ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಗ್-29ಕೆ ಪತನ: ಅವಶೇಷ ಪತ್ತೆ ಬೆನ್ನಲ್ಲೇ ಶೋಧಕಾರ್ಯ ಚುರುಕು

|
Google Oneindia Kannada News

ನವದೆಹಲಿ, ನವೆಂಬರ್.29: ಅರಬ್ಬಿ ಸಮುದ್ರದಲ್ಲಿ ಮಿಗ್-29ಕೆ ಯುದ್ಧವಿಮಾನವು ನವೆಂಬರ್.26ರಂದು ಪತನಗೊಂಡಿದ್ದು, ನಾಪತ್ತೆಯಾಗಿರುವ ಪೈಲಟ್ ಮತ್ತು ತರಬೇತುದಾರನ ಪತ್ತೆಗೆ ಭಾರತೀಯ ನೌಕಾಪಡೆ ತೀವ್ರ ಶೋಧ ನಡೆಸುತ್ತಿದೆ.
ಮಿಗ್-29 ಯುದ್ಧವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳ ಪೈಕಿ ಒಬ್ಬ ಕಮಾಂಡರ್ ನಿಶಾಂತ್ ಸಿಂಗ್ ಅವರ ಪತ್ತೆ ಮಾಡುವುದಕ್ಕೆ ಗೋವಾ ಕರಾವಳಿಯಲ್ಲಿ ನೌಕಾಪಡೆ ಹಡಗು ಮತ್ತು ವಿಮಾನ ಬಳಸಿಕೊಂಡು ಶೋಧ ನಡೆಸಲಾಗುತ್ತಿದೆ.

ಮಿಗ್ 29ಕೆ ವಿಮಾನ ಪತನ; ಪೈಲಟ್ ಗಾಗಿ ತೀವ್ರ ಶೋಧ ಕಾರ್ಯಮಿಗ್ 29ಕೆ ವಿಮಾನ ಪತನ; ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ

ಪತನಗೊಂಡ ವಿಮಾನದ ಲ್ಯಾಿಂಡಿಂಗ್ ಗೇರ್, ಟರ್ಬೋ ಚಾರ್ಜರ್, ಇಂಧನದ ಟ್ಯಾಂಕರ್ ಮತ್ತು ವಿಂಗ್ ಎಂಜಿನ್ ಸೇರಿದಂತೆ ವಿಮಾನದ ಅವಶೇಷಗಳು ಭಾನುವಾರ ಪತ್ತೆಯಾಗಿವೆ. ಭಾನುವಾರ ವಿಮಾನದ ಅವಶೇಷಗಳು ಪತ್ತೆಯಾಗುತ್ತಿದ್ದಂತೆ 14 ವಿಮಾನಗಳು ಮತ್ತು ಹೆಚ್ಚುವರಿ ನೌಕಪಡೆಗಳ ಸಿಬ್ಬಂದಿಯು ಕರಾವಳಿ ತೀರದಲ್ಲಿ ಶೋಧಕಾರ್ಯವನ್ನು ಚುರುಕುಗೊಳಿಸಿದೆ. ಕರಾವಳಿ ತೀರದ ಗ್ರಾಮಗಳು ಮತ್ತು ಮೀನುಗಾರಿಕೆ ನಡೆಸುವ ಸ್ಥಳಗಳಲ್ಲಿಯೂ ಕೂಡಾ ಶೋಧ ನಡೆಸಲಾಗುತ್ತಿದೆ.

MiG-29K Crash: Indian Navy Intensifies Efforts To Rescue Missing Pilot And Trainer

ಮಿಗ್-29ಕೆ ಪತನದ ಘಟನೆ ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಪರಿಣಾಮ ಅವಘಡ ಸಂಭವಿಸಿದೆ ಎಂಬುದನ್ನು ಪ್ರಾಥಮಿಕ ಹಂತದ ತನಿಖೆಯಲ್ಲಿ ವಾಯುಪಡೆ ಸ್ಪಷ್ಟಪಡಿಸಿದೆ.
ಮೇ 8ರಂದು ಪಂಜಾಬ್ ನ ಜಲಂಧರ್ ನಲ್ಲಿಯೂ ಮಿಗ್-29 ಪತನಗೊಂಡಿತ್ತು. ಭಾರತೀಯ ನೌಕಾಪಡೆಯಲ್ಲಿ 40ಕ್ಕೂ ಅಧಿಕ ಮಿಗ್-29 ಯುದ್ಧ ವಿಮಾನಗಳಿದ್ದು, ಇವುಗಳು ಗೋವಾ ಹಾಗೂ ಐಎನ್ ‌ಎಸ್ ವಿಕ್ರಮಾದಿತ್ಯದ ಮೂಲಕ ಕಾರ್ಯಾಚರಿಸುತ್ತಿವೆ.

English summary
MiG-29K Crash: Indian Navy Intensifies Efforts To Rescue Missing Pilot And Trainer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X