ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಗ್ -21 ವಿಮಾನ ಪತನ, ಪೈಲೆಟ್ ಸಾವು

By Gururaj
|
Google Oneindia Kannada News

ನವದೆಹಲಿ, ಜುಲೈ 18 : ಪಂಜಾಬ್‌ನಿಂದ ಹೊರಟಿದ್ದ ಮಿಗ್ -21 ವಿಮಾನ ಪತನಗೊಂಡಿದೆ. ವಿಮಾನದ ಪೈಲೆಟ್ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ರಕ್ಷಣಾ ತಂಡ, ಪೊಲೀಸರು ಸ್ಥಳಕ್ಕೆ ಧಾವಿಸಿವೆ.

ಪಂಜಾಬ್‌ನ ಪಠಾಣ್‌ ಕೋಟ್‌ನಿಂದ ಹೊರಟಿದ್ದ ಮಿಗ್ -21 ವಿಮಾನ ಹಿಮಾಚಲ ಪ್ರದೇಶದ ಕಂಗಾರಾ ಜಿಲ್ಲೆಯ ಬಳಿ ಬುಧವಾರ ಮಧ್ಯಾಹ್ನ ಪತನಗೊಂಡಿದೆ.

ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಅವನಿ ಚತುರ್ವೇದಿ

MiG-21 Indian aircraft crashes in Himachal Pradesh

ಯುದ್ಧ ವಿಮಾನ ಪತನಗೊಂಡ ಬಳಿಕ ಪೈಲೆಟ್ ಸಾವನ್ನಪ್ಪಿದ್ದಾರೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿವೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅವಶೇಷಗಳನ್ನು ಸಂಗ್ರಹಿಸುತ್ತಿವೆ.

ಯುದ್ಧ ವಿಮಾನ ಪತನವಾದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಪೈಲೆಟ್ ಸಜೀವವಾಗಿ ದಹನವಾಗಿರಬಹುದು ಎಂದು ಶಂಕಿಸಲಾಗಿದೆ. ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಮಿಗ್ -21 ಭಾರತೀಯ ವಾಯುಪಡೆಯ ಯುದ್ಧ ವಿಮಾನವಾಗಿದೆ. ಬಹಳ ಹಿಂದಿನಿಂದ ವಾಯುಪಡೆಯಲ್ಲಿ ಈ ವಿಮಾನವನ್ನು ಉಪಯೋಗಿಸಲಾಗುತ್ತಿದೆ. ಹಿಂದೆಯೂ ಹಲವು ಮಿಗ್ -21 ವಿಮಾನಗಳು ಪತನಗೊಂಡಿದ್ದವು.

English summary
MiG-21 Indian aircraft coming from Punjab's Pathankot crashes in Himachal Pradesh's Kangra district. Pilot is missing, Rescue team visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X