ಬೇಕರಿ ತೆರೆಯಲು ಕೇಂದ್ರದ ಅನುಮತಿ; ತೆರುವಾಗುತ್ತಾ ಲಾಕ್‌ಡೌನ್?ಬೇಕರಿ ತೆರೆಯಲು ಕೇಂದ್ರದ ಅನುಮತಿ; ತೆರುವಾಗುತ್ತಾ ಲಾಕ್‌ಡೌನ್?

ಶೀಘ್ರವೇ ವಲಸೆ ಕಾರ್ಮಿಕರಿಗೆ ಪಡಿತರವನ್ನು ವಿತರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಅದರಲ್ಲಿ ಶೇ.55ರಷ್ಟು ಮಂದಿ ಕಾರ್ಮಿಕರು ದಿನಕ್ಕೆ 200-400 ರೂ ಹಣವನ್ನು ಪಡೆಯುವವರಿದ್ದಾರೆ.
ಅದರಲ್ಲಿ ಕೌಶಲ್ಯವಿರುವ ಕಾರ್ಮಿಕರು ದೆಹಲಿಯಲ್ಲಿ ನಿತ್ಯ 600 ರೂ ಗಳಿಸುತ್ತಾರೆ.

ಶೇ.92.5 ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ

ಶೇ.92.5 ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ

ಶೇ.92.5ರಷ್ಟು ಮಂದಿ ಕಟ್ಟಡ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸುಮಾರು ಮೂರ್ನಾಲ್ಕು ವಾರಗಳಿಂದ ಅವರಿಗೆ ದುಡಿಮೆ ಇಲ್ಲ, ತಿನ್ನಲು ಆಹಾರವೂ ಇಲ್ಲ. ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆ

ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆ

ಜನ್ ಸಹಸ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಉತ್ತರ ಹಾಗೂ ದಕ್ಷಿಣ ಭಾರತದ ಕಟ್ಟಡ ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಶೇ.42ರಷ್ಟು ಕಾರ್ಮಿಕರಿಗೆ ಲಾಕ್‌ಡೌನ್ ಆರಂಭದಿಂದ ಒಂದು ದಿನವೂ ಪಡಿತರ ದೊರೆತಿಲ್ಲ ಎಂದು ತಿಳಿದುಬಂದಿದೆ.

ಕೊರೊನಾ ಬಗ್ಗೆ ಭಾರತೀಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಏಮ್ಸ್ ನಿರ್ದೇಶಕ!ಕೊರೊನಾ ಬಗ್ಗೆ ಭಾರತೀಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಏಮ್ಸ್ ನಿರ್ದೇಶಕ!

ನಮ್ಮ ಕುಟುಂಬದವರ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿಲ್ಲ

ನಮ್ಮ ಕುಟುಂಬದವರ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿಲ್ಲ

ಲಾಕ್‌ಡೌನ್ 21 ವಾರಗಳ ಕಾಲ ವಿಸ್ತರಣೆಗೊಳ್ಳುವ ಮೊದಲು ಒಂದು ವಾರ ಕೂಡ ನಮ್ಮ ಕುಟುಂಬದವರಿಗೆ ಊಟ ಒದಗಿಸಲು ನಮ್ಮಿಂದ ಸಾಧ್ಯವಾಗಿಲ್ಲ ಶೇ.66 ರಷ್ಟು ಮಂದಿ ಕಾರ್ಮಿಕರು ಹೇಳಿಕೊಂಡಿದ್ದಾರೆ.

ಊಟ, ಆಹಾರ, ಹಣವಿಲ್ಲದೆ ನಗರದಲ್ಲಿದ್ದಾರೆ ಸಾಕಷ್ಟು ಮಂದಿ

ಊಟ, ಆಹಾರ, ಹಣವಿಲ್ಲದೆ ನಗರದಲ್ಲಿದ್ದಾರೆ ಸಾಕಷ್ಟು ಮಂದಿ

ಆಹಾರ, ನೀರು , ಹಣ ಯಾವುದೂ ಇಲ್ಲದ ಕಾರಣ ಸಾಕಷ್ಟು ಮಂದಿ ಇನ್ನೂ ನಗರಗಳಲ್ಲೇ ಉಳಿದುಕೊಂಡಿದ್ದಾರೆ. ಇನ್ನೂ ಕೆಲವು ಮಂದಿ ತಮ್ಮ ಊರುಗಳಿಗೆ ತೆರಳಿದ್ದು ಅಲ್ಲಿ ಇನ್ನೊಂದು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಆದಾಯವೂ ಇಲ್ಲ ಕೆಲಸವೂ ಇಲ್ಲ ಏನು ಮಾಡುವುದು ಎಂದು ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಸಾಲ ತೀರಿಸಲು ಪರದಾಟ

ಸಾಲ ತೀರಿಸಲು ಪರದಾಟ

ಸರ್ಕಾರವು ಮೂರು ತಿಂಗಳು ಬ್ಯಾಂಕ್‌ಗಳ ಇಎಂಐ ಕಡಿತ ಮಾಡುವುದರೊಂದಿಗೆ ಸಾಕಷ್ಟು ಸಹಾಯವನ್ನು ಜನರಿಗೆ ಮಾಡುತ್ತಿದೆ. ಆದರೆ ನಾವು ತೆಗೆದುಕೊಂಡಿರುವ ಕೈಸಾಲ ಏನು ಮಾಡಬೇಕು. ಅವುಗಳನ್ನು ಯಾರು ತೀರಿಸುತ್ತಾರೆ ಎಂದು ಶೇ.31ರಷ್ಟು ಕಾರ್ಮಿಕರು ಪ್ರಶ್ನೆ ಮಾಡಿದ್ದಾರೆ. ಶೇ.79ರಷ್ಟು ಕಾರ್ಮಿಕರಿಗೆ ಸಾಲವನ್ನು ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ.

English summary
Survey of migrant workers shows 42% have no ration left for the day, let alone duration of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X